Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಮೇರಿ ಕ್ರಿಸ್ಮಸ್ ಎಂದ ಮಾಜಿ ಕ್ರಿಕೆಟರ್ ಕೈಫ್ ಕಿಚಾಯಿಸಿದ ಕುಹಕಿಗಳು

ಬೆಂಗಳೂರು, ಡಿಸೆಂಬರ್ 27: ಭಾರತದ ಮಾಜಿ ಕ್ರಿಕೆಟರ್ ಮೊಹಮ್ಮದ್ ಕೈಫ್ ಅವರನ್ನು ಮತ್ತೊಮ್ಮೆ ಸಾಮಾಜಿಕ ಜಾಲತಾಣಗಳಲ್ಲಿ ಕಿಚಾಯಿಸಲಾಗಿದೆ. ಕ್ರಿಸ್‌ಮಸ್ ಹಬ್ಬಕ್ಕೆ ಶುಭಾಶಯ ಕೋರಿದ ಕೈಫ್ ರನ್ನು ಕುಹಕಿಗಳು ಟೀಕಿಸಿದ್ದಾರೆ.

'ಮೇರಿ ಕ್ರಿಸ್‌ಮಸ್! ಶಾಂತಿ ಮತ್ತು ಪ್ರೀತಿ ಸದಾ ನೆಲೆಸಲಿ' ಎಂಬ ಶುಭಾಶಯವನ್ನು ಕೈಫ್ ಟ್ವೀಟ್ ಮಾಡಿದ್ದರು. ಕೈಫ್ ಅವರು ನಿಜಕ್ಕೂ ಇಸ್ಲಾಮ್ ಧರ್ಮಕ್ಕೆ ನಿಷ್ಠರಾಗಿದ್ದಾರೆಯೆ ಎಂದು ಕೆಲವರು ಪ್ರಶ್ನಿಸಿದರೆ, ಇನ್ನು ಕೆಲವರು ಟೀಕಿಸಿದ್ದಾರೆ.

Mohammad Kaif trolled again, this time for wishing Merry Christmas

ಕೈಫ್ ಅವರು ಕ್ರಿಸ್‌ಮಸ್ ಟ್ರೀ, ಕೆಲವು ಉಡುಗೊರೆಯ ಜತೆಗೆ ಸಂತ ಕ್ಲಾಸ್ ಟೋಪಿ ಧರಿಸಿ ಕುಟುಂಬದೊಂದಿಗೆ ತೆಗೆಸಿಕೊಂಡಿದ್ದ ಫೋಟೊವನ್ನು ಅಪ್‌ಲೋಡ್ ಮಾಡಿ, ಶುಭ ಹಾರೈಸಿದ್ದರು.

ಇದನ್ನು ಖಂಡಿಸಿದ ಕೆಲವರು 'ಕೈಫ್‌ ಭಾಯ್, ನೀವು ನಡೆಯುತ್ತಿರುವ ಹಾದಿ ಸರಿಯಲ್ಲ. ಇಸ್ಲಾಮ್ ಧರ್ಮಕ್ಕೆ ವಿರುದ್ಧವಾಗಿ ಹೆಜ್ಜೆ ಹಾಕುತ್ತಿದ್ದೀರಿ' ಎಂದಿದ್ದಾರೆ.(ಪಿಟಿಐ)

Story first published: Wednesday, January 3, 2018, 10:05 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+