For Quick Alerts
ALLOW NOTIFICATIONS  
For Daily Alerts
 

ಭಾರತ ತಂಡದಲ್ಲಿ ಆತನಿಗಿಂತ ಉತ್ತಮವಾಗಿ ಸ್ಪಿನ್ ಆಡುವ ಮತ್ತೊಬ್ಬ ಆಟಗಾರ ಇಲ್ಲ: ಕೈಫ್ ಹೊಗಳಿದ್ದು ಯಾರನ್ನು ಗೊತ್ತಾ?

ಟೀಮ್ ಇಂಡಿಯಾದ ಮಾಜಿ ಕ್ರಿಕೆಟಿಗ ಮೊಹಮ್ಮದ್ ಕೈಫ್ ಭಾರತ ತಂಡದ ಓರ್ವ ಆಟಗಾರನ ಬಗ್ಗೆ ಭಾರೀ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧ ಕೊಲ್ಕತ್ತಾದ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟೀಮ್ ಇಂಡಿಯಾ ಪರವಾಗಿ ಅದ್ಭುತವಾಗಿ ಪ್ರದರ್ಶನ ನೀಡಿದ ಟೀಮ್ ಇಂಡಿಯಾದ ಈ ಆಟಗಾರನನ್ನು ಕೈಫ್ ಕೊಂಡಾಡಿದ್ದಾರೆ.

ಅಂದಹಾಗೆ ಮೊಹಮ್ಮದ್ ಕೈಫ್ ಹೀಗೆ ಹೊಗಳಿಕೆಯ ಮಾತುಗಳನ್ನಾಡಿದ್ದು ಬೇರೆ ಯಾರ ಬಗ್ಗೆಯೂ ಅಲ್ಲ. ಅದು ಟೀಮ್ ಇಂಡಿಯಾದ ನಾಲ್ಕನೇ ಕ್ರಮಾಂಕದ ಬ್ಯಾಟರ್ ಶ್ರೇಯಸ್ ಐಯ್ಯರ್ ವಿಚಾರವಾಗಿ. ದಕ್ಷಿಣ ಆಫ್ರಿಕಾ ವಿರುದ್ಧ ಪಂದ್ಯದಲ್ಲಿ ಐಯ್ಯರ್ ಭರ್ಜರಿ 77 ರನ್‌ಗಳನ್ನು ಗಳಿಸಿದ್ದು ವಿರಾಟ್ ಕೊಹ್ಲಿ ಜೊತೆಗೆ ಬೃಹತ್ ಜೊತೆಯಾಟದಲ್ಲಿ ಭಾಗುಯಾಗಿದ್ದರು. ಟೀಮ್ ಇಂಡಿಯಾ ಆಟಗಾರರ ಪೈಕಿ ಶ್ರೇಯಸ್ ಐಯ್ಯರ್ ಅವರಷ್ಟು ಅದ್ಭುತವಾಗಿ ಸ್ಪಿನ್ ಬೌಲಿಂಗ್ ವಿರುದ್ಧ ಆಡುವ ಮತ್ತೊಬ್ಬ ಕ್ರಿಕೆಟಿಗ ಇಲ್ಲ ಎಂದಿದ್ದಾರೆ ಕೈಫ್.

Mohammad Kaif parises Shreyas Iyer said No one plays spin better than him

"ಆತ ಸ್ಪಿನ್ನರ್‌ಗಳ ವಿರುದ್ಧ ಅಮೋಘವಾದ ಪ್ರದರ್ಶನ ನೀಡುವ ಆಟಗಾರ. ಐಪಿಎಲ್‌ನಲ್ಲಿ ನಾನು ಆತನ ಜೊತೆಗೆ ಕಾರ್ಯನಿರ್ವಹಿಸಿದ್ದೆ. ನನ್ನ ಪ್ರಕಾರ ಈ ತಂಡದಲ್ಲಿ ಆತನಷ್ಟು ಅದ್ಭುತವಾಗಿ ಸ್ಪಿನ್‌ಗೆ ಆಡುವ ಆಟಗಾರ ಮತ್ತೊಬ್ಬನಿಲ್ಲ. ಯಾಕೆಂದರೆ ಆತ ಸಿಂಗಲ್ಸ್ ಹಾಗೂ ಡಬಲ್ಸ್‌ಅನ್ನು ಕೂಡ ಉತ್ತಮವಾಗಿ ತೆಗೆಯಬಲ್ಲ. ಅಲ್ಲದೆ ನೇವಾಗಿ ಸಿಕ್ಸರ್‌ಗಳನ್ನು ಕೂಡ ಬಾರಿಸುವ ಸಾಮರ್ಥ್ಯ ಹೊಂದಿದ್ದಾರೆ. ಕಳೆದ ವಾಂಕೆಡೆಯಲ್ಲಿ ನಡೆದ ಪಂದ್ಯದಲ್ಲಿ ಆತ 106 ಮೀಟರ್ ಸಿಕ್ಸರ್ ಬಾರಿಸಿದ್ದು ನೋಡಿದ್ದೇವೆ" ಎಂದಿದ್ದಾರೆ.

"ಮಧ್ಯಮ ಓವರ್‌ಗಳಲ್ಲಿ ಸ್ಪಿನ್ನರ್‌ಗಳು ನಿಯಂತ್ರಣ ಸಾಧಿಸಿ ಭಾರತದ ಮೇಲೆ ಒತ್ತಡವನ್ನು ಹೇರುವ ಪ್ರಯತ್ನ ನಡೆಸಿದಾಗ ಶ್ರೇಯಸ್ ಐಯ್ಯರ್ ಅಂಥಾ ಸಂದರ್ಭದಲ್ಲಿ ಬೌಂಡರಿಗಳನ್ನು ಬಾರಿಸುತ್ತಾರೆ. ಅದುವೇ ಆತನ ಸಾಮರ್ಥ್ಯ" ಎಂದು ಟೀಮ್ ಇಂಡಿಯಾದ ಪ್ರತಿಭಾನ್ವಿತ ಬ್ಯಾಟರ್ ಬಗ್ಗೆ ಮೆಚ್ಚಿಗೆಯ ಮಾತುಗಳನ್ನಾಡಿದ್ದಾರೆ ಮೊಹಮ್ಮದ್ ಕೈಫ್.

"ಬೌಲರ್‌ಗಳು ಎಷ್ಟೇ ಉತ್ತಮವಾಗಿರಲಿ. ಆತನ ಬ್ಯಾಟ್‌ನಿಂದ ರನ್ ಹರಿಯುವುದನ್ನು ನಿಯಂತ್ರಿಸಲು ಸಾಧ್ಯವಾಗುವುದಿಲ್ಲ. ತಬ್ರೈಜ್ ಶಂಸಿ, ಕೇಶವ್ ಮಹರಾಜ್ ಅವರಂಥಾ ಬೌಲರ್‌ಗಳು ಇದ್ದರು ಕೂಡ ಬೌಮಡರಿ ಸಿಕ್ಸರ್‌ಗಳ ಮೂಲಕ ಎದುರಾಳಿ ತಂಡದ ಮೇಲೆ ಒತ್ತಡ ಹೇರುವಲ್ಲಿ ಯಶಸ್ವಿಯಾಗಿದ್ದಾರೆ" ಎಂದಿದ್ದಾರೆ ಮೊಹಮ್ಮದ್ ಕೈಫ್.

ಇನ್ನು ಇದೇ ಸಂದರ್ಭದಲ್ಲಿ ಶ್ರೇಯಸ್ ಐಯ್ಯರ್ ವಿರಾಟ್ ಕೊಹ್ಲಿಗೆ ಸುಲಭವಾಗಿ ಬ್ಯಾಟಿಂಗ್ ನಡೆಸಲು ಕಾರಣವಾದರು ಎಂದು ಕೂಡ ಹೇಳಿದ್ದಾರೆ ಕೈಫ್. ಮಧ್ಯಮ ಓವರ್‌ಗಳಲ್ಲಿ ಬೌಂಡರಿಗಳನ್ನು ಐಯ್ಯರ್ ಬಾರಿಸುತ್ತಿದ್ದ ಕಾರಣ ಹೆಚ್ಚಿನ ಒತ್ತಡ ಕೊಹ್ಲಿ ಮೇಲೆ ಬೀಳದಂತೆ ಮಾಡಿದರು ಎಂದಿದ್ದಾರೆ. ಕೊಹ್ಲಿ ಹಾಗೂ ಐಯ್ಯರ್ 134 ರನ್‌ಗಳ ಜೊತೆಯಾಟದಲ್ಲಿ ಭಾಗಿಯಾಗಿದ್ದರು.

"ಅವರು ವಿರಾಟ್‌ಗೆ ಸ್ವಲ್ಪ ಸುಲಭವಾಗಿ ಬ್ಯಾಟಿಂಗ್ ಮಾಡಲು ಸಹಾತವಾದರು. ಯಾಕೆಂದರೆ ಕೊಹ್ಲಿ ಮಧ್ಯದ ಓವರ್‌ಗಳಲ್ಲಿ ಬೌಂಡರಿಗಳನ್ನು ಪಡೆಯದಿದ್ದಾಗ, ಶ್ರೇಯಸ್ ಅಯ್ಯರ್ ಅಲ್ಲಿ ಬೌಂಡರಿಗಳನ್ನು ಹೊಡೆಯುತ್ತಿದ್ದರು. ಹಾಗಾಗಿ ಅವರು ವಿರಾಟ್ ಬ್ಯಾಟಿಂಗ್ ಮೇಲಿನ ಒತ್ತಡವನ್ನು ಸ್ವಲ್ಪಮಟ್ಟಿಗೆ ನಿವಾರಿಸಿದರು" ಎಂದಿದ್ದಾರೆ ಕೈಫ್.

Story first published: Monday, November 6, 2023, 18:07 [IST]
Other articles published on Nov 6, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+