Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Mohammed Shami: ಶಮಿ ಮಾಡಿದ ದಾಖಲೆ ಮುರಿಯುವುದ ತುಂಬ ಕಷ್ಟ

ಟೀಮ್ ಇಂಡಿಯಾದ ಸೂಪರ್‌ ಸ್ಟಾರ್ ಬೌಲರ್‌ ಮೊಹಮ್ಮದ್‌ ಶಮಿ ಇಂಡಿಯನ್ ಪ್ರೀಮಿಯರ್‌ ಲೀಗ್‌ನಲ್ಲಿ ಸ್ಥಿರ ಪ್ರದರ್ಶನ ನೀಡಿದ್ದಾರೆ. ಇವರು ಶುಕ್ರವಾರ ನಡೆದ ಚೆನ್ನೈ ಸೂಪರ್ ಕಿಂಗ್ಸ್‌ ವಿರುದ್ಧದ ಪಂದ್ಯದಲ್ಲಿ ದೊಡ್ಡ ದಾಖಲೆಯನ್ನು ಬರೆದಿದ್ದಾರೆ. ಈ ಟೂರ್ನಿಯ ಆರಂಭದಲ್ಲಿ ಮೊಹಮ್ಮದ್‌ ಶಮಿ ರನ್‌ ನೀಡಿ ಕೈ ಸುಟ್ಟುಕೊಂಡಿದ್ದರು. ಆದರೆ ಮಹತ್ವದ ಪಂದ್ಯದಲ್ಲಿ ಮೊಹಮ್ಮದ್‌ ಶಮಿ ಅಬ್ಬರಿಸಿದ್ದಾರೆ. ಈ ಮೂಲಕ ದಾಖಲೆಯ ಪುಟಕ್ಕೆ ಎಂಟ್ರಿ ಪಡೆದಿದ್ದಾರೆ.

ಶುಕ್ರವಾರ ನಡೆದ ಪಂದ್ಯದಲ್ಲಿ ಟಾಸ್‌ ಗೆದ್ದ ಸನ್‌ರೈಸರ್ಸ್‌ ಹೈದರಾಬಾದ್‌ ಮೊದಲು ಬೌಲಿಂಗ್ ಮಾಡುವ ನಿರ್ಧಾರವನ್ನು ಮಾಡಿತು. ಈ ವೇಳೆ ಚೆನ್ನೈ ಸೂಪರ್ ಕಿಂಗ್ಸ್‌ ಪರ ಇನಿಂಗ್ಸ್‌ ಆರಂಭಿಸುವ ಹೊಣೆಯನ್ನು ಹೊತ್ತುಕೊಂಡ ಆಯುಷ್ ಮ್ಹಾತ್ರೆ ಮತ್ತು ಶೇಖ್ ರಶೀದ್ ಆರಂಭಿಕರಾಗಿ ಬ್ಯಾಟಿಂಗ್ ಮಾಡಿದರು. ಶೇಖ್ ರಶೀದ್ ಔಟ್ ಸೈಡ್ ಹಾಫ್‌ ಸ್ಟಂಪ್‌ ಹಾಕಿದ ಚೆಂಡು ಶೇಖ್ ರಶೀದ್ ಬ್ಯಾಟ್‌ಗೆ ತಾಗಿದೆ ಸ್ಲೀಪ್‌ನಲ್ಲಿ ನಿಂತಿದ್ದ ಅಭಿಷೇಕ್‌ ಶರ್ಮಾ ಸೊಗಸಾದ ಕ್ಯಾಚ್ ಪಡೆದರು.

Mohammed Shami Creates IPL History with Fourth First-Ball Wicket in Chennai Clash

ಶಮಿ ದಾಖಲೆ

ಇಂಡಿಯನ್ ಪ್ರೀಮಿಯರ್ ಲೀಗ್‌ ಇತಿಹಾಸದಲ್ಲಿ ಮೊಹಮ್ಮದ್‌ ಶಮಿ ಮೊದಲ ಎಸೆತದಲ್ಲಿ ನಾಲ್ಕು ಬಾರಿ ವಿಕೆಟ್‌ ಪಡೆದ ಸಾಧನೆಯನ್ನು ಮಾಡಿದ್ದಾರೆ. ಈ ವರೆಗೆ ಐಪಿಎಲ್‌ ಇತಿಹಾಸದಲ್ಲಿ ಇಲ್ಲಿಯವರೆಗೂ ಇನ್ನು ಯಾವೊಬ್ಬ ಬೌಲರ್‌ ಮೂರು ಬಾರಿ ಇಂತಹ ಸಾಧನೆಯನ್ನು ಮಾಡಿಲ್ಲ. ಇನಿಂಗ್ಸ್‌ನ ಮೊದಲ ಎಸೆತದಲ್ಲಿ ವಿಕೆಟ್‌ ಪಡೆದ ಬೌಲರ್‌ಗಳ ಪಟ್ಟಿಯಲ್ಲಿ ಟ್ರೆಂಟ್ ಬೌಲ್ಟ್, ಭುವನೇಶ್ವರ್ ಕುಮಾರ್, ಲಸಿತ್ ಮಾಲಿಂಗ, ಡಿರ್ಕ್ ನ್ಯಾನೆಸ್ ಮತ್ತು ಉಮೇಶ್ ಯಾದವ್ ಸೇರಿದ್ದು, ಈ ಬೌಲರ್ಸ್‌ ಈ ವರೆಗೆ ಎರಡು ಬಾರಿ ಈ ಸಾಧನೆ ಮಾಡಿದ್ದಾರೆ.

ಅಂದರೆ ಈ ಬೌಲರ್‌ಗಳಲ್ಲಿ ಈಗ ಇಬ್ಬರು ಬೌಲರ್‌ಗಳು ಮಾತ್ರ ಸದ್ಯ ಐಪಿಎಲ್‌ನಲ್ಲಿ ಆಡುತ್ತಿದ್ದಾರೆ. ಆರ್‌ಸಿಬಿ ಪರ ಭುವನೇಶ್ವರ್‌ ಕುಮಾರ್‌, ಮುಂಬೈ ಇಂಡಿಯನ್ಸ್‌ ಪರ ಆಡುವ ಟ್ರೆಂಟ್ ಬೌಲ್ಟ್‌ ಈ ಸಾಧನೆಯನ್ನು ಮೀರಿ ನಿಲ್ಲಲಬೇಕಾದಲ್ಲಿ ಮೂರು ಬಾರಿ ಈ ಸಾಧನೆ ಮಾಡಬೇಕಾಗುತ್ತದೆ.

ನಾಲ್ಕು ಬಾರಿ ಸಾಧನೆ

ಮೊಹಮ್ಮದ್‌ ಶಮಿ ಮೊದಲ ಎಸೆತದಲ್ಲಿ ವಿಕೆಟ್‌ ಪಡೆದಿದ್ದು 2014ರಲ್ಲಿ ಈ ಸಾಧನೆ ಮಾಡಿದ್ದರು. ಜಾಕ್‌ ಕಾಲಿಸ್‌ ಅವರ ವಿಕೆಟ್‌ ಪಡೆದಿದ್ದರು. 2022ರಲ್ಲಿ ಕೆಎಲ್ ರಾಹುಲ್, 2023ರಲ್ಲಿ ಫಿಲ್ ಸಾಲ್ಟ್‌ ಅವರನ್ನು ಮೊದಲ ಎಸೆತದಲ್ಲಿ ಔಟ್ ಮಾಡಿದ್ದರು. 2025ರ ಪಂದ್ಯದಲ್ಲಿ ಶೇಖ್ ರಶೀದ್ ಅವರನ್ನು ಔಟ್ ಮಾಡಿ ದಾಖಲೆ ಬರೆದಿದ್ದಾರೆ.

ಮೊಹಮ್ಮದ್‌ ಶಮಿ ಒಟ್ಟಾರೆ ಐಪಿಎಲ್‌ನಲ್ಲಿ 118 ಪಂದ್ಯಗಳನ್ನು ಆಡಿದ್ದು, 133 ವಿಕೆಟ್‌ ಪಡೆದಿದ್ದಾರೆ. ಇವರು ಈ ಬಾರಿಯ ಐಪಿಎಲ್‌ನಲ್ಲಿ ತಮ್ಮ ಸ್ವಿಂಗ್‌ ಮೂಲಕ ಕಮಾಲ್‌ ಪ್ರದರ್ಶನ ನೀಡುವಲ್ಲಿ ಕೊಂಚ ವಿಫಲರಾಗಿದ್ದರು. ಇವರು ಆಡಿದ 8 ಪಂದ್ಯಗಳಲ್ಲಿ 14ರ ಎಕಾನಮಿಯಲ್ಲಿ 6 ವಿಕೆಟ್‌ ಪಡೆದಿದ್ದಾರೆ. ಚೆನ್ನೈ ವಿರುದ್ಧದ ಪಂದ್ಯದಲ್ಲಿ ಶಮಿ 4 ಓವರ್‌ ಬೌಲಿಂಗ್ ಮಾಡಿ 28 ರನ್‌ ನೀಡಿ 1 ವಿಕೆಟ್ ಕಬಳಿಸಿದ್ದಾರೆ.

Story first published: Saturday, April 26, 2025, 9:02 [IST]
Other articles published on Apr 26, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+