Mohammed Shami: ಶಮಿ ಬಗ್ಗೆ ಬಿಗ್ ಅಪ್ ಡೇಟ್: ತಂಡದಲ್ಲಿ ಸ್ಥಾನ ಪಡೆದ ಸ್ವಿಂಗ್ ಬೌಲರ್
ಭಾರತ ಸದ್ಯ ಆಸ್ಟ್ರೇಲಿಯಾ ಪ್ರವಾಸದಲ್ಲಿದೆ. ಈ ವೇಳೆ ಟೀಮ್ ಇಂಡಿಯಾ, ಆತಿಥೇಯ ಆಸೀಸ್ ವಿರುದ್ಧ ಬಾರ್ಡರ್ ಗವಾಸ್ಕರ್ ಸರಣಿಯಲ್ಲಿ ಐದು ಟೆಸ್ಟ್ ಪಂದ್ಯಗಳನ್ನು ಆಡುತ್ತಿದೆ. ಬ್ರಿಸ್ಬೇನ್ ಅಂಗಳದಲ್ಲಿ ಮೂರನೇ ಟೆಸ್ಟ್ ನಡೆಯುತ್ತಿದೆ. ಉಭಯ ತಂಡಗಳು ತಲಾ ಒಂದು ಪಂದ್ಯ ಗೆದ್ದಿದ್ದರಿಂದ ರೋಚಕತೆ ಹೆಚ್ಚಿದೆ. ಈ ಮಧ್ಯ ಟೀಮ್ ಇಂಡಿಯಾ ಅಭಿಮಾನಿಗಳ ಮನದಲ್ಲಿ ಎದ್ದಿರುವ ಪ್ರಶ್ನೆ ಒಂದೇ. ಸ್ಟಾರ್ ವೇಗದ ಬೌಲರ್ ಮೊಹಮ್ಮದ್ ಶಮಿ ತಂಡಕ್ಕೆ ಯಾವಾಗ ವಾಪಸ್ ಆಗುತ್ತಾರೆ ಎಂದು. ಈ ಬಗ್ಗೆ ಬಿಗ್ ಅಪ್‌ಡೇಟ್ ಒಂದು ಸಿಕ್ಕಿದೆ.
ಆಡಿಲೇಡ್‌ನಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಸೋತ ಬಳಿಕ ಮೊಹಮ್ಮದ್ ಶಮಿ ಅವರ ಅನುಪಸ್ಥಿತಿ ತಂಡಕ್ಕೆ ಬಹುವಾಗಿ ಕಾಡಿತ್ತು. ಹೀಗಾಗಿ ಅಭಿಮಾನಿಗಳು ಶಮಿ ಯಾವಾಗ ತಂಡವನ್ನು ಸೇರುತ್ತಾರೆ ಎಂದು ಕಾಯುತ್ತಿದ್ದಾರೆ. ಈ ಮಧ್ಯೆ ಮೊಹಮ್ಮದ್ ಶಮಿ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಸ್ವಿಂಗ್ ಬೌಲರ್ ಶಮಿ ಯಾವ ತಂಡದಲ್ಲಿ ಸ್ಥಾನ ಪಡೆದಿದ್ದಾರೆ ಎಂಬ ಬಗ್ಗೆ ಮಾಹಿತಿ ಇಲ್ಲಿದೆ.

ತಂಡ ಸೇರಿದ ಶಮಿ
ಸದ್ಯ ದೇಶೀಯ ಟೂರ್ನಿಯ ಅಬ್ಬರ ಜೋರಾಗಿದೆ. ರಣಜಿ ಟ್ರೋಫಿ ಹಾಗೂ ಸೈಯದ್ ಮುಷ್ತಾಕ್ ಅಲಿ ಟಿ20 ಕ್ರಿಕೆಟ್‌ನಲ್ಲಿ ಪಶ್ಚಿಮ ಬಂಗಾಳ ತಂಡದ ಪರ ಮೈದಾನಕ್ಕೆ ಇಳಿದಿದ್ದ ಶಮಿ, ಮತ್ತೊಮ್ಮೆ ಅಂಗಳ ಪ್ರವೇಶಿಸಲು ಸಜ್ಜಾಗಿದ್ದಾರೆ. ಈ ಬಾರಿ ಶಮಿ ವಿಜಯ್ ಹಜಾರೆ ಟ್ರೋಫಿಗೆ ಪ್ರಕಟಿತ ಬಂಗಾಳ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಬಂಗಾಳ ಪ್ರಕಟಿಸಿದ 20 ಸಂಭಾವ್ಯ ಆಟಗಾರರ ಪಟ್ಟಿಯಲ್ಲಿ ಇವರಿಗೆ ಸ್ಥಾನ ಲಭಿಸಿದೆ. ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಬಾರ್ಡರ್ ಗವಾಸ್ಕರ್ ಟ್ರೋಫಿಗೆ ತಂಡವನ್ನು ಸೇರಲು ಶಮಿ ತಮ್ಮ ಫಿಟ್ನೆಸ್ ಸಾಬೀತು ಪಡಿಸುವ ಅನಿವಾರ್ಯತ ಇದೆ. ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ನಾಲ್ಕನೇ ಟೆಸ್ಟ್ ಡಿಸೆಂಬರ್ 26 ರಂದು ಮೆಲ್ಬೋರ್ನ್‌ನಲ್ಲಿ ಆರಂಭವಾಗಲಿದೆ.
ಭಾರತದಲ್ಲಿ ನಡೆದಿದ್ದ ಏಕದಿನ ವಿಶ್ವಕಪ್ ಫೈನಲ್ ಬಳಿಕ ಶಮಿ ಮೈದಾನಕ್ಕೆ ಇಳಿದಿಲ್ಲ. ಪಾದದ ಶಸ್ತ್ರ ಚಿಕಿತ್ಸೆಗೆ ಒಳಪಟ್ಟಿದ್ದರು. ಇದಾದ ಬಳಿಕ ಗಾಯದಿಂದ ಚೇತರಿಸಿಕೊಂಡು ರಣಜಿ ಟೂರ್ನಿಯಲ್ಲಿ ಬಂಗಾಳ ಪರ ಕಣಕ್ಕೆ ಇಳಿದರು. ಮಧ್ಯಪ್ರದೇಶ ವಿರುದ್ಧದ ಪಂದ್ಯದಲ್ಲಿ ಏಳು ವಿಕೆಟ್‌ಗಳನ್ನು ಪಡೆದು ಅಬ್ಬರಿಸಿದರು. ಇನ್ನು ಸೈಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ ಆಡಿದ 9 ಪಂದ್ಯಗಳಲ್ಲಿ 11 ವಿಕೆಟ್ ಪಡೆದ ತಮ್ಮ ಕ್ಷಮತೆ ಸಾಬೀತು ಪಡಿಸಿದರು. ವಿಜಯ್ ಹಜಾರೆ ಏಕದಿನ ಸರಣಿ ಇದೇ 21 ರಿಂದ ಪ್ರಾರಂಭವಾಗಲಿದ್ದು, ಬಂಗಾಳ ಮೊದಲ ಪಂದ್ಯದಲ್ಲಿ ಹೈದರಾಬಾದ್ ತಂಡವನ್ನು ಎದುರಿಸಲಿದೆ.

ಪ್ರಕಟಿತ ಬಂಗಾಳ ತಂಡ: ಸುದೀಪ್ ಕುಮಾರ್ ಘರಾಮಿ (ನಾಯಕ), ಮೊಹಮ್ಮದ್ ಶಮಿ, ಸುದೀಪ್ ಚಟರ್ಜಿ, ಕರಣ್ ಲಾಲ್, ಅನುಸ್ತುಪ್ ಮಜುಂದಾರ್, ಅಭಿಷೇಕ್ ಪೊರೆಲ್ (ವಿಕೆಟ್ ಕೀಪರ್), ಶಕೀರ್ ಹಬೀಬ್ ಗಾಂಧಿ (ವಿಕೆಟ್ ಕೀಪರ್), ಸುಮಂತ್ ಗುಪ್ತಾ, ಸುಭಮ್ ಚಟರ್ಜಿ , ರಂಜೋತ್ ಸಿಂಗ್ ಖೈರಾ, ಪ್ರದೀಪ್ತ ಪ್ರಮಾಣಿಕ್, ಮೊಹಮ್ಮದ್ ಕೈಫ್, ಸೂರಜ್ ಸಿಂಧು ಜೈಸ್ವಾಲ್, ಕೌಶಿಕ್ ಮೈತಿ, ವಿಕಾಸ್ ಸಿಂಗ್, ಮುಖೇಶ್ ಕುಮಾರ್, ಸಕ್ಷಮ್ ಚೌಧರಿ, ರೋಹಿತ್ ಕುಮಾರ್, ಸಯಾನ್ ಘೋಷ್, ಕಾನಿಷ್ಕ್ ಸೇಠ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications