Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ತನ್ನಲ್ಲಿರುವ ಪ್ರತಿಭೆಯನ್ನು ಈತ ವ್ಯರ್ಥಗೊಳಿಸುತ್ತಿದ್ದಾನೆ: ಯುವ ಆಟಗಾರನ ಬಗ್ಗೆ ಮೊಹಮ್ಮದ್ ಕೈಫ್ ಹೇಳಿಕೆ

Mohammad Kaif disappointed on Sanju Samson said hasnt done justice to his talent and skill

ಮಾಜಿ ಕ್ರಿಕೆಟಿಗ ಮೊಹಮ್ಮದ್ ಕೈಫ್ ಭಾರತದ ಯುವ ಆಟಗಾರನ ಬಗ್ಗೆ ಪ್ರತಿಕ್ರಿಯೆ ನೀಡಿದ್ದು ಈ ಆಟಗಾರನ ಬಳಿ ಸಾಕಷ್ಟು ಪ್ರತಿಭೆ ಹಾಗೂ ಕೌಶಲ್ಯವಿದ್ದರೂ ಅದು ವ್ಯರ್ಥವಾಗುತ್ತಿದೆ ಎಂದಿದ್ದಾರೆ. ತನ್ನಲ್ಲಿರುವ ಪ್ರತಿಭೆಗೆ ಈ ಆಟಗಾರ ನ್ಯಾಯವನ್ನು ಒದಗಿಸುತ್ತಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

ಮಾಜಿ ಕ್ರಿಕೆಟಿಗ ಮೊಹಮ್ಮದ್ ಕೈಫ್ ಹೀಗೆ ಪ್ರತಿಕ್ರಿಯೆ ನೀಡಿದ್ದು ಯುವ ಕ್ರಿಕೆಟಿಗ ಸಂಜು ಸ್ಯಾಮ್ಸನ್ ಬಗ್ಗೆ. ಭಾರತ ಹಾಗೂ ರಾಜಸ್ಥಾನ್ ರಾಯಲ್ಸ್ ಎರಡು ತಂಡಗಳಿಗೂ ಸಂಜು ಸ್ಯಾಮ್ಸನ್ ನ್ಯಾಯ ಸಲ್ಲಿಸಿಲ್ಲ ಎಂದಿದ್ದಾರೆ. ಮುಂದುವರಿದು ಮಾತನಾಡಿದ ಅವರು ಸಂಜು ಸ್ಯಾಮ್ಸನ್ ಮೂರು ಅಥವಾ ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿಯುವ ಬದಲು ಸ್ವಲ್ಪ ಕೆಳ ಕ್ರಮಾಂಕದಲ್ಲಿ ಕಣಕ್ಕಿಳಿದು ಫಿನಿಷರ್ ಆಗಿ ಜವಾಬ್ಧಾರಿ ವಹಿಸಿಕೊಳ್ಳಬೇಕು ಎಂದಿದ್ದಾರೆ.

ಭಾರತ ತಂಡಲ್ಲಿ ಮಿಂಚಿಲ್ಲ ಸಂಜು

ಭಾರತ ತಂಡಲ್ಲಿ ಮಿಂಚಿಲ್ಲ ಸಂಜು

ಸಂಜು ಸ್ಯಾಮ್ಸನ್ ಭಾರತ ಸೀಮಿತ ಓವರ್‌ಗಳ ತಂಡದಲ್ಲಿ ಬ್ಯಾಟಿಂಗ್ ವಿಭಾಗದ ಹಲವು ಆಯ್ಕೆಗಳಲ್ಲಿ ಒಬ್ಬರಾಗಿದ್ದಾರೆ. 27ರ ಹರೆಯದ ಸಂಜು ಸ್ಯಾಮ್ಸನ್ ಐಪಿಎಲ್‌ನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವನ್ನು ಮುನ್ನಡೆಸುತ್ತಿದ್ದು ಕಳೆದ ಆವೃತ್ತಿಯಲ್ಲಿ ರನ್ನರ್‌ಅಪ್ ಸ್ಥಾನವನ್ನು ಪಡೆದುಕೊಂಡಿದ್ದಾರೆ.ಇನ್ನು ಸಂಜು ಸ್ಯಾಮ್ಸನ್ ಭಾರತ ತಂಡಲ್ಲಿ 11 ಪಂದ್ಯಗಳಲ್ಲಿ ಆಡುವ ಅವಕಾಶವನ್ನು ಪಡೆದುಕೊಂಡಿದ್ದಾರೆ. ಆದರೆ ಅವರ ಬ್ಯಾಟ್‌ನಿಮದ ಸಿಡಿದಿದ್ದು 174 ರನ್ ಮಾತ್ರ. ಅವರ ಸರಾಸರಿ 14.5 ಆಗಿದ್ದರೆ ಅತಿ ಹೆಚ್ಚಿನ ಸ್ಕೋರ್ 39 ಆಗಿದೆ. 121.68ರ ಸ್ಟ್ರೈಕ್‌ರೇಟ್‌ನಲ್ಲಿ ಸಂಜು ಬ್ಯಾಟ್ ಬೀಸಿದ್ದಾರೆ. ಆದರೆ ಇದು ಸಂಜು ಸ್ಯಾಮ್ಸನ್ ಅವರ ಸಾಮರ್ಥ್ಯಕ್ಕೆ ತಕ್ಕದಾದ ಪ್ರದರ್ಶನ ಖಂಡಿತಾ ಅಲ್ಲ.

ಪ್ರತಿಭೆಗೆ ನ್ಯಾಯ ಒದಗಿಸಿಲ್ಲ

ಪ್ರತಿಭೆಗೆ ನ್ಯಾಯ ಒದಗಿಸಿಲ್ಲ

ಸಂಜು ಸ್ಯಾಮ್ಸನ್ ತಮ್ಮಲ್ಲಿರುವ ಪ್ರತಿಭೆಗೆ ನ್ಯಾಯವನ್ನು ಒದಗಿಸಿಲ್ಲ. ಆತ ಐಪಿಎಲ್‌ನಲ್ಲಿ ಉತ್ತಮವಾಗಿ ಆಡಿದ್ದಾರೆ ಹಾಗೂ ಉತ್ತಮ ಆರಂಭವನ್ನು ಪಡೆದಿದ್ದಾರೆ. ಆದರೆ ಅಂತಾ ಅದ್ಭುತ ಕೌಶಲ್ಯವನ್ನು ಹೊಂದುದ್ದರೂ ಸ್ಥಿರ ಪ್ರದರ್ಶನ ನಿಡಲು ಅವರಿಂದ ಸಾಧ್ಯವಾಗಿಲ್ಲ. ಆತ ತನ್ನ ಅತ್ಯುತ್ತಮ ದಿನದಂದು ಏಕಾಂಗಿಯಾಗಿ ಭಾರತಕ್ಕೆ ಜಯವನ್ನು ಒದಗಿಸಬಲ್ಲ ಆಟಗಾರ" ಎಂದು ಭಾರತದ ಮಾಜಿ ಕ್ರಿಕೆಟಿಗ ಮೊಹಮ್ಮದ್ ಕೈಫ್ ಪ್ರತಿಕ್ರಿಯೆ ನೀಡಿದ್ದಾರೆ.

ಕೆಳ ಕ್ರಮಾಂಕದಲ್ಲಿ ಕಣಕ್ಕಿಳಿಯಲಿ

ಕೆಳ ಕ್ರಮಾಂಕದಲ್ಲಿ ಕಣಕ್ಕಿಳಿಯಲಿ

ಇನ್ನು ಈ ಸಂದರ್ಭದಲ್ಲಿ ಸಂಜು ಸ್ಯಾಮ್ಸನ್‌ಗೆ ಮೊಹಮ್ಮದ್ ಕೈಫ್ ಪ್ರಮುಖ ಸಲಹೆಯೊಂದನ್ನು ಕೂಡ ನೀಡಿದ್ದಾರೆ. ಸ್ಯಾಮ್ಸನ್ ಸ್ವಲ್ಪ ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್ ನಡೆಸಬಹುದು ಎಂದು ಸಲಹೆ ನೀಡಿದ್ದಾರೆ. "ಸಂಜು ಸ್ಯಾಮ್ಸನ್ ಭಾರತ ಹಾಗೂ ರಾಜಸ್ಥಾನ್ ರಾಯಲ್ಸ್ ತಂಡದ ಪರವಾಗಿ ಭವಿಷ್ಯದಲ್ಲಿ ಕೆಳ ಕ್ರಮಾಂಕದಲ್ಲಿ ಕಣಕ್ಕಿಳಿದು ಆಡಬಹುದು. ತಮ್ಮಲ್ಲಿ ಕೌಶಲ್ಯವಿದ್ದರೂ ಅದಕ್ಕೆ ಅವರು ಬ್ಯಾಯ ಒದಗಿಸಿಲ್ಲ. ಅವರಿಗೆ ಭಾರತದ ಪರವಾಗಿ ಆಡುವ ಅವಕಾಶ ದೊರೆತಿದ್ದರೂ ಅದನ್ನು ಎರಡೂ ಕೈಯಿಂದ ಬಾಚಿಕೊಳ್ಳುವಲ್ಲಿ ವಿಫಲವಾಗಿದ್ದಾರೆ. ಬಹುಶಃ ಈಗ ಅವರು ಮತ್ತೊಮ್ಮೆ ಅವಕಾಶ ದೊರೆತರೆ ಅವಕಾಶವನ್ನು ಕಳೆದುಕೊಳ್ಳಲಾರರು" ಎಂದಿದ್ದಾರೆ ಮೊಹಮ್ಮದ್ ಕೈಫ್.

Story first published: Wednesday, June 22, 2022, 10:56 [IST]
Other articles published on Jun 22, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+