Mohammed Shami: ಬೇರೆ ಯಾವ ಬೌಲರ್ ಕೂಡ ನನ್ನ ಹತ್ತಿರವಿಲ್ಲ ಎಂದ ಮೊಹಮ್ಮದ್ ಶಮಿ
ಟೀಮ್ ಇಂಡಿಯಾದ ಭರವಸೆಯ ವೇಗದ ಬೌಲರ್ ಮೊಹಮ್ಮದ್ ಶಮಿ ತಂಡಕ್ಕೆ ಕಂಬ್ಯಾಕ್ ಮಾಡುವ ಕನಸು ಕಾಣುತ್ತಿದ್ದಾರೆ. ಆದರೆ ಈ ಆಸೆ ಸದ್ಯ ದೂರಕ್ಕೆ ಸಾಗುತ್ತಿದೆ. ಇವರು ಹಲವು ವರ್ಷಗಳ ಕಾಲ ಟೀಮ್ ಇಂಡಿಯಾದ ಅವಿಭಾಜ್ಯ ಅಂಗವಾಗಿದ್ದರು. ತಮ್ಮ ವೃತ್ತಿ ಜೀವನದ ಬಗ್ಗೆ ಮೊಹಮ್ಮದ್ ಶಮಿ ಮೊದಲ ಬಾರಿಗೆ ಮಾತನಾಡಿದ್ದಾರೆ.
ಮೊಹಮ್ಮದ್ ಶಮಿ ತಮ್ಮ ವೃತ್ತಿ ಜೀವನದ ಬಗ್ಗೆ ಮಾತನಾಡಿ ಬೇರೆ ಯಾವುದೇ ಭಾರತೀಯ ಬೌಲರ್ ತಮ್ಮ ಹತ್ತಿರವೂ ಇಲ್ಲ. ಬೇರೆ ಯಾವುದೇ ಭಾರತೀಯ ವೇಗದ ಬೌಲರ್ ತಮ್ಮ ಹತ್ತಿರವೂ ಇಲ್ಲ ಎಂದಿದ್ದಾರೆ. ಇವರು ಐಪಿಎಲ್‌ನಲ್ಲಿ ಬಿಗುವಿನ ದಾಳಿ ನಡೆಸಿ 130 ವಿಕೆಟ್ ಪಡೆದಿದ್ದಾರೆ. ಟಿ20 ಕ್ರಿಕೆಟ್‌ನಲ್ಲೂ ಸ್ಥಿರ ಪ್ರದರ್ಶನ ನೀಡಿದರೂ ಸಹ ತಂಡಕ್ಕೆ ಹಿಂತಿರುಗಲು ಸಾಧ್ಯವಾಗದೇ ಇರುವುದಕ್ಕೆ ಶಮಿ ವಿಷಾದ ವ್ಯಕ್ತ ಪಡಿಸಿದ್ದಾರೆ.

ವಿರಾಟ್ ಕೊಹ್ಲಿ ಟೀಮ್ ಇಂಡಿಯಾದ ನಾಯಕರಾಗಿದ್ದಾಗ ಹಾಗೂ ಕೋಚ್ ರವಿ ಶಾಸ್ತ್ರಿ ಅವರ ಕಾಲದಲ್ಲಿ ಮೊಹಮ್ಮದ್ ಶಮಿ ಒಬ್ಬ ಭರವಸೆಯ ಬೌಲರ್ ಆಗಿದ್ದರು. ಇವರು ಈ ವರೆಗೆ ಭಾರತದ ಪರ ಮೂರು ಏಕದಿನ ವಿಶ್ವಕಪ್ ಆಡಿದ ಅನುಭವ ಹೊಂದಿದ್ದಾರೆ. ಅಲ್ಲದೆ ಭಾರತದಲ್ಲಿ ನಡೆದಿದ್ದ ಏಕದಿನ ವಿಶ್ವಕಪ್‌ನಲ್ಲಿ ಶಮಿ ಅಮೋಘ ದಾಳಿಯನ್ನು ಸಂಘಟಿಸಿದ್ದರು. ಹಾರ್ದಿಕ್ ಪಾಂಡ್ಯ ಗಾಯಕ್ಕೆ ತುತ್ತಾದ ಬಳಿಕ ಇವರಿಗೆ ಆಡುವ ಅವಕಾಶವನ್ನು ಪಡೆದರು. ಇವರು ಸಿಕ್ಕ ಅವಕಾಶವನ್ನು ಎರಡೂ ಕೈಗಳಿಂದ ಬಳಸಿಕೊಂಡು ಅಬ್ಬರಿಸಿದ್ದರು. ಅಲ್ಲದೆ ಟೂರ್ನಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಭಾರತೀಯ ಬೌಲರ್ ಆಗಿದ್ದರು.
ವೃತ್ತಿ ಜೀವನ ತೃಪ್ತಿ ತಂದಿದೆ
ಮೊಹಮ್ಮದ್ ಶಮಿ ಕೊನೆಯ ಬಾರಿಗೆ ಭಾರತದ ಪರ ಚಾಂಪಿಯನ್ಸ್ ಟ್ರೋಫಿ ಫೈನಲ್‌ನಲ್ಲಿ ಆಡಿದ್ದರು. ಅಲ್ಲಿಂದ ಇವರು ತಂಡಕ್ಕೆ ಮರಳಲು ವಿಫಲರಾಗಿದ್ದಾರೆ. ಇದಾದ ನಂತರ ಫಿಟ್ ಆಗಿದ್ದರೂ, ಅವರು ತಂಡಕ್ಕೆ ಮರಳಲು ಸಾಧ್ಯವಾಗಲಿಲ್ಲ.
ಶಮಿ 2025-26 ಪ್ರಸಕ್ತ ಸಾಲಿನಲ್ಲಿ ಅಮೋಘ ದಾಳಿಯನ್ನು ನಡೆಸಿ 67 ವಿಕೆಟ್ ಕಬಳಿಸಿದ್ದಾರೆ. ಈ ಬಿಗುವಿನ ದಾಳಿಯ ಹೊರತಾಗಿಯೂ ಇವರು ಬ್ಲ್ಯೂ ಜೆರ್ಸಿ ತೊಡುವ ಆಸೆ ಫಲಿಸಲಿಲ್ಲ. ಇವರು ಭಾರತದ ಪರ 2022ರಲ್ಲಿ ಟಿ20 ವಿಶ್ವಕಪ್ ಆಡಿದ್ದರು. ಅಲ್ಲಿಂದ ಇವರಿಗೆ ತಂಡದಲ್ಲಿ ಸ್ಥಾನ ಲಭಿಸಿಲ್ಲ. ಆದರೆ ಇದಾದ ಬಳಿಕ ನಡೆದ ಐಪಿಎಲ್‌ನಲ್ಲಿ ಇವರು ಅತಿ ಹೆಚ್ಚು ವಿಕೆಟ್ ಪಡೆದ ಸಾಧನೆ ಮಾಡಿದರು. ಅಲ್ಲದೆ ಪರ್ಪಲ್ ಕ್ಯಾಪ್ ಗೆಲ್ಲುವ ಮೂಲಕ ತಮ್ಮ ಸಾಮರ್ಥ್ಯವನ್ನು ಸಾಬೀತು ಪಡಿಸಿದ್ದರು.

ಶುಭಂಕರ್ ಮಿಶ್ರಾ ಅವರ ಪಾಡ್‌ಕ್ಯಾಸ್ಟ್‌ನಲ್ಲಿ ಮಾತನಾಡಿರುವ ಅವರು ಮಾತನಾಡುವಾಗ ತಮ್ಮ ವೃತ್ತಿ ಜೀವನದ ಬಗ್ಗೆ ಅವರು ಸಮಾಧಾನ ವ್ಯಕ್ತಪಡಿಸಿದರು. ಶಮಿ ತನ್ನ ಭವಿಷ್ಯದ ಬಗ್ಗೆ ಸ್ವಲ್ಪವೂ ಚಿಂತಿಸುತ್ತಿಲ್ಲ. ಈ ವಿಷಯಗಳು ಇನ್ನು ಮುಂದೆ ತನಗೆ ಹೆಚ್ಚು ಮುಖ್ಯವಲ್ಲ ಎಂದು ಅವರು ಹೇಳಿದರು. ಕೈಯಲ್ಲಿ ಚೆಂಡು ಇದ್ದಾಗ ಮಾತ್ರ ವಿಕೆಟ್ ತೆಗೆದುಕೊಳ್ಳಲು ಸಾಧ್ಯ ಎಂದು ಅವರು ಸ್ಪಷ್ಟಪಡಿಸಿದರು
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications