Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಮುಖ್ಯ ವಿಕೆಟ್ ಕೀಪರ್ ಆಗಿ ರಾಹುಲ್ ಬೇಡ ಎಂದ ಮೊಹಮದ್ ಕೈಫ್

Mohammad Kaif Explains Why Kl Rahul Should Not Be Used As Main Wicket-keeper

ಧೋನಿ ಕ್ರಿಕೆಟ್‌ನಿಂದ ದೂರವಾದ ಬಳಿಕ ಟೀಮ್ ಇಂಡಿಯಾ ವಿಕೆಟ್ ಕೀಪರ್ ಗೊಂದಲ ಕಡಿಮೆಯಾಗಿಲ್ಲ. ರಿಷಭ್ ಪಂತ್ ಗೆ ಸಾಕಷ್ಟು ಅವಕಾಶಗಳ ನಂತರವೂ ವೈಫಲ್ಯ ಕಂಡ ಹಿನ್ನೆಲೆಯಲ್ಲಿ ಅಚಾನಕ್ ಆಗಿ ಸಿಕ್ಕ ಅವಕಾಶದಲ್ಲಿವಿಕೆಟ್ ಕೀಪರ್ ಆಗಿ ರಾಹುಲ್ ಮಿಂಚಿದರು. ಆ ಬಳಿಕ ರಾಹುಲ್ ಎರಡು ಸರಣಿಗೆ ಮುಖ್ಯ ವಿಕೆಟ್ ಕೀಪರ್ ಆಗಿ ಉತ್ತಮ ಪ್ರದರ್ಶನವನ್ನು ನೀಡಿದ್ದಾರೆ.

ಆದರೆ ಟೀಮ್ ಇಂಡಿಯಾದ ಮಾಜಿ ಆಟಗಾರ ಮೊಹಮ್ಮದ್ ಕೈಫ್ ಮುಖ್ಯ ವಿಕೆಟ್ ಕೀಪರ್ ಆಗಿ ಕೆಎಲ್ ರಾಹುಲ್‌ಗೆ ಭಡ್ತಿ ನೀಡುವುದು ಸರಿಯಲ್ಲ ಎಂದಿದ್ದಾರೆ. ರಾಹುಲ್ ಬ್ಯಾಕಪ್ ವಿಕೆಟ್ ಕೀಪರ್ ಆಗಿರಲಿ. ಮುಖ್ಯ ಕೀಪರ್ ಗಾಯಗೊಂಡಂತಾ ಅನಿವಾರ್ಯ ಸಂದರ್ಭಗಳಲ್ಲಿ ಮಾತ್ರವೇ ರಾಹುಲ್ ಅವರನ್ನು ಕೀಪರ್ ಆಗಿ ಬಳಸಿಕೊಳ್ಳುವುದು ಉತ್ತಮ ಎಂದಿದ್ದಾರೆ.

ರಾಹುಲ್ ಭಾರತ ತಂಡದ ಮುಖ್ಯ ಬ್ಯಾಟ್ಸ್‌ಮನ್. ಪೂರ್ಣಕಾಲಿಕ ವಿಕೆಟ್ ಕೀಪಿಂಗ್ ಜವಾಬ್ಧಾರಿ ವಹಿಸಿಕೊಂಡರೆ ಆಗ ಗಾಯಗೊಳ್ಳುವ ಪ್ರಸಂಗಗಳು ಬರಬಹುದು. ಇದು ಬ್ಯಾಟಿಂಗ್ ಮೇಲೆ ಪರಿಣಾಮ ಬೀರುವುದರಿಂದ ಅರೆಕಾಲಿಕ ಕೀಪರ್ ಆಗಿಯೇ ರಾಹುಲ್ ಮುಂದುವರಿಯಲಿ ಎಂದು ಕೈಫ್ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಸಧ್ಯದ ಪರಿಸ್ಥಿತಿಯಲ್ಲಿ ಎಲ್ಲರೂ ರಾಹುಲ್ ಪೂರ್ಣ ಪ್ರಮಾಣದ ಕೀಪರ್ ಆಗಿ ಮುಂದುವರಿಯಲಿ ಎಂದು ಬಯಸುತ್ತಿದ್ದಾರೆ. ಆದರೆ ಅಂತಾ ಜವಾಬ್ಧಾರಿ ಆತನಿಗೆ ನೀಡಿದರೆ ಆತನ ವರ್ಕ್‌ಲೋಡ್ ಹೆಚ್ಚಾಗಲಿದೆ. ಇದು ಬ್ಯಾಟಿಂಗ್ ಮೇಲೆ ಸಹಜವಾಗಿಯೇ ಪರಿಣಾಮ ಬೀರಲಿದ ಎಂದಿದ್ದಾರೆ ಕೈಫ್.

ಇದೇ ಸಂದರ್ಭದಲ್ಲಿ ವಿಶ್ವಕಪ್‌ಗೆ ಧೋನಿ ಆಯ್ಕೆ ವಿಚಾರವಾಗಿಯೂ ಕೈಫ್ ಮಾತನಾಡಿದ್ದಾರೆ. ಒಂದು ವೇಳೆ ವಿಶ್ವಕಪ್‌ನಲ್ಲಿ ಧೋನಿಗೆ ಅವಕಾಶ ದೊರೆಯದೇ ಹೋದರೆ ಅದು ಆತನಿಗೆ ಮಾಡುವ ಅನ್ಯಾಯವಾಗುತ್ತದೆ ಎಂದು ಮೊಹಮ್ಮದ್ ಕೈಫ್ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

Story first published: Thursday, April 16, 2020, 18:09 [IST]
Other articles published on Apr 16, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+