ಟೀಮ್ ಇಂಡಿಯಾ, ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯನ್ನು 4-1 ಗೆದ್ದುಕೊಂಡಿದೆ. ಈಗ ಭಾರತದ ಚಿತ್ತ ಏಕದಿನ ಸರಣಿಯತ್ತ ನೆಟ್ಟಿದೆ. ಉಭಯ ದೇಶಗಳ ನಡುವೆ ಮೂರು ಪಂದ್ಯಗಳ ಏಕದಿನ ಸರಣಿ ನಡೆಯಲಿದೆ. ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಸೇರಿದಂತೆ ಹಲವು ಸ್ಟಾರ್ ಆಟಗಾರರು ಕಂ ಬ್ಯಾಕ್ ಮಾಡಲಿದ್ದಾರೆ. ಈ ವೇಳೆ ಎಲ್ಲರ ಕಣ್ಣುಗಳು ಮಾತ್ರ ಭಾರತ ತಂಡಕ್ಕೆ ಭರ್ಜರಿ ಕಂ ಬ್ಯಾಕ್ ಮಾಡಿರುವ ಆ ವೇಗದ ಬೌಲರ್ ಮೇಲೆ ನೆಟ್ಟಿರಲಿದೆ.
ಟೀಮ್ ಇಂಡಿಯಾದ ಪರ ತಮ್ಮ ಸ್ವಿಂಗ್ ಬೌಲಿಂಗ್‌ನಿಂದಲೇ ಹೆಸರು ಮಾಡಿದ ಸ್ಟಾರ್ ಬೌಲರ್ ಮೊಹಮ್ಮದ್ ಶಮಿ. ಇವರು ತಮ್ಮ ಬಿಗಿವಿನ ದಾಳಿಯಿಂದಲೇ ವಿಶ್ವದಲ್ಲಿ ಹೆಸರುವಾಸಿ. ತಮ್ಮಲ್ಲಿರುವ ಹಲವು ವೇರಿಯೇಷನ್‌ಗಳ ಮೂಲಕ ಎದುರಾಳಿ ಬ್ಯಾಟರ್‌ಗಳಿಗೆ ಕಾಡಿರುವ ಶಮಿ ಈಗಾಗಲೇ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಭರ್ಜರಿ ಕಂ ಬ್ಯಾಕ್ ಮಾಡಿದ್ದಾರೆ.

ಮೊಹಮ್ಮದ್ ಶಮಿ ಇಂಗ್ಲೆಂಡ್ ವಿರುದ್ಧ ಟಿ20 ಸರಣಿಯಲ್ಲಿ ಸ್ಥಿರ ಪ್ರದರ್ಶನ ನೀಡಿದ್ದಾರೆ. ಮುಂಬೈನಲ್ಲಿ ನಡೆದ ಐದನೇ ಟಿ20 ಪಂದ್ಯದಲ್ಲಿ ಶಮಿ ಮೂರು ವಿಕೆಟ್ ಪಡೆದು ಬೀಗಿದ್ದಾರೆ. ಈಗ ಶಮಿ ಇಂಗ್ಲೆಂಡ್ ವಿರುದ್ಧ ಏಕದಿನ ಸರಣಿಯಲ್ಲಿ ಸೊಗಸಾದ ಪ್ರದರ್ಶನ ನೀಡುವ ಇರಾದೆಯನ್ನು ಹೊಂದಿದ್ದಾರೆ. ಅಲ್ಲದೆ ಗಾಯದ ಬಳಿಕ ತಾವು ಆಡಲಿರುವ ಮೊದಲ ಏಕದಿನ ಪಂದ್ಯದಲ್ಲಿ ಶಮಿ ದಾಖಲೆಯ ಮೇಲೆ ಕಣ್ಣು ನೆಟ್ಟಿದ್ದಾರೆ.
ಟಿ20 ಸರಣಿ ಮುಗಿದ ನಂತರ ಭಾರತ ಮತ್ತು ಇಂಗ್ಲೆಂಡ್ ತಂಡಗಳು ಏಕದಿನ ಸರಣಿಯಲ್ಲಿ ಮುಖಾಮುಖಿಯಾಗಲು ಸಿದ್ಧತೆ ನಡೆಸುತ್ತಿವೆ. ಭಾರತ ವಿರುದ್ಧ ಟಿ20 ಸರಣಿಯಲ್ಲಿ ಹೀನಾಯ ಸೋಲು ಅನುಭವಿಸಿದ ಇಂಗ್ಲೆಂಡ್ ತಂಡ, ಇದೀಗ ಏಕದಿನ ಸರಣಿಯಲ್ಲಿ ಮತ್ತೆ ಪುಟಿದೇಳುವ ತವಕದಲ್ಲಿದೆ. ಈ ಸರಣಿಯಲ್ಲಿ ಭಾರತದ ಪರ ಶಮಿ ಕಣಕ್ಕೆ ಇಳಿಯಲಿದ್ದಾರೆ.
ಭಾರತದ ಪರ ಕೊನೆಯ ಏಕದಿನ ಪಂದ್ಯವನ್ನು ಮೊಹಮ್ಮದ್ ಶಮಿ 14 ತಿಂಗಳ ಹಿಂದೆ ಆಡಿದ್ದರು. ಇವರು ಭಾರತದಲ್ಲಿ ನಡೆದಿದ್ದ ಏಕದಿನ ವಿಶ್ವಕಪ್ ಫೈನಲ್ ಬಳಿಕ ಗಾಯಕ್ಕೆ ತುತ್ತಾಗಿದ್ದರಿಂದ ಮೈದಾನದಿಂದ ಹಿಂದೆ ಸರಿದಿದ್ದರು. ಈಗ ಶಮಿ ಭರ್ಜರಿ ಕಂ ಬ್ಯಾಕ್ ಮಾಡಲಿದ್ದಾರೆ. ನಾಗ್ಪುರ್‌ನಲ್ಲಿ ಶಮಿ ದಾಖಲೆಯನ್ನು ಬರೆಯುವ ಹುಮ್ಮಸ್ಸಿನಲ್ಲಿದ್ದಾರೆ. ಈ ಪಂದ್ಯದಲ್ಲಿ ಐದು ವಿಕೆಟ್‌ಗಳನ್ನು ಪಡೆಯುವಲ್ಲಿ ಯಶಸ್ವಿಯಾದರೆ, ದೊಡ್ಡ ಮೈಲಿಗಲ್ಲು ತಲುಪಲಿದ್ದಾರೆ.

ಫೆಬ್ರವರಿ 6 ರಿಂದ ಏಕದಿನ ಸರಣಿ ಆರಂಭವಾಗಲಿವೆ. ಈ ಸರಣಿಯಲ್ಲಿ ಟೀಮ್ ಇಂಡಿಯಾದ ಪರ ಶಮಿ ಕಣಕ್ಕೆ ಇಳಿಯುವುದು ಫಿಕ್ಸ್. ಚಾಂಪಿಯನ್ಸ್ ಟ್ರೋಫಿಗೂ ಮುನ್ನ ತಮ್ಮನ್ನು ತಾವು ಸಾಬೀತು ಪಡಿಸಿಕೊಳ್ಳಲು ಶಮಿಗೆ ಉತ್ತಮ ಅವಕಾಶ. ಮೊದಲ ಪಂದ್ಯದಲ್ಲಿ ಇವರು ಐದು ವಿಕೆಟ್‌ಗಳನ್ನು ಪಡೆಯುವಲ್ಲಿ ಯಶಸ್ವಿಯಾದರೆ, ವಿಶ್ವ ದಾಖಲೆಯನ್ನು ಬರೆಯಬಹುದು. ಹೌದು.. ಏಕದಿನ ಕ್ರಿಕೆಟ್‌ನಲ್ಲಿ ವೇಗವಾಗಿ 200 ವಿಕೆಟ್ ಪಡೆದ ಸಾಧನೆಯನ್ನು ಮಾಡಬಹುದಾಗಿದೆ.
ಮೊಹಮ್ಮದ್ ಶಮಿ ಭಾರತದ ಪರ 101 ಏಕದಿನ ಪಂದ್ಯಗಳ 100 ಇನಿಂಗ್ಸ್‌ಗಳಲ್ಲಿ 195 ವಿಕೆಟ್ ಕಬಳಿಸಿದ್ದಾರೆ. ಮೊದಲ ಏಕದಿನ ಪಂದ್ಯದಲ್ಲಿ ಶಮಿ ಐದು ವಿಕೆಟ್ ಪಡೆದರೆ, ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ವೇಗವಾಗಿ 200 ವಿಕೆಟ್ ಪಡೆದು ಬೀಗಲಿದ್ದಾರೆ. ಸದ್ಯ ಈ ದಾಖಲೆ ಮಿಚೆಲ್ ಸ್ಟಾರ್ಕ್ ಹೆಸರಿನಲ್ಲಿದೆ. ಇವರು 102 ಏಕದಿನ ಪಂದ್ಯಗಳ 102 ಇನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದ್ದರು.