IND vs SL: ಮೊಹಮ್ಮದ್ ಸಿರಾಜ್ ಕಿಲ್ಲರ್ ಬೌಲಿಂಗ್; ಮೊದಲ ಎಸೆತದಲ್ಲಿ ವಿಕೆಟ್ ಪಡೆದು ದಾಖಲೆ!
ಆಗಸ್ಟ್ 4 ಭಾನುವಾರ, ಶ್ರೀಲಂಕಾ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಭಾರತ ತಂಡದ ವೇಗದ ಬೌಲರ್ ಮೊಹಮ್ಮದ್ ಬೆಂಕಿ ಬೌಲಿಂಗ್ ಮಾಡಿದರು. ಕೊಲಂಬೊದ ಆರ್ ಪ್ರೇಮದಾಸ ಸ್ಟೇಡಿಯಂನಲ್ಲಿ ಸಿರಾಜ್ ಅದ್ಭುತ ಪ್ರದರ್ಶನ ನೀಡಿದರು.
ಶುಕ್ರವಾರ ಇದೇ ಮೈದಾನದಲ್ಲಿ ನಡೆದ ಮೊದಲ ಏಕದಿನ ಪಂದ್ಯ ಟೈ ಆಗಿತ್ತು. ಎರಡನೇ ಪಂದ್ಯದಲ್ಲಿ ಉಭಯ ತಂಡಗಳು ಗೆಲುವಿಗಾಗಿ ಹೋರಾಟ ನಡೆಸುತ್ತಿವೆ. ಈ ಪಂದ್ಯದಲ್ಲಿ ಗೆಲ್ಲುವ ತಂಡ 1-0 ಅಂತರದ ಅಜೇಯ ಮುನ್ನಡೆ ಸಾಧಿಸಲಿದೆ.

ಕಿಲ್ಲರ್ ಬೌಲಿಂಗ್
ಶ್ರೀಲಂಕಾ ತಂಡಕ್ಕೆ ಆರಂಭಿಕ ಆಘಾತ ನೀಡುವಲ್ಲಿ ಮೊಹಮ್ಮದ್ ಸಿರಾಜ್ ಮುಂಚೂಣಿಯಲ್ಲಿದ್ದಾರೆ. ಇಂದಿನ ಪಂದ್ಯದಲ್ಲೂ ಈ ಅದ್ಭುತ ನಡೆಯಿತು. ಶ್ರೀಲಂಕಾದ ಆರಂಭಿಕ ಬ್ಯಾಟರ್ ಪಾತುಮ್ ನಿಸ್ಸಾಂಕಾ ವಿಕೆಟ್ ಪಡೆಯುವಲ್ಲಿ ಸಿರಾಜ್ ಯಶಸ್ವಿಯಾದರು.
ಅದರಲ್ಲೂ ಮೊದಲ ಎಸೆತದಲ್ಲೇ ಸಿರಾಜ್ ವಿಕೆಟ್ ಪಡೆದಿದ್ದು, ವಿಶೇಷವಾಗಿತ್ತು. ನಿಸ್ಸಾಂಕಾ ಕ್ಯಾಚ್ ಅನ್ನು ವಿಕೆಟ್‌ಕೀಪರ್ ಕೆಎಲ್ ರಾಹುಲ್ ಹಿಡಿದರು.
ನಿಸ್ಸಾಂಕ ಅವರಿಗೆ ಸಿರಾಜ್ ಹಾಕಿದ ಚೆಂಡು ಅರ್ಥವಾಗಲಿಲ್ಲ. ಅರ್ಥ ಮಾಡಿಕೊಳ್ಳುವ ಹೊತ್ತಿಗೆ ಬ್ಯಾಟ್‌ನ ಹೊರ ಅಂಚಿಗೆ ಚೆಂಡು ಟಚ್ ಆಗಿ ವಿಕೆಟ್ ಹಿಂದೆ ಇದ್ದ ರಾಹುಲ್ ಕೈ ಸೇರಿತು.
ವಿಶೇಷ ದಾಖಲೆ
ಸಿರಾಜ್ ಮೊದಲ ಎಸೆತದಲ್ಲಿ ವಿಕೆಟ್ ಪಡೆಯುವ ಮೂಲಕ ವಿಶೇಷ ದಾಖಲೆ ಬರೆದಿದ್ದಾರೆ.
ಶ್ರೀಲಂಕಾ ವಿರುದ್ಧದ ಏಕದಿನ ಪಂದ್ಯದಲ್ಲಿ ಮೊದಲ ಎಸೆತದಲ್ಲೇ ವಿಕೆಟ್ ಪಡೆದ ಮೂರನೇ ಭಾರತೀಯ ಬೌಲರ್ ಎನಿಸಿಕೊಂಡಿದ್ದಾರೆ.
ಇದಕ್ಕೂ ಮುನ್ನ ಜಹೀರ್ ಖಾನ್ ಮತ್ತು ಪ್ರವೀಣ್ ಕುಮಾರ್ ಈ ಸಾಧನೆ ಮಾಡಿದ್ದರು. 2002ರಲ್ಲಿ ಕೊಲಂಬೊದ ಆರ್ ಪ್ರೇಮದಾಸ ಸ್ಟೇಡಿಯಂನಲ್ಲಿ ಜಹೀರ್ ಮೊದಲ ಎಸೆತದಲ್ಲಿ ಸನತ್ ಜಯಸೂರ್ಯ ಅವರನ್ನು ಔಟ್ ಮಾಡಿದ್ದರು.
ಬಳಿಕ 2009 ರಲ್ಲಿ ನವದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಉಪುಲ್ ತರಂಗ ಅವರನ್ನು ಔಟ್ ಮಾಡಿದರು. ಪ್ರವೀಣ್ ಕುಮಾರ್ 2010ರಲ್ಲಿ ಈ ಸಾಧನೆ ಮಾಡಿದ್ದರು. ದಂಬುಲ್ಲಾದಲ್ಲಿ ತರಂಗ ಅವರನ್ನು ಔಟ್ ಮಾಡುವ ಮೂಲಕ ಸಂಭ್ರಮಿಸಿದ್ದರು.
ಉಭಯ ತಂಡಗಳ ಪ್ಲೇಯಿಂಗ್-11
ಶ್ರೀಲಂಕಾ: ಪಾತುಮ್ ನಿಸ್ಸಾಂಕಾ, ಅವಿಷ್ಕಾ ಫೆರ್ನಾಂಡೋ, ಕುಸಾಲ್ ಮೆಂಡಿಸ್ (ವಿಕೆಟ್ ಕೀಪರ್), ಸದೀರ ಸಮರವಿಕ್ರಮ, ಚರಿತ್ ಅಸಲಂಕಾ (ನಾಯಕ), ಕಾಮಿಂದು ಮೆಂಡಿಸ್, ಜೆನಿತ್ ಲಿಯಾನಗೆ, ದುನಿತ್ ವೆಲ್ಲೆಜ್, ಅಕಿಲಾ ಧನಂಜಯ್, ಅಸಿತಾ ಫೆರ್ನಾಂಡೋ, ಜೆಫ್ರೆಯ್ ವಂದರ್.
ಭಾರತ: ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಶಿವಂ ದುಬೆ, ವಾಷಿಂಗ್ಟನ್ ಸುಂದರ್, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಮೊಹಮ್ಮದ್ ಸಿರಾಜ್, ಅರ್ಷ್‌ದೀಪ್ ಸಿಂಗ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications