ಮೊಹಮ್ಮದ್ ಅಜರುದ್ದೀನ್ ಮೂರನೇ ಸಲ ಮದ್ವೆ ಆಗಿಲ್ವಾ?
ಹೈದರಾಬಾದ್, ಡಿ. 20: ಟೀಂ ಇಂಡಿಯಾದ ಮಾಜಿ ನಾಯಕ ಮೊಹಮ್ಮದ್ ಅಜರುದ್ದೀನ್ ಮತ್ತೊಮ್ಮೆ ಮದುವೆ ವಿಷಯಕ್ಕೆ ಸುದ್ದಿಯಲ್ಲಿದ್ದಾರೆ. ಅಜರುದ್ದೀನ್ ಅವರು ಮೂರನೇ ಬಾರಿಗೆ ಮದುವೆಯಾಗಿದ್ದಾರೆ ಎಂಬ ಸುದ್ದಿ ಹಬ್ಬಿದೆ. ಆದರೆ, ಇದೆಲ್ಲ ಸುಳ್ಳು ಎಂದು ಅಜರುದ್ದೀನ್ ಸ್ಪಷ್ಟಪಡಿಸಿದ್ದಾರೆ.
'ನನ್ನ ಮೂರನೇ ಮದುವೆ ಬಗ್ಗೆ ಬಂದಿರುವ ಸುದ್ದಿ ಸುಳ್ಳು. ಸುದ್ದಿ ಪ್ರಕಟಿಸುವ ಮುನ್ನ ಸರಿಯಾಗಿ ಪರಿಶೀಲಿಸಿ' ಎಂದು ಅಜರುದ್ದೀನ್ ಟ್ವೀಟ್ ಮಾಡಿದ್ದಾರೆ.
ಅಮೆರಿಕ ಮೂಲದ ಗೆಳತಿ ಶನೊನ್ ಮೇರಿ ಜೊತೆ ಅಜರುದ್ದೀನ್ ಅವರು ಗುಟ್ಟಾಗಿ ಮದುವೆಯಾಗಿದ್ದಾರೆ ಎಂದು ಮಹಾರಾಷ್ಟ್ರ ಟೈಮ್ಸ್ ವರದಿ ಮಾಡಿತ್ತು.

ಅಜರುದ್ದೀನ್ ಅವರು ತಮ್ಮ ಕಾರು ಚಾಲಕ ಜಾನ್ ಮೊಹಮ್ಮದ್ ಅವರ ಮನೆಗೆ ಶನಿವಾರ ಬಂದಿದ್ದರು. ಈ ಸಂದರ್ಭದಲ್ಲಿ ಅವರ ಜೊತೆಗೆ ಗೆಳತಿ ಶನೊನ್ ಕೂಡಾ ಇದ್ದರು. ಎಲ್ಲರಿಗೂ ಈಕೆ ನನ್ನ ಪತ್ನಿ ಎಂದು ಪರಿಚಯ ಮಾಡಿಕೊಟ್ಟರು ಎನ್ನಲಾಗಿದೆ. ಇತ್ತೀಚೆಗೆ ಜಾನ್ ಮೊಹಮ್ಮದ್ ನಿಧನರಾಗಿದ್ದು, ಅವರ ಕುಟುಂಬಕ್ಕೆ ಸಾಂತ್ವನ ಹೇಳಲು ಅಜರುದ್ದೀನ್ ಬಂದಿದ್ದರು.
52 ವರ್ಷ ವಯಸ್ಸಿನ ಅಜರುದ್ದೀನ್ ಅವರು ಈ ಹಿಂದೆ ಐಪಿಟಿಎಲ್ ಟೆನಿಸ್ ಟೂರ್ನಿಗೂ ಕೂಡಾ ಶನೊನ್ ಅವರನ್ನು ಜೊತೆಗೆ ಕರೆ ತಂದಿದ್ದರು.
ಭಾರತ ಪರ 99 ಟೆಸ್ಟ್ ಹಾಗೂ 334 ಏಕದಿನ ಕ್ರಿಕೆಟ್ ಪಂದ್ಯವಾಡಿರುವ ಅಜರುದ್ದೀನ್ ಅವರು ಮೊದಲಿಗೆ ನೌರೀನ್ ಅವರನ್ನು ಮದುವೆಯಾಗಿದ್ದರು. ಇಬ್ಬರು ಮಕ್ಕಳನ್ನು ಪಡೆದಿದ್ದರು. ನಂತರ ವಿಚ್ಛೇದನ ನೀಡಿದ್ದರು. ನಂತರ ರೂಪದರ್ಶಿ ಕಮ್ ನಟೀ ಸಂಗೀತಾ ಬಿಜಲಾನಿ ಅವರನ್ನು ಮದುವೆಯಾದರು. 2010ರಲ್ಲಿ ಸಂಗೀತಾಗೂ ವಿಚ್ಛೇದನ ನೀಡಿದರು.
2009ರಲ್ಲಿ ರಾಜಕೀಯ ರಂಗಕ್ಕೆ ಇಳಿದ ಹೈದರಾಬಾದ್ ಮೂಲದ ಅಜರುದ್ದೀನ್ ಅವರು ಉತ್ತರಪ್ರದೇಶದ ಮೊರಾದಾಬಾದಿನಿಂದ ಲೋಕಸಭೆಗೆ ಆಯ್ಕೆಯಾದರು. ಆದರೆ, ಕಳೆದ ಚುನಾವಣೆಯಲ್ಲಿ ರಾಜಸ್ಥಾನದ ಮಾಧವಪುರ ಕ್ಷೇತ್ರದಲ್ಲಿ ಸೋಲು ಕಂಡರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications