For Quick Alerts
ALLOW NOTIFICATIONS  
For Daily Alerts
 

IND vs AUS: ಬಾರ್ಡರ್- ಗವಾಸ್ಕರ್ ಸರಣಿಯಿಂದ ಮೊಹಮ್ಮದ್ ಶಮಿ ಹೊರಗುಳಿದ್ರಾ?

ಟೀಮ್ ಇಂಡಿಯಾ ವೇಗದ ಬೌಲರ್ ಮೊಹಮ್ಮದ್ ಶಮಿ ಹಲವು ತಿಂಗಳುಗಳಿಂದ ಕ್ರಿಕೆಟ್‌ ಮೈದಾನದಿಂದ ದೂರವಾಗಿದ್ದಾರೆ. 2023ರ ಏಕದಿನ ವಿಶ್ವಕಪ್ ನಂತರ ಸ್ಟಾರ್ ಬೌಲರ್ ಟೀಮ್ ಇಂಡಿಯಾ ಪರ ಮೈದಾನದಲ್ಲಿ ಕಾಣಿಸಿಕೊಂಡಿಲ್ಲ. ಇದೀಗ 2024ರ ಬಾರ್ಡರ್ -ಗವಾಸ್ಕರ್ ಸರಣಿಯಿಂದ ಅವರನ್ನು ಹೊರಗಿಡಲಾಗಿದೆ ಎಂಬ ಚರ್ಚೆಗಳು ಆರಂಭವಾಗಿವೆ.

ಈ ವರ್ಷಾಂತ್ಯದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ 5 ಟೆಸ್ಟ್ ಪಂದ್ಯಗಳ ಬಾರ್ಡರ್ ಗವಾಸ್ಕರ್ ಟ್ರೋಫಿ ನಡೆಯಲಿದೆ. ಈ ಸರಣಿ ಆಡಲು ರೋಹಿತ್ ಶರ್ಮಾ ನೇತೃತ್ವದ ಭಾರತ ತಂಡವು ಆಸ್ಟ್ರೇಲಿಯಾಕ್ಕೆ ಪ್ರವಾಸ ಮಾಡಲಿದೆ. ಬಾರ್ಡರ್- ಗವಾಸ್ಕರ್ ಟ್ರೋಫಿ ಸರಣಿಯು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ 2023-2025 ಅಡಿಯಲ್ಲಿ ಆಡಲಾಗುತ್ತಿದೆ. ಉಭಯ ತಂಡಗಳ ನಡುವಿನ ಈ ಸರಣಿಯು ನವೆಂಬರ್ 26 ರಿಂದ ಜನವರಿ 7 ರವರೆಗೆ ಆಯೋಜನೆಗೊಂಡಿದೆ.

Mohammad Shami out of Border-Gavaskar series

ಇತ್ತ ಸ್ನಾಯುರಜ್ಜು ಗಾಯಕ್ಕೆ ತುತ್ತಾಗಿ ಕ್ರಿಕೆಟ್‌ನಿಂದ ಹೊರಗುಳಿದು ಚೇತರಿಸಿಕೊಳ್ಳುತ್ತಿರುವ ಮೊಹಮ್ಮದ್ ಶಮಿ ಬೌಲಿಂಗ್ ಅಭ್ಯಾಸ ಆರಂಭಿಸಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ, ವಿಡಿಯೋ ಶೇರ್ ಮಾಡುವ ಮೂಲಕ ಶಮಿ ಟೀಮ್ ಇಂಡಿಯಾ ಪರ ಕಮ್‌ಬ್ಯಾಕ್ ಮಾಡಲು ರೆಡಿ ಎಂದಿದ್ದಾರೆ. ಆದರೆ ಅವರ ಮೊಣಕಾಲಿನ ಗಾಯ ಮತ್ತೆ ಉಲ್ಬಣಗೊಂಡಿದ್ದು, ಬಿಸಿಸಿಐ ವೈದ್ಯಕೀಯ ತಂಡ ಚಿಕಿತ್ಸೆ ಆರಂಭಿಸಿದೆ. ಮೊಣಕಾಲಿನಲ್ಲಿ ಹೆಚ್ಚುತ್ತಿರುವ ಊತದಿಂದಾಗಿ ಶಮಿ ಚೇತರಿಸಿಕೊಳ್ಳಲು 6 ರಿಂದ 8 ವಾರಗಳು ಬೇಕಾಗಬಹುದು ಎಂದು ವರದಿಗಳು ಹೇಳಿವೆ.

ಇಂತಹ ಪರಿಸ್ಥಿತಿಯಲ್ಲಿ ಬಾರ್ಡರ್ ಗವಾಸ್ಕರ್ ಸರಣಿಯಲ್ಲೂ ಶಮಿ ಟೀಮ್ ಇಂಡಿಯಾ ಪರ ಕಮ್‌ಬ್ಯಾಕ್ ಮಾಡುವುದು ಕಷ್ಟ ಎನಿಸುತ್ತಿದೆ. ಮತ್ತೊಂದೆಡೆ ಈ ಸುದ್ದಿ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಅಘಾತ ತಂದಿದೆ. ಇದರ ಬೆನ್ನಲ್ಲೇ ಶಮಿ ಕೂಡ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.

ಪೋಸ್ಟ್‌ನಲ್ಲಿ ಏನಿದೆ?

ಮೊಹಮ್ಮದ್ ಶಮಿ ತನ್ನ ಫೋಟೋವನ್ನು ಟ್ವೀಟರ್ (ಎಕ್ಸ್‌)ನಲ್ಲಿ ಸುದ್ದಿಗಳೊಂದಿಗೆ ಪೋಸ್ಟ್ ಮಾಡಿದ್ದಾರೆ. 'ಇಂತಹ ಆಧಾರ ರಹಿತ ವದಂತಿಗಳು ಏಕೆ? ನಾನು ಕಷ್ಟಪಟ್ಟು ಕೆಲಸ ಮಾಡುತ್ತಿದ್ದು, ಚೇತರಿಸಿಕೊಳ್ಳಲು ಅತ್ಯುತ್ತಮ ಪ್ರಯತ್ನ ಮಾಡುತ್ತಿದ್ದೇನೆ. ಬಾರ್ಡರ್- ಗವಾಸ್ಕರ್ ಸರಣಿಯಿಂದ ಹೊರಗುಳಿದಿರುವ ಬಗ್ಗೆ ಬಿಸಿಸಿಐ ಆಗಲಿ ಅಥವಾ ನಾನಾಗಲಿ ಹೇಳಿಲ್ಲ. ಅನಧಿಕೃತ ಮೂಲಗಳಿಂದ ಬರುವ ಇಂತಹ ಸುದ್ದಿಗಳಿಗೆ ಗಮನ ಕೊಡಬೇಡಿ ಎಂದು ವಿನಂತಿಸುತ್ತೇನೆ. ದಯವಿಟ್ಟು ಇಂತಹ ಸುಳ್ಳು ಸುದ್ದಿಗಳನ್ನು ಹರಡಬೇಡಿ ಎಂದು ವದಂತಿಗಳಿಗೆ ಶಮಿ ಅಂತ್ಯವಾಡಿದ್ದಾರೆ.

Story first published: Wednesday, October 2, 2024, 23:47 [IST]
Other articles published on Oct 2, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+