ನೇಪಾಳ ತಂಡದ ಆಟಗಾರರಿಗೆ ಬೌಲಿಂಗ್ ಟಿಪ್ಸ್ ಕೊಟ್ಟ ಟೀಮ್ ಇಂಡಿಯಾ ವೇಗಿ
ಆಗಸ್ಟ್ 19 ಸೋಮವಾರ, ಕೆಲ ದಿನಗಳ ಹಿಂದೆ ಭಾರತೀಯ ಕ್ರಿಕೆಟ್ ಮಂಡಳಿ (ಬಿಸಿಸಿಐ) ಮಹತ್ವದ ಹೆಜ್ಜೆಯನ್ನಿಟ್ಟಿತ್ತು. ನೇಪಾಳ ತಂಡಕ್ಕೆ ರಾಷ್ಟ್ರೀಯ ಕ್ರಿಕೆಟ್ ಆಕಾಡೆಮಿಯಲ್ಲಿ (ಎನ್‌ಸಿಎ) ಅಭ್ಯಾಸ ನಡೆಸಲು ಬಿಸಿಸಿಐ ಅವಕಾಶ ನೀಡಿತ್ತು.
ನೆರೆಯ ರಾಷ್ಟ್ರ ನೇಪಾಳಕ್ಕೆ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರ ಕೊಡುಗೆಯ ನಂತರ ನೇಪಾಳ ತಂಡವು ಪ್ರಸ್ತುತ ಎನ್‌ಸಿಎ ಯಲ್ಲಿ ಅಭ್ಯಾಸ ನಡೆಸುತ್ತಿದೆ. ಎರಡು ವಾರಗಳ ಕಾಲ ಇಲ್ಲಿ ಅಭ್ಯಾಸ ನಡೆಸಲಿದ್ದಾರೆ. ಇದೀಗ ಟೀಮ್ ಇಂಡಿಯಾದ ಸ್ಟಾರ್ ವೇಗದ ಬೌಲರ್ ಮೊಹಮ್ಮದ್ ಶಮಿ ಅವರ ಫೋಟೋವೊಂದು ವೈರಲ್ ಆಗಿದೆ.

ಇದರಲ್ಲಿ ಅವರು ನೇಪಾಳ ಕ್ರಿಕೆಟ್ ತಂಡದ ಆಟಗಾರರಿಗೆ ಬೌಲಿಂಗ್ ಸಲಹೆಗಳನ್ನು ಹೇಳಿಕೊಡುತ್ತಿದ್ದಾರೆ. ಬೆಂಗಳೂರಿನಲ್ಲಿರುವ ಎನ್‌ಸಿಎಯಲ್ಲಿ ನೇಪಾಳ ತಂಡದ ಆಟಗಾರರು ಮತ್ತು ತರಬೇತುದಾರರು ಮೊಹಮ್ಮದ್ ಶಮಿ ಅವರ ಬಳಿ ನಿಂತಿದ್ದು, ಅವರಿಂದ ಬೌಲಿಂಗ್ ಕೌಶಲ್ಯಗಳನ್ನು ತಿಳಿದುಕೊಳ್ಳುತ್ತಿರುವುದು ಫೋಟೋದಲ್ಲಿ ಕಾಣಬಹುದು.
ಮೊಹಮ್ಮದ್ ಶಮಿ ನೇಪಾಳದ ಕ್ರಿಕೆಟಿಗರಿಗೆ ಬೌಲಿಂಗ್ ಕುರಿತು ಕೌಶಲ್ಯಗಳನ್ನು ಕಲಿಸುವ ಶೈಲಿಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಈ ಫೋಟೋ ಅನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ವಿಶ್ವ ಕ್ರಿಕೆಟ್‌ನಲ್ಲಿ ಶಮಿ ತನ್ನ ವೇಗದ ಬೌಲಿಂಗ್ ಶೈಲಿಯಿಂದ ಎದುರಾಳಿ ಬ್ಯಾಟರ್‌ಗಳ ಎದೆಯಲ್ಲಿ ನಡುಗ ಹುಟ್ಟಿಸಿದ್ದಾರೆ.
ನೇಪಾಳದ ತಂಡವು ಎನ್‌ಸಿಎಯಲ್ಲಿ 2 ವಾರಗಳ ಕಾಲ ಅಭ್ಯಾಸ ನಡೆಸಲಿದೆ. ನೇಪಾಳ ಕ್ರಿಕೆಟ್ ತಂಡವು ಮೊದಲು ಏಷ್ಯಾಕಪ್ ಹಾಗು 2024ರ ಟಿ20 ವಿಶ್ವಕಪ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿತ್ತು. ಟಿ20 ವಿಶ್ವಕಪ್‌ನಲ್ಲಿ ದಕ್ಷಿಣ ಆಫ್ರಿಕಾದಂತಹ ಬಲಿಷ್ಠ ತಂಡಕ್ಕೆ ನೇಪಾಳ ಸೋಲಿನ ಭಯ ತೋರಿಸಿತ್ತು.
ಆದರೆ ಕೊನೆಯಲ್ಲಿ ಕೇವಲ ಒಂದು ರನ್‌ನಿಂದ ಸೋತಿತ್ತು. ಅತ್ಯುತ್ತಮ ತರಬೇತುದಾರರು ಮತ್ತು ಉತ್ತಮ ಸೌಲಭ್ಯಗಳ ನಡುವೆ ನೇಪಾಳ ತಂಡದ 15 ಕ್ರಿಕೆಟಿಗರು ಈಗ ಭಾರತದಲ್ಲಿ ತಮ್ಮ ಆಟವನ್ನು ಸುಧಾರಿಸಿಕೊಳ್ಳುತ್ತಿದ್ದಾರೆ.
ಎನ್‌ಸಿಎಯಲ್ಲಿ ರೆಡಿಯಾಗುತ್ತಿರುವ ಶಮಿ
ಕಳೆದ ವರ್ಷ ನವೆಂಬರ್‌ನಲ್ಲಿ ನಡೆದ ಐಸಿಸಿ ಪುರುಷರ ಏಕದಿನ ವಿಶ್ವಕಪ್ ಟೂರ್ನಿಯ ಆಸ್ಟ್ರೇಲಿಯಾ ವಿರುದ್ಧದ ಫೈನಲ್ ಪಂದ್ಯದಲ್ಲಿ ಮೊಹಮ್ಮದ್ ಶಮಿ ಕೊನೆಯ ಬಾರಿಗೆ ಮೈದಾನದಲ್ಲಿ ಕಾಣಿಸಿಕೊಂಡಿದ್ದರು. ಆ ಬಳಿಕ ಗಾಯ ಹಾಗೂ ಶಸ್ತ್ರಚಿಕಿತ್ಸೆಯಿಂದಾಗಿ ಐಪಿಎಲ್ ಹಾಗೂ ಟಿ20 ವಿಶ್ವಕಪ್‌ನಲ್ಲಿಯೂ ಆಡಲು ಸಾಧ್ಯವಾಗಿರಲಿಲ್ಲ.
ಪಾದದ ಶಸ್ತ್ರಚಿಕಿತ್ಸೆಗೆ ಒಳಗಾದ ನಂತರ ಶಮಿ ಪ್ರಸ್ತುತ ಅಭ್ಯಾಸವನ್ನು ಪ್ರಾರಂಭಿಸಿದ್ದಾರೆ. ಜೊತೆಗೆ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ರಿಹ್ಯಾಬ್‌ಗೆ ಒಳಗಾಗಿದ್ದು, ಗಾಯದಿಂದ ಚೇತರಿಸಿಕೊಂಡಂತೆ ಕಾಣುತ್ತಿದೆ. ಮುಂದಿನ ತಿಂಗಳು ಆರಂಭವಾಗಲಿರುವ ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಶಮಿ ಆಡುವ ಸಾಧ್ಯತೆ ಇದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications