Mohammed Shami: ಐಪಿಎಲ್ ಇತಿಹಾಸದಲ್ಲಿ ಎರಡನೇ ದುಬಾರಿ ಸ್ಪೆಲ್; ಶಮಿ ಹೆಸರಿನಲ್ಲಿ ಬೇಡದ ದಾಖಲೆ
ಐಪಿಎಲ್ 2025 ರ 27ನೇ ಪಂದ್ಯ ಸನ್‌ರೈಸರ್ಸ್ ಹೈದರಾಬಾದ್ ಮತ್ತು ಪಂಜಾಬ್ ಕಿಂಗ್ಸ್ ನಡುವೆ ನಡೆಯಿತು. ಈ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವು 246 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟಿ ಪಂಜಾಬ್ ಕಿಂಗ್ಸ್ ತಂಡವನ್ನು 8 ವಿಕೆಟ್‌ಗಳಿಂದ ಸೋಲಿಸಿತು. ಪಂಜಾಬ್ ಕಿಂಗ್ಸ್ ಬೃಹತ್ ಮೊತ್ತ ಕಲೆ ಹಾಕಿದರೂ, ಗೆಲ್ಲುವಲ್ಲಿ ವಿಫಲವಾಯಿತು. ಇದಕ್ಕೂ ಮುನ್ನ ಸನ್‌ರೈಸರ್ಸ್ ಹೈದರಾಬಾದ್ ವೇಗದ ಬೌಲರ್ ಮೊಹಮ್ಮದ್ ಶಮಿ ಅವರ ಕಳಪೆ ಬೌಲಿಂಗ್ ಪ್ರದರ್ಶನದಿಂದಾಗಿ ಪಂಜಾಬ್ ಕಿಂಗ್ಸ್ 245 ರನ್ ಗಳಿಸಲು ಸಾಧ್ಯವಾಯಿತು.
ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಮೊಹಮ್ಮದ್ ಶಮಿ ಬಹಳಷ್ಟು ರನ್‌ಗಳನ್ನು ಬಿಟ್ಟುಕೊಟ್ಟರು. ಇದರೊಂದಿಗೆ ಅವರು ತಮ್ಮ ಹೆಸರಿನಲ್ಲಿ ಬೇಡದ ದಾಖಲೆಗಳನ್ನು ಮಾಡಿದರು.

ಮೊಹಮ್ಮದ್ ಶಮಿ 4 ಓವರ್‍ಗಳನ್ನು ಮಾಡಿ ಬರೋಬ್ಬರಿ 75 ರನ್‌ಗಳನ್ನು ನೀಡಿದರು. ಇದು ಶಮಿ ಅವರ ಐಪಿಎಲ್ ವೃತ್ತಿಜೀವನದ ಅತ್ಯಂತ ದುಬಾರಿ ಬೌಲಿಂಗ್ ಸ್ಪೆಲ್ ಆಯಿತು. ಅಲ್ಲದೆ, ಐಪಿಎಲ್‌ನಲ್ಲಿ ಒಂದೇ ಓವರ್‍ನಲ್ಲಿ ಹೆಚ್ಚು ರನ್ ಬಿಟ್ಟುಕೊಟ್ಟ ಮೊದಲ ಭಾರತೀಯ ಬೌಲರ್ ಎನಿಸಿಕೊಂಡರು.
ಮೊಹಮ್ಮದ್ ಶಮಿ ಅವರ ಕಳಪೆ ಬೌಲಿಂಗ್ ಪ್ರದರ್ಶನ ಹೈದರಾಬಾದ್ ತಂಡಕ್ಕೆ ದೊಡ್ಡ ಪೆಟ್ಟು ನೀಡಿತು. ಶಮಿ ತಮ್ಮ ಕೊನೆಯ ಓವರ್‍ನಲ್ಲಿ ಹೆಚ್ಚಿನ ರನ್‌ಗಳನ್ನು ಬಿಟ್ಟುಕೊಟ್ಟರು. ಈ ಓವರ್‍ನಲ್ಲಿ ಮಾರ್ಕಸ್ ಸ್ಟೊಯಿನಿಸ್ ಸತತ 4 ಸಿಕ್ಸರ್‍ಗಳನ್ನು ಬಾರಿಸಿದರು. ಒಟ್ಟು 27 ರನ್‌ಗಳನ್ನು ಕೊನೆಯ ಓವರ್ ಶಮಿ ನೀಡಿದರು. ಈ ಮೂಲಕ ಶಮಿ ಐಪಿಎಲ್‌ನಲ್ಲಿ ದುಬಾರಿ ಸ್ಪೆಲ್ ಬೌಲಿಂಗ್ ಮಾಡಿದ ವಿಶ್ವದ ಎರಡನೇ ಬೌಲರ್ ಎಂಬ ಬೇಡದ ದಾಖಲೆ ಮಾಡಿದರು. ಇಂಗ್ಲೆಂಡ್ ಸ್ಟಾರ್ ವೇಗದ ಬೌಲರ್ ಜೋಫ್ರಾ ಆರ್ಚರ್ ಮೊದಲ ಸ್ಥಾನದಲ್ಲಿದ್ದಾರೆ.
ಐಪಿಎಲ್‌ನಲ್ಲಿ ದುಬಾರಿ ಸ್ಪೆಲ್ ಮಾಡಿದವರು
ಜೋಫ್ರಾ ಆರ್ಚರ್ (ಆರ್‍ಆರ್) vs ಎಸ್‌ಆರ್‍ಹೆಚ್, ಹೈದರಾಬಾದ್- 0/76 ರನ್, 2025
ಮೊಹಮ್ಮದ್ ಶಮಿ (ಎಸ್‌ಆರ್‍ಹೆಚ್) vs ಪಿಬಿಕೆಎಸ್. ಹೈದರಾಬಾದ್- 0/75 ರನ್, 2025
ಮೋಹಿತ್ ಶರ್ಮಾ (ಜಿಟಿ) vs ಡಿಸಿ, ದೆಹಲಿ- 0/73 ರನ್, 2024
ಬೆಸಿಲ್ ಥಂಪಿ (ಎಸ್‌ಆರ್‍ಹೆಚ್) vs ಆರ್‍ಸಿಬಿ, ಬೆಂಗಳೂರು- 0/70 ರನ್, 2018
ಯಶ್ ದಯಾಳ್ (ಜಿಟಿ) vs ಕೆಕೆಆರ್, ಅಹಮದಾಬಾದ್- 0/60 ರನ್, 2023
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ಕಿಂಗ್ಸ್ ತಂಡ ಶ್ರೇಯಸ್ ಅಯ್ಯರ್ ಅವರ 82 ರನ್‌ಗಳ ಅದ್ಭುತ ಇನ್ನಿಂಗ್ಸ್ ಮತ್ತು ಕೊನೆಯ ಓವರ್‍ನಲ್ಲಿ ಅಬ್ಬರಿಸಿದ ಮಾರ್ಕಸ್ ಸ್ಟೊಯಿನಿಸ್ ಅವರ 34 ರನ್‌ಗಳ ನೆರವು ಪಡೆಯಿತು. ಪರಿಣಾಮ ಪಂಜಾಬ್ 6 ವಿಕೆಟ್ ಕಳೆದುಕೊಂಡು 245 ರನ್ ಗಳಿಸಿತು. ಹೈದರಾಬಾದ್ ಪರ ಹರ್ಷಲ್ ಪಟೇಲ್, 42 ರನ್‌ಗಳಿಗೆ 4 ವಿಕೆಟ್‌ಗಳನ್ನು ಪಡೆದರು.
ಹೈದರಾಬಾದ್ ಪರ ಗುರಿ ಬೆನ್ನಟ್ಟುವಾಗ ಅಭಿಷೇಕ್ ಶರ್ಮಾ 141 ರನ್ ಮತ್ತು ಟ್ರಾವಿಸ್ ಹೆಡ್ 66 ರನ್‌ಗಳನ್ನು ಸಿಡಿಸಿ ಮಿಂಚಿದರು. ಈ ಮೂಲಕ 246 ರನ್‌ಗಳ ಗುರಿ ಮುಟ್ಟಲು ಹೈದರಾಬಾದ್ ತಂಡಕ್ಕೆ ಹಾದಿಯನ್ನು ಸುಲಭಗೊಳಿಸಿದರು. ಅಂತಿಮವಾಗಿ ಹೈದರಾಬಾದ್ ತಂಡವು 18.3 ಓವರ್‌ಗಳಲ್ಲಿ ಕೇವಲ 2 ವಿಕೆಟ್‌ಗಳ ನಷ್ಟಕ್ಕೆ ಗುರಿಯನ್ನು ತಲುಪಿತು. ಇದು ಐಪಿಎಲ್ ಇತಿಹಾಸದಲ್ಲಿ ಎರಡನೇ ಅತ್ಯಧಿಕ ಯಶಸ್ವಿ ರನ್ ಚೇಸ್ ಆಯಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications