ಮೊಹಮ್ಮದ್ ಶಮಿ ಹ್ಯಾಟ್ರಿಕ್; ಟೀಮ್ ಇಂಡಿಯಾದಲ್ಲಿ ಯಾವಾಗ ಸಿಗುತ್ತೆ ಸ್ಥಾನ?
ಟೀಮ್ ಇಂಡಿಯಾಕ್ಕೆ ಮತ್ತೆ ಕಮ್ ಬ್ಯಾಕ್ ಮಾಡಬೇಕು ಎಂಬ ಆಸೆ ಮೊಹಮ್ಮದ್ ಶಮಿ ಅವರಿಗೆ ಇನ್ನು ಇದೆ. ತಮ್ಮ 35ನೇ ವಯಸ್ಸಿನಲ್ಲಿ ಬಿಗುವಿನ ದಾಳಿ ನಡೆಸಿ ತಂಡಕ್ಕೆ ಆಧಾರವಾಗುತ್ತಿದ್ದಾರೆ. ಇತ್ತೀಚೆಗೆ ನಡೆದ ಐಪಿಎಲ್‌ನಲ್ಲೂ ಶಮಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ಪರ ಸ್ಥಿರ ಪ್ರದರ್ಶನ ನೀಡಿ ತಂಡಕ್ಕೆ ನೆರವಾಗಿದ್ದರು. ಈಗ ಬೆಂಗಾಲ್ ಪ್ರೀಮಿಯರ್ ಲೀಗ್‌ನಲ್ಲೂ ತಮ್ಮ ಬೌಲಿಂಗ್ ಕ್ಷಮತೆಯನ್ನು ಪ್ರದರ್ಶಿಸುತ್ತಿದ್ದಾರೆ.
ಶಮಿ ಈಗಲೂ ದೇಶೀಯ ಕ್ರಿಕೆಟ್‌ನಲ್ಲಿ ಅಸಾಧಾರಣ ಪ್ರದರ್ಶನ ನೀಡುತ್ತಲೇ ಇದ್ದಾರೆ. ಈಗ, ಬಂಗಾಳ ಟಿ20 ಲೀಗ್‌ನಲ್ಲಿ ತಮ್ಮ ಬೌಲಿಂಗ್ ಮೂಲಕ ಸಂಚಲನ ಸೃಷ್ಟಿಸಿದ್ದಾರೆ. ಕೋಲ್ಕತ್ತಾದ ಐತಿಹಾಸಿಕ ಈಡನ್ ಗಾರ್ಡನ್ಸ್‌ನಲ್ಲಿ, ಶಮಿ ಹ್ಯಾಟ್ರಿಕ್ ಸಾಧನೆ ಮಾಡಿದ್ದಾರೆ. ಬಂಗಾಳ ಟಿ20 ಲೀಗ್ ಸೀಸನ್ 3 ಪಂದ್ಯದಲ್ಲಿ ಶ್ರಾಚಿ ರಾಧ್ ಟೈಗರ್ಸ್ ವಿರುದ್ಧ ಅವರು ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿ ಹ್ಯಾಟ್ರಿಕ್ ಸಾಧನೆ ಮಾಡಿದ್ದಾರೆ.

ಹ್ಯಾಟ್ರಿಕ್ ಸಾಧನೆ
ಸರ್ವೋಟೆಕ್ ಸಿಲಿಗುರಿ ಸ್ಟ್ರೈಕರ್ಸ್ ಪರ ಆಡುತ್ತಿರುವ ಅವರು ಸಾಧನೆ ಮಾಡಿದ್ದಾರೆ. ಇದರೊಂದಿಗೆ, ಶಮಿ ಬಂಗಾಳ ಟಿ20 ಲೀಗ್ 2026 ರಲ್ಲಿ ಹ್ಯಾಟ್ರಿಕ್ ಪಡೆದ ಮೊದಲ ಬೌಲರ್ ಎನಿಸಿಕೊಂಡಿದ್ದಾರೆ. ಶಮಿ 16 ನೇ ಓವರ್‌ನ ನಾಲ್ಕನೇ ಎಸೆತದಲ್ಲಿ ಶಹಬಾಜ್ ಅಹ್ಮದ್ ಅವರನ್ನು ಔಟ್ ಮಾಡಿದರು ಮತ್ತು ನಂತರ ಐದನೇ ಎಸೆತದಲ್ಲಿ ರೋಹಿತ್ ಕುಮಾರ್ ಅವರನ್ನು, ಆರನೇ ಮತ್ತು ಕೊನೆಯ ಎಸೆತದಲ್ಲಿ ದೀಪಾಂಜನ್ ಮುಖರ್ಜಿ ಅವರನ್ನು ಔಟ್ ಮಾಡುವ ಮೂಲಕ ಅವರು ತಮ್ಮ ಹ್ಯಾಟ್ರಿಕ್ ಪೂರ್ಣಗೊಳಿಸಿದರು.
ಶಮಿ 4 ಓವರ್‌ಗಳಲ್ಲಿ 27 ರನ್‌ಗಳಿಗೆ 4 ವಿಕೆಟ್‌ಗಳನ್ನು ಕಬಳಿಸುವ ಮೂಲಕ ತಂಡದ ಜಯದಲ್ಲಿ ಮಿಂಚಿದ್ದಾರೆ. ಶಮಿಗೆ, ಕರಣ್ ಲಾಲ್ 3 ವಿಕೆಟ್ ಪಡೆದು ಉತ್ತಮ ಸಾಥ್ ನೀಡಿದ್ದಾರೆ.
ಪಂದ್ಯದ ಚಿತ್ರಣ
ಮೊದಲು ಬ್ಯಾಟ್ ಮಾಡಿದ ಸಿಲಿಗುರಿ ಸ್ಟ್ರೈಕರ್ಸ್ ತಂಡವು ವಿಶಾಲ್ ಭಾಟಿ ಅವರ 46 ಎಸೆತಗಳಲ್ಲಿ 86 ರನ್‌ಗಳ ಅದ್ಭುತ ನೆರವಿನಿಂದ 20 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 208 ರನ್‌ಗಳ ಸವಾಲಿನ ಮೊತ್ತವನ್ನು ಗಳಿಸಿತು. ಅವರು ತಮ್ಮ ಬಿರುಸಿನ ಇನ್ನಿಂಗ್ಸ್‌ನಲ್ಲಿ 6 ಸಿಕ್ಸರ್‌ಗಳು ಮತ್ತು 5 ಬೌಂಡರಿಗಳನ್ನು ಬಾರಿಸಿದರು. ಗುರಿಯನ್ನು ಬೆನ್ನಟ್ಟಿದ ಶ್ರಾಚಿ ರಾಧ್ ಟೈಗರ್ಸ್ 20 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 184 ರನ್ ಸೇರಿಸಿ ಸೋಲು ಕಂಡಿದೆ.
ಶಮಿ ಬಹಳ ಸಮಯದಿಂದ ಟೀಮ್ ಇಂಡಿಯಾಕ್ಕೆ ಕಮ್‌ಬ್ಯಾಕ್ ಮಾಡುವ ಆಸೆ ಹೊಂದಿದ್ದಾರೆ. ಅವರು ಮಾರ್ಚ್ 9, 2025 ರಂದು ದುಬೈನಲ್ಲಿ ನ್ಯೂಜಿಲೆಂಡ್ ವಿರುದ್ಧ ತಮ್ಮ ಕೊನೆಯ ಅಂತಾರಾಷ್ಟ್ರೀಯ ಪಂದ್ಯವನ್ನು ಆಡಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications