Mohammed Shami Retirement: ನಿವೃತ್ತಿ ವದಂತಿಗೆ ತೆರೆ ಎಳೆದ ಟೀಂ ಇಂಡಿಯಾ ಸ್ಟಾರ್ ವೇಗಿ ಮೊಹಮ್ಮದ್ ಶಮಿ
Mohammed Shami Retirement: ಟೀಮ್ ಇಡಿಂಯಾ ಸ್ಟಾರ್ ವೇಗಿ ಮೊಹಮ್ಮದ್ ಶಮಿ ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಲಿದ್ದಾರೆ ಎನ್ನುವ ಸುದ್ದಿಗಳು ಹರಿದಾಡಿದ್ದವು. ಇದರ ಬೆನ್ನಲ್ಲೇ ಇದೀಗ ಸ್ವತಃ ಶಮಿ ಅವರೇ ಈ ಬಗ್ಗೆ ಸ್ಪಷ್ಟನೆ ನೀಡುವ ಮೂಲಕ ವದಂತಿಗಳಿಗೆ ತೆರೆ ಎಳೆದಿದ್ದಾರೆ.
35 ವರ್ಷದ ಶಮಿ ಐಸಿಸಿ ವಿಶ್ವಕಪ್ 2023ರಲ್ಲಿ ಭಾರತದ ಪರ ಅದ್ಭುತ ಪ್ರದರ್ಶನ ತೋರಿದ್ದರು. ಈ ಟೂರ್ನಿಯಲ್ಲಿ ಶಮಿ ಭಾರತದ ಪರ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿ ಹೊರಹೊಮ್ಮಿದ್ದರು. ಭಾರತ ಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋತರೂ, ಶಮಿ ಅವರ ಉತ್ತಮ ಬೌಲಿಂಗ್ ಪ್ರದರ್ಶನ ಇಡೀ ವಿಶ್ವದ ಗಮನ ಸೆಳೆದಿತ್ತು.

ನಂತರ ಶಮಿ ಅವರು 2025ರ ಚಾಂಪಿಯನ್ಸ್ ಟ್ರೋಫಿ ವಿಜೇತ ಭಾರತೀಯ ತಂಡದ ಭಾಗವಾಗಿದ್ದರು. ಇದು ಅವರು ಭಾರತದ ಪರ ಆಡಿದ ಕೊನೆಯ ಪ್ರಮುಖ ಅಂತಾರಾಷ್ಟ್ರೀಯ ಟೂರ್ನಿಯಾಗಿದೆ. ಟೀಮ್ ಇಂಡಿಯಾದಿಂದ ಹೊರಗುಳಿದಿದ್ದರೂ, 2025-26ರ ದೇಶೀಯ ಸೀಸನ್‌ನಲ್ಲಿ ಬೆಂಗಾಲ್ ಪರ ಆಡಿದ ಅವರು, ರಣಜಿ ಟ್ರೋಫಿ ಸೇರಿದಂತೆ ವಿವಿಧ ಟೂರ್ನಿಗಳಲ್ಲಿ ಒಟ್ಟು 67 ವಿಕೆಟ್‌ಳನ್ನು ಕಬಳಿಸಿ ತಮ್ಮ ಫಿಟ್‌ನೆಸ್ ಮತ್ತು ಫಾರ್ಮ್ ಅನ್ನು ಸಾಬೀತುಪಡಿಸಿದ್ದಾರೆ
ಶಮಿ ವೃತ್ತಿಜೀವನಕ್ಕೆ ಅಡ್ಡಿಯಾದ ಗಾಯಗಳ ಸಮಸ್ಯೆ
ಆದರೆ, ಪೂರ್ಣ ಫಿಟ್ ಆಗಿ ಮರಳಿದ ಬಳಿಕವೂ ಅಜಿತ್ ಅಗರ್ಕರ್ ನೇತೃತ್ವದ ಬಿಸಿಸಿಐ ಆಯ್ಕೆ ಸಮಿತಿ ಅವರಿಗೆ ಅವಕಾಶ ನೀಡಿಲ್ಲ. ಗಾಯಗಳ ಸಮಸ್ಯೆ ಶಮಿ ಅವರ ವೃತ್ತಿಜೀವನಕ್ಕೆ ಹಲವು ಬಾರಿ ಅಡ್ಡಿಯಾಗಿದ್ದು, ಅನೇಕ ದ್ವಿಪಕ್ಷೀಯ ಸರಣಿಗಳಿಂದ ಅವರನ್ನು ಹೊರಗುಳುಗುಳಿದಿದ್ದು. ಈ ಎಲ್ಲಾ ಕಾರಣಗಳಿಂದಾಗಿ, ಶಮಿ ಅವರು ತಮ್ಮ ಅಂತಾರಾಷ್ಟ್ರೀಯ ಕ್ರಿಕೆಟ್ ಭವಿಷ್ಯದ ಬಗ್ಗೆ ಆಲೋಚನೆ ನಡೆಸುತ್ತಿದ್ದು, ನಿವೃತ್ತಿ ಕುರಿತು ಚರ್ಚೆಗಳು ಹೆಚ್ಚಾಗಿದ್ದವು.
ನಿವೃತ್ತಿ ವದಂತಿಗಳಿಗೆ ತೆರೆ ಎಳೆದ ಶಮಿ
ಇನ್ನೂ ಶಮಿ ಅವರು ಈ ಕುರಿತು ಮಾತನಾಡಿದ್ದು, "ಸದ್ಯಕ್ಕೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಹೊಂದುವ ಯಾವುದೇ ಆಲೋಚನೆ ಇಲ್ಲ. ನನಗೆ ಕ್ರಿಕೆಟ್ ಆಡುವುದು ಯಾವಾಗ ಬೇಸರವಾಗುತ್ತದೆಯೋ ಹಾಗೂ ದೈಹಿಕವಾಗಿ ಸಹಕರಿಸುವುದಿಲ್ಲವೋ ಅಂದು ನಾನು ಆಟಕ್ಕೆ ವಿದಾಯ ಹೇಳುತ್ತೇನೆ. ಆದರೆ ಈಗ ಅಂತಹ ಯಾವುದೇ ಆಲೋಚನೆ ಇಲ್ಲ," ಎಂದು ಸ್ಪಷ್ಟನೆ ನೀಡುವ ಮೂಲಕ ವದಂತಿಗಳಿಗೆ ತೆರೆ ಎಳೆದಿದ್ದಾರೆ.
ಮುಂದುವರಿದು ಮಾತನಾಡಿದ ಅವರು, "ಯಾವ ದಿನ ನನಗೆ ಬೇಸರ ಎನಿಸುತ್ತದೆಯೋ, ಅಂದು ನಾನು ಆಟ ನಿಲ್ಲಿಸುತ್ತೇನೆ. ಆದರೆ, ಸದ್ಯಕ್ಕೆ ನನಗೆ ಯಾವುದೇ ಬೇಸರವೂ ಆಗಿಲ್ಲ. ನಾನು ಆಟವನ್ನು ಆನಂದಿಸುತ್ತಿದ್ದೇನೆ. ಫಲಿತಾಂಶಗಳು ಕೂಡ ಉತ್ತಮವಾಗಿ ಮತ್ತು ಸಕಾರಾತ್ಮಕವಾಗಿ ಬರುತ್ತಿವೆ," ಎಂದು ಅವರು ತಿಳಿಸಿದರು.
ಎಲ್‌ಎಸ್‌ಜಿ ಪರ ಕಣಕ್ಕಿಳಿಯುತ್ತಿರುವ ಶಮಿ
ಅಜಿತ್ ಅಗರ್ಕರ್ ನೇತೃತ್ವದ ಬಿಸಿಸಿಐ ಆಯ್ಕೆ ಸಮಿತಿಯು ಸದ್ಯ ಯುವ ವೇಗಿಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿದೆ. ಇದರಿಂದಾಗಿ ಸಂಪೂರ್ಣ ಫಿಟ್ ಆಗಿದ್ದರೂ ಶಮಿ ಅವರನ್ನು ರಾಷ್ಟ್ರೀಯ ತಂಡಕ್ಕೆ ಪರಿಗಣಿಸಲಾಗಿಲ್ಲ. ಸದ್ಯ ಶಮಿ ಅವರು ಐಪಿಎಲ್ 2026ರಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಈ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ಮತ್ತೆ ಟೀಂ ಇಂಡಿಯಾ ಜರ್ಸಿಯಲ್ಲಿ ಕಣಕ್ಕಿಳಿಯುವ ಭರವಸೆಯಲ್ಲಿದ್ದಾರೆ. ಗಾಯದ ಸಮಸ್ಯೆಗಳು ಮತ್ತು ಆಯ್ಕೆ ಪ್ರಕ್ರಿಯೆಯ ಸವಾಲುಗಳ ನಡುವೆಯೂ ಶಮಿ ತಮ್ಮ ಹಠ ಬಿಡದೆ ಮರಳಿ ಬರಲು ಕಠಿಣ ಶ್ರಮ ವಹಿಸುತ್ತಿದ್ದಾರೆ ಎಂದು ಹೇಳಬಹುದಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications