For Quick Alerts
ALLOW NOTIFICATIONS  
For Daily Alerts
 

'ಆತ ಟಿ20ಯಲ್ಲೂ ದ್ವಿಶತಕ ಸಿಡಿಸಬಲ್ಲ ತಾಕತ್ತು ಹೊಂದಿದವ': ಕೈಫ್ ಹೇಳಿದ್ದು ಯಾರ ಬಗ್ಗೆ?

Mohammad Kaif Thinks Rohit Sharma Can Score First T20 Double Century
Kaif Think Rohit Sharma Can Score First T20 Double Century | Rohit Sharma | Kaif

ಟಿ20 ಕ್ರಿಕೆಟ್‌ನಲ್ಲಿ ಶತಕ ಸಿಡಿಸುವುದು ಸಣ್ಣ ಸಾಧನೆಎಯಲ್ಲ. ವೇಗವಾಗಿ ರನ್ ಗಳಿಸುವ ಜೊತೆಗೆ ವಿಕೆಟ್ ಉಳಿಸಿಕೊಂಡು ಅಬ್ಬರಿಸುವ ತಾಕತ್ತು ಬೇಕು. ಆದರೆ ಅದು ಅಸಾಧ್ಯವೇನಲ್ಲ ಎಂದು ಅನೇಕ ಬ್ಯಾಟ್ಸ್‌ಮನ್‌ಗಳು ಸಾಧಿಸಿದ್ದಾರೆ. ಭಾರತೀಯ ಕ್ರಿಕೆಟಿಗರು ಕೂಡ ಈ ಸಾಧನೆಯನ್ನು ಮಾಡಿದ್ದಾರೆ.

ಆದರೆ ಟೀಮ್ ಇಂಡಿಯಾದ ಮಾಜಿ ಕ್ರಿಕೆಟಿಗ ಮೊಹಮದ್ ಕೈಪ್ ಓರ್ವ ಆಟಗಾರನನ್ನು ಹೆಸರಿಸಿದ್ದಾರೆ. ಆತ ಟಿ20 ಕ್ರಿಕೆಟ್‌ನಲ್ಲಿ ದ್ವಿಶತಕ ಸಿಡಿಸುವ ತಾಕತ್ತು ಹೊಂದಿದ್ದಾರೆ ಎಂದು ಹೇಳಿದ್ದಾರೆ. ದೊಡ್ಡ ಇನ್ನಿಂಗ್ಸ್‌ಗಳನ್ನು ಆಡುವುದರಲ್ಲೇ ಖ್ಯಾತರಾದ ಆ ಕ್ರಿಕೆಟಿಗ ಭಾರತೀಯನೇ ಎಂಬುದು ಮತ್ತೊಂದು ಹೆಮ್ಮೆ. ಟೀಮ್ ಇಂಡಿಯಾದ ಆ ಕ್ರಿಕೆಟಿಗ ಯಾರು ಎಂಬುದನ್ನು ಮುಂದೆ ಓದಿ

ಟಿ20ಯಲ್ಲೂ ದ್ವಿಶತಕ

ಟಿ20ಯಲ್ಲೂ ದ್ವಿಶತಕ

ಟೀಮ್ ಇಂಡಿಯಾದ ಆ ಆಟಗಾರ ಏಕದಿನದಲ್ಲಿ ಈಗಾಗಲೇ ದ್ವಿಶತಕವನ್ನು ಸಿಡಿಸಿ ದಾಖಲೆ ಬರೆದಿದ್ದಾರೆ. ಅದೇ ಆಟಗಾರ ಟಿ20ಯಲ್ಲೂ ಮೊಟ್ಟ ಮೊದಲ ದ್ವಿಶತಕವನ್ನು ಸಿಡಿಸಬಲ್ಲವನಾಗಿದ್ದಾನೆ. ಸದ್ಯ ಕ್ರಿಕೆಟ್‌ನಲ್ಲಿ ಈ ಸಾಧನೆ ಮಾಡುವ ತಾಕತ್ತಿರೋದು ಆ ಓರ್ವ ಆಟಗಾರನಿಗೆ ಮಾತ್ರ ಎಂದು ಮೊಹಮದ್ ಕೈಫ್ ಹೇಳಿದ್ದಾರೆ.

ಕೈಫ್ ಹೇಳಿದ್ದು ರೋಹಿತ್ ಶರ್ಮಾ ಬಗ್ಗೆ

ಕೈಫ್ ಹೇಳಿದ್ದು ರೋಹಿತ್ ಶರ್ಮಾ ಬಗ್ಗೆ

ಯಸ್.. ಇಷ್ಟೆಲ್ಲಾ ವಿವರಿಸಿದ ಬಳಿಕ ನೀವು ಯಾರು ಎಂದು ಖಂಡಿತಾ ಊಹಿಸಿರುತ್ತೀರಿ. ಟೀಮ್ ಇಂಡಿಯಾ ಉಪನಾಯಕ ರೋಹಿತ್ ಶರ್ಮಾ ಬಗ್ಗೆಯೇ ಮೊಹಮದ್ ಕೈಪ್ ಹೇಳಿರೋದು. ರೋಹಿತ್ ಶರ್ಮಾ ಟಿ20ಯಲ್ಲೂ ದ್ವಿಶತಕವನ್ನು ಸಿಡಿಸುವ ತಾಕತ್ತು ಹೊಂದಿದ ಆಟಗಾರ ಎಂದು ಹೇಳಿದ್ದಾರೆ.

ಏಕದಿನದಲ್ಲೂ ಊಹಿಸಲಾಗದ ಸಾಧನೆ

ಏಕದಿನದಲ್ಲೂ ಊಹಿಸಲಾಗದ ಸಾಧನೆ

ಏಕದಿನ ಕ್ರಿಕೆಟ್‌ನಲ್ಲೂ ಓರ್ವ ಬ್ಯಾಟ್ಸ್‌ಮನ್ ಇನ್ನಿಂಗ್ಸ್‌ನಲ್ಲಿ 250+ ರನ್ ಹೊಡೆಯಬಲ್ಲ ಎಂದು ಯಾರೂ ನಿರೀಕ್ಷೆಯನ್ನು ಮಾಡಿರಲಿಲ್ಲ. ಆದರೆ ರೋಹಿತ್ ಶರ್ಮಾ ಅದನ್ನು ಮಾಡಿ ವಿಶ್ವವನ್ನೇ ನಿಬ್ಬೆರಗಾಗುವಂತೆ ಮಾಡಿದ್ದರು. ಈಗ ಟಿ20 ಕ್ರಿಕೆಟ್‌ನಲ್ಲೂ ಅಂತದ್ದೇ ಸಾಧನೆ ಮಾಡಲಿದ್ದಾರೆ ಎಂದು ಕೈಫ್ ಹೇಳಿದ್ದಾರೆ.

ಇನ್ನೆರಡು ವರ್ಷದಲ್ಲಿ ಈ ಸಾಧನೆ

ಇನ್ನೆರಡು ವರ್ಷದಲ್ಲಿ ಈ ಸಾಧನೆ

ರೋಹಿತ್ ಶರ್ಮಾ ಬಗ್ಗೆ ಕೈಫ್ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಪ್ರಸಕ್ತ ರೋಹಿತ್ ಅತ್ಯುನ್ನತ ಫಾರ್ಮ್‌ನಲ್ಲಿದ್ದಾರೆ. ಅವರು ಕ್ರೀಸ್‌ನಲ್ಲಿ ನಿಂತರೆ ಅವರನ್ನು ತಡೆಯುವುದು ಯಾರಿಂದಲೂ ಸಾಧ್ಯವಿಲ್ಲ. ಮುಂದಿನ ಒಂದು ಅಥವಾ ಎರಡು ವರ್ಷದಲ್ಲಿ ರೋಹಿತ್ ಈ ಸಾಧನೆಯನ್ನು ಮಾಡಲಿದ್ದಾರೆ. ಇದೊಂದು ಅತ್ಯಂತ ಕಠಿಣ ಟಾಸ್ಕ್. ಆದರೆ ರೋಹಿತ್‌ಗೆ ಇದು ಸಾಧ್ಯವಿದೆ ಎಂದು ಕೈಫ್ ಹೇಳಿದ್ದಾರೆ.

ಏಕದಿನದಲ್ಲಿ 3 ದ್ವಿಶತಕ

ಏಕದಿನದಲ್ಲಿ 3 ದ್ವಿಶತಕ

ಏಕದಿನ ಕ್ರಿಕೆಟ್‌ನಲ್ಲಿ ರೋಹಿತ್ ಶರ್ಮಾ ಈಗಾಗಲೇ ಮೂರು ದ್ವಿಶತಕ ಸಿಡಿಸಿದ ದಾಖಲೆಯನ್ನು ಮಾಡಿದ್ದಾರೆ. ಅದರಲ್ಲೂ ಶ್ರೀಲಂಕಾ ವಿರುದ್ಧ ಗಳಿಸಿದ 267ರನ್ ವಿಶ್ವದಾಖಲೆಯ ಸ್ಕೋರ್ ಆಗಿದೆ. ಅದನ್ನು ಮುರಿಯುವುದೇ ಅಸಾಧ್ಯ ಎಂಬ ಮಾತುಗಳು ಸ್ವತಃ ಕ್ರಿಕೆಟ್ ಪಂಡಿತರ ಬಾಯಲ್ಲೂ ಬರುತ್ತಿದೆ. ಹೀಗಾಗಿ ರೋಹಿತ್ ಕ್ರಿಕೆಟ್ ಲೋಕದ ವಿಶೇಷ ಆಟಗಾರ ಎನಿಸಿದ್ದಾರೆ.

Story first published: Friday, June 12, 2020, 23:10 [IST]
Other articles published on Jun 12, 2020
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+