ಕ್ರಿಕೆಟ್ ಎಂಬ ಕ್ರೀಡೆ ಅದೆಷ್ಟೋ ಜನರ ಜೀವನವನ್ನೇ ಬದಲಿಸಿದೆ. ಕ್ರೀಡೆ ಮೇಲಿನ ಪ್ರೀತಿ ಅದೆಷ್ಟೋ ಆಟಗಾರರಿಗೆ ರಾತ್ರೋ ರಾತ್ರಿ ಸ್ಟಾರ್ ಗಿರಿ ತಂದುಕೊಟ್ಟಿದೆ. ಇದೇ ರೀತಿ ಸ್ಟಾರ್ ಗಿರಿಯ ಬೆನ್ನು ಹತ್ತಿ ಮುತ್ತಿನ ನಗರಿಯಿಂದ ಪಯಣ ಆರಂಭಿಸಿ, ಬೆಂಗಳೂರು ತಂಡ ಸೇರಿದ ಸ್ಟಾರ್ ಪೇಸರ್ ಕಥೆ ಇದು.
ಸಾಧಕರ ಮನೆಯಲ್ಲಿ ಇರುವಂತೆ ಇವರ ಮನೆಯಲ್ಲಿ ಬಡತನ.. ಜೀವನ ನಡೆಸಲು ಕಷ್ಟ ಪಟ್ಟು ಸಿಕ್ಕ ಚಿಕ್ಕ ಪುಟ್ಟ ಕೆಲಸ ಮಾಡಿ, ಫ್ರಿ ಟೈಮ್‌ನಲ್ಲಿ ತನ್ನ ಕನಸಿನ ಕುದುರೆಯ ಮೇಲೆ ಸವಾರಿ ಮಾಡಿದ ಆಟಗಾರ, ಇಂದು ಆರ್‌ಸಿಬಿ ತಂಡದ ವೇಗದ ಬೌಲಿಂಗ್ ನೊಗವನ್ನು ಹೊತ್ತ ಪೇಸರ್.. ಸಿಕ್ಕ ಅವಕಾಶವನ್ನು ಎರಡೂ ಕೈಗಳಿಂದ ಬಳಸಿಕೊಂಡು ಅಬ್ಬರಿಸುತ್ತಿರುವ ಸ್ಟಾರ್ ವೇಗದ ಬೌಲರ್ ಮೊಹಮ್ಮದ್ ಸಿರಾಜ್..

ಮೊಹಮ್ಮದ್ ಸಿರಾಜ್ ಪ್ರಸ್ತುತ ಭಾರತ ಕ್ರಿಕೆಟ್ ತಂಡದ ಪ್ರಮುಖ ವೇಗದ ಬೌಲರ್‌ಗಳಲ್ಲಿ ಒಬ್ಬರು. ಅವರು ಬಿಸಿಸಿಐ 'ಎ' ಗ್ರೇಡ್ ಆಟಗಾರ. ಇಂದು (ಮಾರ್ಚ್ 13) ಸಿರಾಜ್ ತಮ್ಮ 30ನೇ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಸಿರಾಜ್‌ಗೆ, ಹೈದರಾಬಾದ್‌ನ ಬೀದಿಗಳಿಂದ ಭಾರತ ಕ್ರಿಕೆಟ್ ತಂಡವನ್ನು ಸೇರುವ ಪ್ರಯಾಣವು ಸುಲಭವಲ್ಲ.
ಸಿರಾಜ್ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ, ಬಿಸಿಸಿಐ ವಿಶೇಷ ವೀಡಿಯೊವನ್ನು ಹಂಚಿಕೊಂಡಿದೆ. ವೀಡಿಯೊದಲ್ಲಿ, ಸಿರಾಜ್, ತಮ್ಮ ಹಳೆಯ ದಿನಗಳನ್ನು ನೆನಪಿಸಿಕೊಳ್ಳುತ್ತಾ, ಬಹುಶಃ ಇಂದು ಯಾರೂ ಕೇಳದ ಕಥೆಯನ್ನು ಹೇಳಿದ್ದಾರೆ.

18ನೇ ವಯಸ್ಸಿನಲ್ಲಿ 100-200 ರೂಪಾಯಿ ಗಳಿಸುವ ಮೂಲಕ ಹೇಗೆ ಖುಷಿಯಾಗಿದ್ದೆ ಎಂದು ಭಾರತದ ವೇಗಿ ಹೇಳಿದ್ದಾರೆ. ಆದರೆ, 100-200 ಗಳಿಸುವುದು ಕೂಡ ಅವರಿಗೆ ಸುಲಭವಾಗಿರಲಿಲ್ಲ. ಈ ವೇಳೆ ಆತನ ಕೈಗಳಿಗೂ ಸುಟ್ಟ ಗಾಯಗಳಾಗಿವೆ. ನಿಜವಾಗಿ ಅವರು ಆಗ ಕ್ಯಾಟರಿಂಗ್ ಕೆಲಸ ಮಾಡುತ್ತಿದ್ದರು ಎಂದು ತಿಳಿಸಿದ್ದಾರೆ.
"ನನಗೇನೂ ಬೇರೆ ಏನು ಗೊತ್ತಿರಲಿಲ್ಲ, ಹೀಗಾಗಿ ಕ್ಯಾಟರಿಂಗ್ ಕೆಲಸಕ್ಕೆ ಗೋಗುತ್ತಿದೆ. ದಿನಕ್ಕೆ 100-200 ಸಿಗುತ್ತಿತ್ತು, ಅದರಿಂದ ಖುಷಿ ಪಡುತ್ತಿದ್ದೆ. ಮನೆಯಲ್ಲಿ 150 ರೂ ಕೊಟ್ಟ ನಂತರ ನನ್ನ ಖರ್ಚಿಗೆ 50 ಉಳಿಯುತ್ತಿತ್ತು ಎಂದು ಸಿರಾಜ್ ಹೇಳಿದರು. ಕಥೆ ಹೇಳುವಾಗ ಸಿರಾಜ್ ಭಾವುಕರಾಗುತ್ತಾರೆ. ಮುಂದೆ ರುಮಾಲಿ ರೊಟ್ಟಿ ತಿಂದಿದ್ದಕ್ಕೆ ಕೈ ಸುಟ್ಟು ಪ್ರಸಂಗವನ್ನು ಸಿರಾಜ್ ಬಣ್ಣಿಸಿದ್ದಾರೆ.
2017 ಐಪಿಎಲ್ ಹರಾಜಿನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಸಿರಾಜ್ ಅವರನ್ನು 2.6 ಕೋಟಿ ನೀಡಿ ತಂಡಕ್ಕೆ ಬರಮಾಡಿಕೊಂಡಿತು. ಆಗಲೇ ಇವರು ಬೆಳಕಿಗೆ ಬಂದಿದ್ದು. ಆಟೋ ಚಾಲಕನ ಮಗ ರಾತ್ರೋ ರಾತ್ರಿ ಐಪಿಎಲ್ ವೇದಿಕೆಯ ಮೂಲಕ ಎಲ್ಲರ ಚಿತ್ತ ಕದ್ದರು.
2017ರಲ್ಲಿ ಸಿಕ್ಕ ಅವಕಾಶವನ್ನು ಬಳಸಿಕೊಂಡ ಸಿರಾಜ್ ಅಬ್ಬರಿಸಿದರು. ಆಡಿದ 6 ಪಂದ್ಯಗಳಲ್ಲಿ 10 ವಿಕೆಟ್ ಕಬಳಿಸಿದರು. ಇವರ ಆಟವನ್ನು ಗುರುತಿಸಿದ ಆರ್‌ಸಿಬಿ 2018ರಲ್ಲಿ ತಮ್ಮ ತಂಡಕ್ಕೆ ಬರಮಾಡಿಕೊಂಡಿತು. ಅಲ್ಲಿಂದ ಸಿರಾಜ್ ಹಿಂತುರಿಗಿ ನೋಡಲೇ ಇಲ್ಲ. ಭರ್ಜರಿ ಲೈನ್ ಹಾಗೂ ಲೆಂಥ್ ಮೂಲಕ ಬೌಲಿಂಗ್ ಮಾಡುವ ಸಿರಾಜ್ ಎದುರಾಳಿಗಳ ಪಾಲಿಗೆ ಸಿಂಹ ಸ್ವಪ್ನ. ಐಪಿಎಲ್‌ನಲ್ಲಿ ಈ ವರೆಗೆ ಆಡಿದ 79 ಪಂದ್ಯಗಳಲ್ಲಿ 78 ವಿಕೆಟ್ ಕಬಳಿಸಿದ್ದಾರೆ.
ಏಕದಿನ ಕ್ರಿಕೆಟ್‌ನಲ್ಲಿ ಸಿರಾಜ್ ನಂಬರ್ ಒನ್ ಬೌಲರ್. ಇಲ್ಲಿಯವರೆಗೆ ಅವರು ಭಾರತದ ಪರ 27 ಟೆಸ್ಟ್, 41 ODI ಮತ್ತು 10 T20 ಅಂತರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ.