IND vs AUS: ಟ್ರಾವಿಸ್ ಹೆಡ್ ಔಟ್ ಮಾಡಿ ಹೊರಹೋಗುವಂತೆ ಸಿರಾಜ್ ವಾರ್ನಿಂಗ್!
ಅಡಿಲೇಡ್ ನ ಓವಲ್ ಮೈದಾನದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಎರಡನೇ ಟೆಸ್ಟ್ ಪಂದ್ಯದ ಭಾರಿ ಕುತೂಹಲ ಮೂಡಿಸಿದೆ. ಈ ಪಂದ್ಯ ಹಗಲು ರಾತ್ರಿ ಟೆಸ್ಟ್ ಆಗಿದ್ದು, ಭಾರತ ವಿರುದ್ಧ ಆಸ್ಟ್ರೇಲಿಯಾ ತಂಡವು ಮೇಲೆ ಪ್ರಾಬಲ್ಯ ಸಾಧಿಸಿದೆ. ಭಾರತದ ಟಾಪ್ ಆಡೋ ಬ್ಯಾಟರಗಳು ಆಸೀಸ್ ಬೌಲರ್ ಗಳ ಮುಂದೆ ಅಬ್ಬರಿಸುವುದರಲ್ಲಿ ವಿಫಲವಾಗಿದ್ದಾರೆ. ಆದರೆ ಟೀಮ್ ಇಂಡಿಯಾದ ಸ್ಟಾರ್ ವೇಗದ ಬೌಲರ್ ಮೊಹಮ್ಮದ್ ಸಿರಾಜ್ ಎಲ್ಲರ ಗಮನ ಸೆಳೆದಿದ್ದಾರೆ.
ಅಡಿಲೇಡ್ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಬೌಲರ್ ಗಳನ್ನು ಆಸ್ಟ್ರೇಲಿಯಾದ ಸ್ಪೋಟಕ ಆರಂಭಿಕ ಬ್ಯಾಟರ್ ಟ್ರಾವಿಸ್ ಹೆಡ್ ಕಾಡಿದರು. ಮನಬಂದಂತೆ ಬ್ಯಾಟ್ ಬೀಸಿದ ಟ್ರಾವಿಸ್ ಹೆಡ್ ಮತ್ತೊಮ್ಮೆ ಟೀಮ್ ಇಂಡಿಯಾದ ಗೆಲುವಿಗೆ ಅಡ್ಡಿಪಡಿಸಿದರು. ಕ್ರೀಸ್ ಗೆ ಕಚ್ಚಿ ನಿಂತ ಹೆಡ್ ಅದ್ಭುತ ಬ್ಯಾಟಿಂಗ್ ಪ್ರದರ್ಶನ ಮಾಡಿದರು. ಟೀಮ್ ಇಂಡಿಯಾಕ್ಕೆ ಕಂಟಕವಾಗಿದ್ದ ಹೆಡ್ ವಿಕೆಟ್ ಅನ್ನು ಸಿರಾಜ್ ಪಡೆದರು. ಈ ವೇಳೆ ಸಿರಾಜ್ ಮತ್ತು ಹೆಡ್ ನಡುವೆ ನಡೆದ ವಿವಾದದ ವಿಡಿಯೋ ವೈರಲ್ ಆಗಿದೆ.

ಟ್ರಾವಿಸ್ ಹೆಡ್ ಅವರನ್ನು ಔಟ್ ಮಾಡಿದ ನಂತರ ಮಹಮ್ಮದ್ ಸಿರಾಜ್ ಪೆವಿಲಿಯನ್‌ಗೆ ಹೋಗುವಂತೆ ಸನ್ನೆ ಮಾಡಿದ್ದಾರೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿದೆ. ಅಡಿಲೆಟ್ ಟೆಸ್ಟ್ ಪಂದ್ಯದಲ್ಲಿ ಸಿರಾಜ್ ಮತ್ತು ಹೆಡ್ ನಡುವೆ ಪ್ರಬಲ ಪೈಪೋಟಿ ಏರ್ಪಟ್ಟಿತ್ತು. ಮೊಹಮ್ಮದ್ ಸಿರಾಜ್ ಅವರ 22ನೇ ಓವರ್‌ನಲ್ಲಿ ಮೊದಲ ಮೂರು ಎಸೆತಗಳಲ್ಲಿ ಬೌಂಡರಿ ಮತ್ತು ಸಿಕ್ಸರ್ ಗಳನ್ನು ಟ್ರಾವಿಸ್ ಹೆಡ್ ಬಾರಿಸಿದರು.
ಸಿರಾಜ್ ತಮ್ಮ 22ನೇ ಓವರ್‌ನಲ್ಲಿ ಸಾಕಷ್ಟು ರನ್ ನೀಡಿದರು. ಇದಾದ ನಂತರ, ಸಿರಾಜ್ ಅದ್ಭುತ ಯಾರ್ಕರ್ ಹಾಕುವ ಮೂಲಕ ನಾಲ್ಕನೇ ಎಸೆತದಲ್ಲಿ ಹೆಡ್ ಔಟ್ ಮಾಡಿದರು. ಈ ವೇಳೆ ಸಿರಾಜ್ ಅವರಿಗೆ ಹೆಡ್ ಏನೋ ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಿರಾಜ್ ಅವರು ಹೆಡ್ ಗೆ ಮೈದಾನದಿಂದ ವಾರ್ನಿಂಗ್ ಕೊಟ್ಟರು. ಈ ಮೂಲಕ ಸಿರಾಜ್ ಮೈದಾನದಲ್ಲಿ ನೆರೆದಿದ್ದ ಅಭಿಮಾನಿಗಳ ಚಿಕ್ಕ ಕದ್ದಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications