Mohammed Shami: ಭಾರತದ ಪರ ವೇಗವಾಗಿ 200 ವಿಕೆಟ್ ಪಡೆದ ಶಮಿ ಇತಿಹಾಸ
ಟೀಮ್ ಇಂಡಿಯಾದ ಸೂಪರ್ ಸ್ಟಾರ್ ಬೌಲರ್ ಮೊಹಮ್ಮದ್ ಶಮಿ ಭರ್ಜರಿಯಾಗಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಕಂ ಬ್ಯಾಕ್ ಮಾಡಿದ್ದಾರೆ. ದುಬೈನಲ್ಲಿ ನಡೆಯುತ್ತಿರುವ ಚಾಂಪಿಯನ್ಸ್ ಟ್ರೋಫಿ "ಬಿ" ಗುಂಪಿನ ಪಂದ್ಯದಲ್ಲಿ ಬಾಂಗ್ಲಾದೇಶದ ವಿರುದ್ಧ ಮೊಹಮ್ಮದ್ ಶಮಿ ಅಮೋಘ ಬೌಲಿಂಗ್ ದಾಳಿ ನಡೆಸಿದರು. ಈ ವೇಳೆ ಬಾಂಗ್ಲಾ ಬ್ಯಾಟರ್‌ಗಳನ್ನು ಕಾಡಿದ ಶಮಿ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಜಸ್ಪ್ರಿತ್ ಬುಮ್ರಾ ಅವರ ಅನುಪಸ್ಥಿತಿ ಕಾಡದಂತೆ ನೋಡಿಕೊಂಡರು. ಈ ವೇಳೆ ಬಾಂಗ್ಲಾ ವಿರುದ್ಧ ಐದು ವಿಕೆಟ್ ಪಡೆದು ಅಬ್ಬರಿಸಿದರು.
"ಬಿ" ಗುಂಪಿನ ಪಂದ್ಯದಲ್ಲಿ ಟಾಸ್ ಗೆದ್ದ ಬಾಂಗ್ಲಾದೇಶ ಮೊದಲು ಬ್ಯಾಟ್ ಮಾಡಿತು. ಈ ವೇಳೆ ಬಾಂಗ್ಲಾ ಬ್ಯಾಟರ್‌ಗಳನ್ನು ಬಹುವಾಗಿ ಕಾಡಿದ ಮೊಹಮ್ಮದ್ ಶಮಿ ಐದು ವಿಕೆಟ್ ಪಡೆದ ಸಾಧನೆ ಮಾಡಿದರು. ಈ ಮೂಲಕ ಶಮಿ ಹಲವು ದಾಖಲೆಗಳನ್ನು ಬರೆದರು. ಟೀಮ್ ಇಂಡಿಯಾದ ವೇಗದ ಬೌಲರ್‌ಗಳ ಬಿಗುವಿನ ದಾಳಿಯ ನೆರವಿನಿಂದ ಬಾಂಗ್ಲಾದೇಶ 228 ರನ್‌ಗಳಿಗೆ ಆಲೌಟ್ ಆಯಿತು.

ಮೊಹಮ್ಮದ್ ಶಮಿ ಬಾಂಗ್ಲಾವಿರುದ್ಧದ ಪಂದ್ಯದಲ್ಲಿ ಮೊದಲ ಓವರ್ ಬೌಲಿಂಗ್ ಮಾಡುವ ಕಾರ್ಯವನ್ನು ತಮ್ಮ ಹೆಗಲ ಮೇಲೆ ಎಳೆದುಕೊಂಡರು. ಈ ವೇಳೆ ಮೊದಲ ಓವರ್‌ನ ಕೊನೆಯ ಎಸೆತದಲ್ಲಿ ಬಾಂಗ್ಲಾಗೆ ಆರಂಭಿಕ ಶಾಕ್ ನೀಡಿದರು. ಇಲ್ಲಿಂದ ಬಾಂಗ್ಲಾದೇಶದ ಟಾಪ್ ಆರ್ಡರ್‌ಗಳ ಪೆವಿಲಿಯನ್ ಪರೇಡ್ ಮುಂದುವರೆಯಿತು. ಇನ್ನು ಇದೇ ಸ್ಪೇಲ್‌ನ ನಾಲ್ಕನೇ ಓವರ್‌ನಲ್ಲೂ ಬಾಂಗ್ಲಾ ಬ್ಯಾಟರ್ ಮೇಹದಿ ಹಸನ್ ಮಿರ್ಜಾ ಅವರಿಗೆ ಖೆಡ್ಡಾ ತೋಡಿ ಅಬ್ಬರಿಸಿದರು.
ಭಾರತದ ಪರ ವೇಗವಾಗಿ 200 ವಿಕೆಟ್
ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಮೊದಲ ಪಂದ್ಯದಲ್ಲಿ ಅಮೋಘ ದಾಳಿ ನಡೆಸಿದ ಶಮಿ ಹೊಸ ಇತಿಹಾಸವನ್ನು ಬರೆದರು. ಇನಿಂಗ್ಸ್‌ನ 43ನೇ ಓವರ್‌ನಲ್ಲಿ ಜೇಕರ್ ಅಲಿ ಅವರಿಗೆ ಖೆಡ್ಡಾ ತೋಡಿದ ಶಮಿ ಹೊಸ ಇತಿಹಾವನ್ನು ಬರೆದರು. ಭಾರತದ ಪರ ಏಕದಿನ ಕ್ರಿಕೆಟ್‌ನಲ್ಲಿ ವೇಗವಾಗಿ 200 ವಿಕೆಟ್ ಪಡೆದ ಸಾಧನೆಯನ್ನು ಮಾಡಿದರು. ಈ ಮೂಲಕ ಅಜಿತ್ ಅಗರ್ಕರ್ ಅವರ ಸಾಧನೆಯನ್ನು ಅಳಿಸಿ ಹಾಕಿದರು. ಅಜಿತ್ ಅಗರ್ಕರ್ ಇಷ್ಟೇ ವಿಕೆಟ್ ಪಡೆಯಲು 133 ಪಂದ್ಯಗಳಲ್ಲಿ ಈ ಸಾಧನೆ ಮಾಡಿದ್ದರು. ಆದರೆ ಶಮಿ ಜಸ್ಟ್ 104 ಪಂದ್ಯಗಳಲ್ಲೇ ಈ ಸಾಧನೆ ಮಾಡಿದ ಹಿರಿಮೆಯನ್ನು ತಮ್ಮದಾಗಿಸಿಕೊಂಡರು.
ವಿಶ್ವದ ಮೂರನೇ ಬೌಲರ್
ವೇಗವಾಗಿ ಏಕದಿನ ಫಾರ್ಮೆಟ್‌ನಲ್ಲಿ 200 ವಿಕೆಟ್ ಪಡೆದ ವಿಶ್ವದ ಮೂರನೇ ಬೌಲರ್ ಎಂಬ ಹೆಗ್ಗಳಿಕೆಯನ್ನು ಶಮಿ ತಮ್ಮದಾಗಿಸಿಕೊಂಡರು. ವೇಗದ ಬೌಲರ್ ಮಿಚೆಲ್ ಸ್ಟಾರ್ಕ್ ಅವರು 102 ಪಂದ್ಯಗಳಲ್ಲಿ ಈ ಸಾಧನೆ ಮಾಡಿ, ವೇಗವಾಗಿ 200 ವಿಕೆಟ್ ಪಡೆದ ಬೌಲರ್‌ಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಇನ್ನು ಪಾಕಿಸ್ತಾನದ ಸಕ್ಲೇನ್ ಮುಷ್ತಾಕ್ 104 ಪಂದ್ಯಗಳಲ್ಲಿ ಈ ಸಾಧನೆ ಮಾಡಿದ್ದರು.

ಭಾರತದ ಪರ ವೇಗವಾಗಿ 200 ವಿಕೆಟ್ ಪಡೆದ ಬೌಲರ್ಸ್
ಮೊಹಮ್ಮದ್ ಶಮಿ, 104 ಪಂದ್ಯ
ಅಜಿತ್ ಅಗರ್ಕರ್, 133 ಪಂದ್ಯ
ಜಾಹೀರ್ ಖಾನ್, 144 ಪಂದ್ಯ
ಅನಿಲ್ ಕುಂಬ್ಳೆ, 147 ಪಂದ್ಯ
ಜಾವಗಲ್ ಶ್ರೀನಾಥ್, 147 ಪಂದ್ಯ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications