PKL 2025: ಐವರು ಆಟಗರರು ಕೋಟ್ಯಾಧಿಪತಿಗಳು: ಬುಲ್ಸ್ ತೆಕ್ಕೆಗೆ ಯೋಗೇಶ್
ಐಪಿಎಲ್ ಇನ್ನೇನು ಕೆಲವೇ ದಿನಗಳಲ್ಲಿ ಮುಕ್ತಾಯವಾಗಲಿದೆ. ಈ ಲೀಗ್ ಬಳಿಕ ಟೀಮ್ ಇಂಡಿಯಾ ಇಂಗ್ಲೆಂಡ್ ಪ್ರವಾಸವನ್ನು ಬೆಳೆಸಲಿದೆ. ಇದರ ನಡುವೆ ಭಾರತದಲ್ಲಿ ಬೇರೆ ಕ್ರೀಡೆಗಳ ಆರಂಭವಾಗಲಿವೆ. ಈ ವರ್ಷ ನಡೆಯಲಿರುವ ಪ್ರೋ ಕಬಡ್ಡಿ ಲೀಗ್‌ಗೆ ಮುಂಬೈನಲ್ಲಿ ಶನಿವಾರ ಹರಾಜು ನಡೆಯಿತು. ಮೊದಲ ದಿನದ ಹರಾಜಿನಲ್ಲಿ ಐವರು ಆಟಗಾರರು ಕೋಟ್ಯಾಧಿಪತಿಗಳು ಆದ್ರು. ಮೊಹಮದ್ರೆಜಾ ಶಾದ್ಲೋಯಿ ಈ ಹರಾಜಿನ ದುಬಾರಿ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇವರನ್ನು ಗುಜರಾತ್ ಜೈಂಟ್ಸ್ 2.23 ಕೋಟಿ ರೂ.ಗೆ ಖರೀದಿಸಿ ಇತಿಹಾಸ ನಿರ್ಮಿಸಿತು.
ಮೊಹಮದ್ರೆಜಾ ಶಾದ್ಲೋಯಿ ಪ್ರತಿನಿಧಿಸಿರುವ ತಂಡ ಎರಡು ಬಾರಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದ್ದು, ಇವರು ಪ್ರೊ ಕಬಡ್ಡಿ ಹರಾಜು ಇತಿಹಾಸದಲ್ಲಿ 2 ಕೋಟಿ ರೂ.ಗೆ ಹೆಚ್ಚಿನ ಬೆಲೆಯನ್ನು ಮೂರು ಬಾರಿ ಜೇಬಿಗೆ ಇಳಿಸಿಕೊಂಡು ಇತಿಹಾಸ ನಿರ್ಮಿಸಿದ್ದಾರೆ. ಕಳೆದ ಆವೃತ್ತಿಯ ಪ್ರೊ ಕಬಡ್ಡಿ ಲೀಗ್‌ನಲ್ಲಿ ಅತ್ಯುತ್ತಮ ರೈಡರ್ ಆಗಿದ್ದ ದೇವಂಕ್ ದಲಾಲ್ ಅವರು ಸಹ ದೊಡ್ಡ ಮೊತ್ತಕ್ಕೆ ಬಿಕರಿಯಾದರು. ಇವರಿಗೆ ಬೆಂಗಾಲ್ ವಾರಿಯರ್ಸ್ ಭಾರೀ ಮೊತ್ತವನ್ನು ನೀಡಿ ತಂಡಕ್ಕೆ ಸೇರಿಸಿಕೊಂಡಿತು. ಇವರು 2.205 ಕೋಟಿ ರೂ. ಹಣವನ್ನು ಪಡೆದಿದ್ದಾರೆ. ಇವರು ಪಿಕೆಎಲ್ ಇತಿಹಾಸದಲ್ಲಿ ಬಿಕರಿಯಾದ ಐದನೇ ದುಬಾರಿ ಆಟಗಾರ ಎಂಬ ಹಿರಿಮೆ ತಮ್ಮದಾಗಿಸಿಕೊಂಡಿದ್ದಾರೆ.

ಬುಲ್ಸ್ ತಂಡ ಸೇರಿದ ಯೋಗೇಶ್
ಕಳೆದ ಕೆಲವು ಆವೃತ್ತಿಗಳಲ್ಲಿ ಸ್ಥಿರ ರಕ್ಷಣಾ ಆಟವನ್ನು ಆಡಿದ ಯೋಗೇಶ್ ದಹಿಯಾ ಅವರನ್ನು ಬೆಂಗಳೂರು ಬುಲ್ಸ್ ಖರೀದಿ ಮಾಡಿದೆ. ಇವರು ಲೆಫ್ಟ್ ಕಾರ್ನರ್ ಡಿಫೆಂಡರ್. ಯೋಗೇಶ್ ಈಗಾಗಲೇ ಪ್ರೊ ಕಬಡ್ಡಿ ಲೀಗ್‌ನಲ್ಲಿ 22 ಪಂದ್ಯಗಳನ್ನು ಅಡಿದ್ದು 77 ಅಂಕಗಳನ್ನು ಕಲೆ ಹಾಕಿದ್ದಾರೆ. ಇವರಲ್ಲಿನ ಕ್ಷಮತೆಯನ್ನು ಗುರುತಿಸಿರುವ ಬೆಂಗಳೂರು ಬುಲ್ಸ್ ತಂಡ ಇವರಿಗೆ 1.125 ಕೋಟಿ ರೂ. ನೀಡಿದೆ.
ಹೆಚ್ಚಿನ ಮೊತ್ತಕ್ಕೆ ಬಿಕರಿಯಾದ ಆಟಗಾರರು
ಮೊಹಮ್ಮದ್ರೆಜಾ ಶಾದ್ಲೋಯಿ, ಗುಜರಾತ್ ಟೈಟಾನ್ಸ್, 2.23 ಕೋಟಿ ರೂ.
ದೇವ್ಯಾಂಕ್ ದಲಾಲ್, ಬಂಗಾಳ ವಾರಿಯರ್ಸ್, 2.205 ಕೋಟಿ ರೂ.
ಆಶು ಮಲಿಕ್, ದಬಾಂಗ್ ಡೆಲ್ಲಿ ಕೆಸಿ 1.90 ಕೋಟಿ ರೂ.
ಅಂಕಿತ್ ಜಗ್ಲಾಂಗ್, ಪಾಟ್ನಾ ಪೈರೇಟ್ಸ್, 1.50 ಕೋಟಿ ರೂ.
ಅರ್ಜುನ್ ದೇಶ್ವಾಲ್, ತಮಿಳು ತಲೈವಾಸ್, 1.405 ಕೋಟಿ ರೂ.
ಯೋಗೇಶ್ ದಹಿಯಾ, ಬೆಂಗಳೂರು ಬುಲ್ಸ್, 1.125 ಕೋಟಿ ರೂ.
ದೀಪಕ್ ರಾಜೇಂದ್ರ ಸಿಂಗ್,ಪಾಟ್ನಾ ಪೈರೇಟ್ಸ್, 86 ಲಕ್ಷ ರೂ.
ಭರತ್ ಹೂಡಾ, ತೆಲುಗು ಟೈಟಾನ್ಸ್, 81 ಲಕ್ಷ ರೂ.
ಶುಭಮ್ ಶಿಂಧೆ, ತೆಲುಗು ಟೈಟಾನ್ಸ್, 80 ಲಕ್ಷ ರೂ.
ವಿಜಯ್ ಮಲಿಕ್, ತೆಲುಗು ಟೈಟಾನ್ಸ್, 51.5 ಲಕ್ಷ ರೂ.
ಪವನ್ ಸೆಹ್ರಾವತ್, ತಮಿಳು ತಲೈವಾಸ್, 59.5 ಲಕ್ಷ ರೂ.
ಫಜಲ್ ಅತ್ರಾಚಳ್ಳಿ, ದಬಾಂಗ್ ದೆಹಲಿ ಕೆಸಿ, 30 ಲಕ್ಷ ರೂ.
ಅಂಕುಶ್, ಬೆಂಗಳೂರು ಬುಲ್ಸ್, 30 ಲಕ್ಷ ರೂ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications