ರೋಹಿತ್ ಲಾಸ್ಟ್‌ಬಾಲ್‌ಗೆ 6 ಹೊಡೆದ್ರೂ ಗೆಲುವಿನ ಕ್ರೆಡಿಟ್ ಕೊಟ್ಟಿದ್ದು ಯಾರಿಗೆ!

ರೋಚಕ ಪಂದ್ಯದಲ್ಲಿ ಟೀಮ್ ಇಂಡಿಯಾ ನ್ಯೂಜಿಲ್ಯಾಂಡ್ ತಂಡವನ್ನು ಸೂಪರ್ ಓವರ್‌ನಲ್ಲಿ ಗೆದ್ದುಕೊಂಡಿದೆ. ಸೂಪರ್ ಓವರ್‌ನಲ್ಲಿ ಕೊನೆಯ ಎಸೆತದಲ್ಲಿಎರಡು ಸಿಕ್ಸರ್ ಸಿಡಿಸಿದ ರೋಹಿತ್ ಶರ್ಮಾ ರೋಚಕವಾಗಿ ಗೆಲ್ಲಿಸಿದರು. ಆದರೆ ರೋಹಿತ್ ಶರ್ಮಾ ಈ ಗೆಲುವಿನ ಕ್ರೆಡಿಟನ್ನು ತಾವು ತೆಗೆದುಕೊಳ್ಳದೆ ಇನ್ನೊಬ್ಬ ಆಟಗಾರನಿಗೆ ನೀಡಿದ್ದಾರೆ.
ಸೂಪರ್ ಓವರ್ ಇತಿಹಾಸದಲ್ಲಿ ಅದೃಷ್ಟವೇ ಇಲ್ಲದ ನ್ಯೂಜಿಲ್ಯಾಂಡ್!
ಟೀಮ್ ಇಂಡಿಯಾಗೆ ಸೂಪರ್ ಓವರ್‌ನಲ್ಲಿ ಗೆಲ್ಲಲು ಕೊನೆಯ ಎರಡು ಎಸೆತಗಳಲ್ಲಿ ಹತ್ತು ರನ್‌ಗಳ ಅವಶ್ಯಕತೆಯಿತ್ತು. ಕ್ರೀಸ್‌ನಲ್ಲಿದ್ದಿದ್ದು ಟೀಮ್ ಇಂಡಿಯಾದ ಡ್ಯಾಶಿಂಗ್ ಪ್ಲೇಯರ್ ರೋಹಿತ್ ಶರ್ಮಾ. ಎಲ್ಲರ ಚಿತ್ತವೂ ರೋಹಿತ್ ಮೇಲಿತ್ತು.
ಟಿಮ್ ಸೌಥಿ ಎಸೆತ ಐದನೇ ಎಸೆತವನ್ನು ರೋಹಿತ್ ಸಿಕ್ಸರ್‌ಗೆ ಅಟ್ಟಿದರು. ಭಾರತದ ಅಭಿಮಾನಿಗಳ ಎದೆ ಬಡಿತ ಮತ್ತಷ್ಟು ಹೆಚ್ಚಾಗಿತ್ತು. ಅಂತಿಮ ಎಸೆತದಲ್ಲಿ ಕನಿಷ್ಟ ಬೌಂಡರಿಯ ಅನಿವಾರ್ಯತೆಯಿತ್ತು. ಸೌಥಿ ಎಸೆತ ಅಂತಿಮ ಎಸೆತವನ್ನೂ ರೋಹಿತ್ ಸಿಕ್ಸ್ ಬಾರಿಸುವ ಮೂಲಕ ಗೆಲುವನ್ನು ಟೀಮ್ ಇಂಡಿಯಾ ಪಾಲಿಗೆ ತಂದು ಕೊಟ್ಟರು. ಹೀಗಿದ್ದರೂ ರೋಹಿತ್ ಗೆಲುವಿನ ಕ್ರೆಡಿಟ್ ತಾವು ತೆಗೆದುಕೊಳ್ಳಲಿಲ್ಲ.

ರೋಹಿತ್ ಕ್ರೆಡಿಟ್ ಕೊಟ್ಟಿದ್ದು ಯಾರಿಗೆ
ಹೌದು ಪಂದ್ಯದ ಗೆಲುವಿನ ಬಳಿಕ ಟ್ವೀಟ್ ಮಾಡಿರುವ ರೋಹಿತ್ ಶರ್ಮಾ ಈ ಗೆಲುವಿಗೆ ಟೀಮ್ ಇಂಡಿಯಾ ವೇಗಿ ಮೊಹಮ್ಮದ್ ಶಮಿ ಅವರಿಗೆ ಗೆಲುವಿನ ಕ್ರೆಡಿಟ್ ನೀಡಿದ್ದಾರೆ. ಮೊಹಮದ್ ಶಮಿ ಅವರ ಓವರ್ ನಮಗೆ ಗೆಲುವನ್ನು ತಂದುಕೊಟ್ಟಿತು ಎಂದಿದ್ದಾರೆ.

ಗೆಲುವಿನ ಸನಿಹದಲ್ಲಿದ್ದ ಕೀವಿಸ್
ಟೀಮ್ ಇಂಡಿಯಾ ನೀಡಿದ್ದ 180 ರನ್‌ಗಳ ಗುರಿಯನ್ನು ಬೆನ್ನಟ್ಟಿದ ನ್ಯೂಜಿಲ್ಯಾಂಡ್ ತಂಡ ಗೆಲುವಿನ ಸನಿಹಕ್ಕೆ ಬಂದಿತ್ತು. ಅಂತಿಮ ಓವರ್‌ನಲ್ಲಿ 9ರನ್‌ಗಳ ಅವಶ್ಯಕತೆಯಿತ್ತು. ಆದರೆ ಮೊಹಮ್ಮದ್ ಶಮಿ ಅಂತಿಮ ಓವರ್‌ನಲ್ಲಿ ಮ್ಯಾಜಿಕ್ ಮಾಡಿದರು. ಮೊದಲ ಎಸೆತಕ್ಕೆ ಸಿಕ್ಸರ್ ನೀಡಿದರೂ ಬಳಿಕ ಎರಡು ವಿಕೆಟ್ ಸಹಿತ ನ್ಯೂಜಿಲ್ಯಾಂಡ್ ತಂಡದ ಗೆಲುವಿಗೆ ತಡೆಯಾದರು.

ಟರ್ನಿಂಗ್ ಪಾಯಿಂಟ್
ಮೊಹಮದ್ ಶಮಿ ಎಸೆದ 20ನೇ ಓವರನ್ನು ದೃಷ್ಟಿಯಲ್ಲಿಟ್ಟುಕೊಂಡು ಟೀಮ್ ಇಂಡಿಯಾದ ಇಂದಿನ ಪಂದ್ಯ ಹೀರೋ ರೋಹಿತ್ ಶರ್ಮಾ ಪಂದ್ಯದ ಗೆಲುವಿಗೆ ಮೊಹಮದ್ ಶಮಿಯ ಓವರ್ ಕಾರಣ ಎಂದು ಮನಸಾರೆ ಹೊಗಳಿದ್ದಾರೆ. ರೋಹಿತ್ ಶರ್ಮಾರ ಈ ಧಾರಾಳ ಗುಣಕ್ಕೆ ಅಭಿಮಾನಿಗಳು ಸಂತಸ ವ್ಯಕ್ತಪಡಿಸುತ್ತಿದ್ದಾರೆ.

ಕೀವಿಸ್ ಹುಡುಗರನ್ನೂ ಹೊಗಳಿದ ಶರ್ಮಾ
ಇದೇ ಸಂದರ್ಭದಲ್ಲಿ ರೋಹಿತ್ ಶರ್ಮಾ ನ್ಯೂಜಿಲ್ಯಾಂಡ್ ತಂಡದ ಪ್ರಯತ್ನದ ಬಗ್ಗೆಯೂ ಹೊಗಳಿಕೆಯ ಮಾತುಗಳನ್ನಾಡಿದ್ದಾ. ನ್ಯುಜಿಲ್ಯಾಂಡ್ ತಂಡದ ಆಟಗಾರರು ಅತ್ಯುತ್ತಮವಾಗಿ ಆಡಿದ್ದಾರೆ ಎಂದು ರೋಹಿತ್ ಶರ್ಮಾ ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications