Mohammed Shami: ಟೀಮ್ ಇಂಡಿಯಾ ಅಭಿಮಾನಿಗಳಿಗೆ ಗುಡ್ ನ್ಯೂಸ್: ಶೀಘ್ರದಲ್ಲಿ ಆಸೀಸ್ ಪ್ರವಾಸ ಬೆಳೆಸಲಿದ್ದಾರೆ ಶಮಿ
ಟೀಮ್ ಇಂಡಿಯಾ ಹಾಗೂ ಆಸ್ಟ್ರೇಲಿಯಾ ನಡುವಣ ಬಾರ್ಡರ್ ಗವಾಸ್ಕರ್ ಸರಣಿಯ ಎರಡನೇ ಪಂದ್ಯ ಆಡಿಲೇಡ್‌ನಲ್ಲಿ ನಡೆಯುತ್ತಿದೆ. ಈ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಮೂಗಿಗೆ ಸೋಲಿನ ವಾಸನೆ ಬಡೆಯುತ್ತಿದ್ದಂತೆ ಕಾಣುತ್ತಿದೆ. ಅಚ್ಚರಿಯ ಘಟನೆಗಳು ನಡೆದಾಗ ಮಾತ್ರ ಭಾರತ, ಗೆಲುವು ಸಾಧಿಸಬಲ್ಲದು. ಇಲ್ಲದೇ ಇದ್ದಲ್ಲಿ ಸರಣಿ ಸಮಬಲದಲ್ಲಿ ಸಾಗಬಹುದು. ಈ ವೇಳೆ ಟೀಮ್ ಇಂಡಿಯಾ ಅಭಿಮಾನಿಗಳ ಮುಖದಲ್ಲಿ ಮಂದಹಾಸ ಮೂಡಿಸುವ ಸುದ್ದಿಯೊಂದು ಹೊರ ಬಿದ್ದಿದೆ.
ಟೀಮ್ ಇಂಡಿಯಾದ ಸ್ಟಾರ್ ವೇಗದ ಬೌಲರ್ ಮೊಹಮ್ಮದ್ ಶಮಿ ಎದುರಾಳಿಗಳನ್ನು ಕಾಡುವ ಪೇಸರ್. ಇವರು ಟೀಮ್ ಇಂಡಿಯಾಕ್ಕೆ ಯಾವಾಗ ಕಮ್ ಬ್ಯಾಕ್ ಮಾಡುತ್ತಾರೆ ಎಂಬ ಪ್ರಶ್ನೆ ಅಭಿಮಾನಿಗಳ ಮನದಲ್ಲಿ ಮೂಡಿದೆ. ಈ ಬಗ್ಗೆ ಈಗ ಒಂದು ಹೊಸ ಅಪ್‌ಡೇಟ್ ಸಿಕ್ಕಿದೆ.

ವಿಳಂಬ ಏಕೆ?
ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಮೊಹಮ್ಮದ್ ಶಮಿ ಬೌಲಿಂಗ್ ಮಾಡುವುದನ್ನು ಅಭಿಮಾನಿಗಳು ನೋಡುವ ಸಾಧ್ಯತೆ ಇದೆ. ಆಸೀಸ್ ಪ್ರವಾಸದಲ್ಲಿ ಟೀಮ್ ಇಂಡಿಯಾದ ಐದು ಟೆಸ್ಟ್ ಪಂದ್ಯಗಳನ್ನು ಆಡಲಿದೆ. ಈ ವೇಳೆ ಶಮಿ ಮುಂದಿನ ಎರಡು ಟೆಸ್ಟ್‌ಗಳಿಗೆ ತಂಡವನ್ನು ಸೇರುವ ಸಾಧ್ಯತೆ ಹೆಚ್ಚಿದೆ. ಬಿಸಿಸಿಐ ಶಮಿಗೆ ತೂಕ ಇಳಿಸುವಂತೆ ಸೂಚಿಸಿತ್ತು. ಈ ಬಗ್ಗೆ ಇನ್ನೇನು ಕೆಲವೇ ದಿನಗಳಲ್ಲೆ ಅಪ್ ಡೇಟ್ ಸಿಗುವ ಸಾಧ್ಯತೆ ಇದೆ. ಇತ್ತೀಚಿಗೆ ಶಮಿ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಫಿಟ್‌ನೆಸ್ ಪರೀಕ್ಷೆಗೆ ಒಳ ಪಡಬೇಕಿದೆ, ಈ ವೇಳೆ ಅವರ ಫಿಟ್ನೆಸ್ ವರದಿಗಾಗಿ ಬಿಸಿಸಿಐ ಕಾಯುತ್ತಿದೆ ಎಂದು ತಿಳಿದು ಬಂದಿದೆ.
ಶಮಿ ಕಮ್ ಬ್ಯಾಕ್?
ಟೀಮ್ ಇಂಡಿಯಾದ ಸ್ಟಾರ್ ವೇಗಿ ಮೊಹಮ್ಮದ್ ಶಮಿ ಈಗಾಗಲೇ ತಮ್ಮ ಕಿಟ್‌ನ್ನು ಆಸ್ಟ್ರೇಲಿಯಾಕ್ಕೆ ಕಳಿಸಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ. ಭಾರತದಲ್ಲಿ ನಡೆಯುತ್ತಿರುವ ಸೈಯದ್ ಮುಷ್ತಾಕ್ ಅಲಿ ಟಿ20 ಕ್ರಿಕೆಟ್ ಟೂರ್ನಿಯ ಬಳಿಕ ಅವರು ಆಸ್ಟ್ರೇಲಿಯಾ ಫೈಟ್ ಹತ್ತಲಿದ್ದಾರೆ ಎಂದು ತಿಳಿದು ಬಂದಿದೆ.

ಭಾರತದಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ ಇವರು ಬೌಲ್ ಮಾಡುವುದನ್ನು ನೋಡಬಹುದು ಎಂದು ಅಭಿಮಾನಿಗಳು ಕಾಯುತ್ತಿದ್ದರು. ಆದರೆ ಇದೇ ವೇಳೆಗೆ ಕಾಲಲ್ಲಿ ಮತ್ತೆ ಬಾವು ಕಾಣಿಸಿಕೊಂಡ ಹಿನ್ನೆಲೆ ಅವರನ್ನು ಪರೀಕ್ಷೆಗೆ ಒಳಪಡಿಸಲಾಯಿತು. ಸೈಯದ್ ಮುಷ್ತಾಕ್ ಅಲಿ ಟ್ರೋಫಿಯ ನಾಕೌಟ್ ಪಂದ್ಯಗಳು ಬೆಂಗಳೂರಿನಲ್ಲಿ ನಡೆಯುತ್ತಿವೆ. ಈ ಟೂರ್ನಿಯಲ್ಲು ಬಂಗಾಳ ತನ್ನ ಅಭಿಯಾನ ಮುಗಿಸಿದ ನಂತರ ಎನ್‌ಸಿಎ ವೈದ್ಯಕೀಯ ತಂಡ ಶಮಿ ಫಿಟ್ನೆಸ್ ಪರೀಕ್ಷೆ ನಡೆಸುವ ಸಾಧ್ಯೆ ಇದೆ.
ಈಗಾಗಲೇ ಆಸ್ಟ್ರೇಲಿಯಾ ಪ್ರವಾಸವನ್ನು ಬೆಳಸಿರುವ ಟೀಮ್ ಇಂಡಿಯಾ ಪರ್ತ್‌ನಲ್ಲಿ ಟೆಸ್ಟ್ ಗೆಲುವಿನ ನಗೆ ಬೀರಿ ಆಡಿಲೇಡ್‌ನಲ್ಲಿ ಪಂದ್ಯವನ್ನು ಆಡುತ್ತಿದೆ. ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ದೃಷ್ಟಿಯಿಂದ ಈ ಸರಣಿಯಲ್ಲಿ ಟೀಮ್ ಇಂಡಿಯಾ ಗೆಲುವು ಸಾಧಿಸುವುದು ಅನಿವಾರ್ಯ. ಹೀಗಾಗಿ ಟೀಮ್ ಇಂಡಿಯಾದ ಅನುಭವಿ ಬೌಲರ್ ತಂಡ ಸೇರಿದರೆ, ತಂಡದ ಮನೋಬಲವು ವೃದ್ಧಿಸಲಿದ್ದು, ಸರಣಿ ಗೆಲುವಿನ ಆಸೆ ಈಡೇರಬಹುದಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications