IND vs AUS: ಆಸ್ಟ್ರೇಲಿಯಾ ಪ್ರವಾಸಕ್ಕೆ ಟಿಕೆಟ್ ಪಡೆದ ಮೊಹಮ್ಮದ್ ಶಮಿ
ಪ್ರಸ್ತುತ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಐದು ಪಂದ್ಯಗಳ ಬಾರ್ಡರ್-ಗವಾಸ್ಕರ್ ಟ್ರೋಫಿಯ ಟೆಸ್ಟ್ ಸರಣಿ ನಡೆಯುತ್ತಿದೆ. ಪರ್ತ್‌ನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಭಾರತ ಗೆಲುವು ಸಾಧಿಸಿದರೆ, ಅಡಿಲೇಡ್ ಟೆಸ್ಟ್ ಪಂದ್ಯವನ್ನು ಆಸ್ಟ್ರೇಲಿಯಾ ಗೆದ್ದಿದೆ. ಇದೀಗ ಟೀಮ್ ಇಂಡಿಯಾಕ್ಕೆ ಸಂತಸದ ಸುದ್ದಿಯೊಂದು ತಲುಪಿದೆ. ಗಾಯದಿಂದ ಚೇತರಿಸಿಕೊಂಡಿರುವ ಮೊಹಮ್ಮದ್ ಶಮಿ ಭಾರತ ತಂಡಕ್ಕೆ ಸೇರ್ಪಡೆಗೊಂಡಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಶಮಿ ತಂಡವನ್ನು ಸೇರಿಕೊಳ್ಳಲಿದ್ದಾರೆ.
ಮೊಹಮ್ಮದ್ ಶಮಿ ಗಬ್ಬಾದಲ್ಲಿ ನಡೆಯಲಿರುವ ಮೂರನೇ ಟೆಸ್ಟ್ ಪಂದ್ಯವನ್ನಾಡಲು ಸಾಧ್ಯವಾಗದಿದ್ದರೆ, ನಾಲ್ಕನೇ ಪಂದ್ಯದಲ್ಲಿ ಟೀಮ್ ಇಂಡಿಯಾ ಪರ ಕಣಕ್ಕೀಳಿಯಲಿದೆ. ಮೂಲಗಳ ಪ್ರಕಾರ, ಮೆಲ್ಬೋರ್ನ್‌ನಲ್ಲಿ ನಡೆಯಲಿರುವ ನಾಲ್ಕನೇ ಟೆಸ್ಟ್‌ಗೂ ಮುನ್ನ ಶಮಿ ಆಸ್ಟ್ರೇಲಿಯಾಕ್ಕೆ ತೆರಳಲಿದ್ದಾರೆ. ಭಾರತದ ಅತ್ಯುತ್ತಮ ಬೌಲರ್ ಗಳಲ್ಲಿ ಒಬ್ಬರಾಗಿರುವ ಶಮಿ ಬಾಕ್ಸಿಂಗ್ ಡೇ ಟೆಸ್ಟ್ ನಲ್ಲಿ ಆಡುವುದು ಬಹುತೇಕ ಖಚಿತವಾಗಿದೆ.

ಕಳೆದ ಒಂದು ವರ್ಷದಿಂದ ಮೈದಾನದಿಂದ ಹೊರಗುಳಿದಿದ್ದ ಶಮಿ ರಣಜಿಯಲ್ಲಿ ಅದ್ಭುತವಾಗಿ ಬೌಲಿಂಗ್ ಮಾಡಿದರೂ, ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಟೂರ್ನಿಯಲ್ಲಿ ತಮ್ಮ ಫಾರ್ಮ್ ಮುಂದುವರೆಸಲಿಲ್ಲ. ವರದಿಗಳ ಪ್ರಕಾರ 'ಶಮಿ ಸ್ವತಃ ತಯಾರಿ ಮಾಡಿಕೊಂಡಿದ್ದಾರೆ, ಅವರ ಕಿಟ್ ಬ್ಯಾಗ್ ಅನ್ನು ಈಗಾಗಲೇ ಆಸ್ಟ್ರೇಲಿಯಾಕ್ಕೆ ಕಳುಹಿಸಲಾಗಿದೆ. ಎನ್‌ಸಿಎ ವೈದ್ಯಕೀಯ ತಂಡವು ಅವರಿಗೆ ಫಿಟ್ ಪ್ರಮಾಣಪತ್ರವನ್ನು ನೀಡಿದರೆ, ಅವರು ತಂಡವನ್ನು ತಲುಪುತ್ತಾರೆ. ಎನ್‌ಸಿಎ ಫಿಟ್ ಸರ್ಟಿಫಿಕೇಟ್ ಶೀಘ್ರದಲ್ಲೇ ಬರಲಿದೆ ಎಂದು ತಿಳಿಸಿವೆ.
ರಣಜಿ ಟ್ರೋಫಿಯಲ್ಲಿ ಶಮಿ ಅವರ ಅದ್ಭುತ ಬೌಲಿಂಗ್ ಪ್ರದರ್ಶನದ ನಂತರ, ಕೊನೆಯ ಕ್ಷಣದಲ್ಲಿ ಅವರನ್ನು ಬಾರ್ಡರ್-ಗವಾಸ್ಕರ್ ಟ್ರೋಫಿಗಾಗಿ ಭಾರತ ತಂಡಕ್ಕೆ ಸೇರಿಸಲಾಗುತ್ತದೆ ಎಂಬ ಚರ್ಚೆಗಳು ತೀವ್ರಗೊಂಡಿವೆ. ಆದರೆ ಶಮಿ ಅವರಿಗೆ ಅದೃಷ್ಟ ಕೈಕೊಟ್ಟಿತ್ತು. ಆದರೆ, ಆಸ್ಟ್ರೇಲಿಯಾ ಪ್ರವಾಸಕ್ಕೆ ಶಮಿ ಆಯ್ಕೆಯಾಗಿರಲಿಲ್ಲ, ಬಂಗಾಳದ ಪ್ರೀ ಕ್ವಾರ್ಟರ್ ಫೈನಲ್ ಸೈಯದ್ ಮುಷ್ತಾಕ್ ಅಲಿ ಪಂದ್ಯ ಡಿಸೆಂಬರ್ 9 ರಂದು ಚಂಡೀಗಢ ವಿರುದ್ಧ ನಡೆಯಲಿದೆ. ಸೈಯದ್ ಮುಷ್ತಾಕ್ ಅಲಿ ಅವರ ಫೈನಲ್ ಡಿಸೆಂಬರ್ 15 ರಂದು ನಡೆಯಲಿದೆ.
ಸೈಯದ್ ಮುಷ್ತಾಕ್ ಅಲಿ ಟ್ರೋಫಿಯ ನಾಕ್-ಔಟ್ ಪಂದ್ಯದ ನಂತರ ಮೊಹಮ್ಮದ್ ಶಮಿ ಅವರನ್ನು ಬೆಂಗಳೂರಿನಲ್ಲಿ ಎನ್‌ಸಿಎ ವೈದ್ಯಕೀಯ ತಂಡದ ಮುಖ್ಯಸ್ಥ ಡಾ. ನಿತಿನ್ ಪಟೇಲ್ ಮತ್ತು ಕಂಡೀಷನಿಂಗ್ ಕೋಚ್ ನಿಶಾಂತ್ ಬಾರ್ಡೋಲುಯಿ ಪರೀಕ್ಷಿಸಲಿದ್ದಾರೆ. ನಂತರ ಫಿಟ್‌ನೆಸ್ ಸರ್ಟಿಫಿಕೇಟ್ ಬರುತ್ತದೆ ಎಂದು ಬಂಗಾಳದ ಕೋಚ್ ಲಕ್ಷ್ಮೀರತನ್ ಶುಕ್ಲಾ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಚಂಡೀಗಢ ವಿರುದ್ಧ ಶಮಿ ಪ್ರೀ ಕ್ವಾರ್ಟರ್ ಫೈನಲ್ ಆಡಲಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications