ಇತ್ತೀಚಿಗೆ ಟೀಮ್ ಇಂಡಿಯಾವನ್ನು ಯಾವುದೇ ಸರಣಿಗೆ ಪ್ರಕಟಿಸಿದಾಗಲೂ ಅಭಿಮಾನಿಗಳು ಕೇಳುತ್ತಿದ್ದ ಪ್ರಶ್ನೆ ಒಂದೆ. ಟೀಮ್ ಇಂಡಿಯಾದ ಸ್ವಿಂಗ್ ಬೌಲರ್‌ನನ್ನು ಈ ಬಾರಿ ಏಕೆ ತಂಡದಲ್ಲಿ ಆಯ್ಕೆ ಮಾಡಲಿಲ್ಲ ಅಂತಾ. ಅಭಿಮಾನಿಗಳಿಗೆ ಹರಕೆ ಪ್ರಾರ್ಥನೆ ಎಲ್ಲವೂ ಫಲಿಸಿದೆ. ಟೀಮ್ ಇಂಡಿಯಾದ ಸ್ಟಾರ್ ವೇಗದ ಬೌಲರ್ ಇದೇ ಜನವರಿ 22 ರಂದು ಇಂಗ್ಲೆಂಡ್ ವಿರುದ್ಧ ಕಣಕ್ಕೆ ಇಳಿಯಲು ಸಜ್ಜಾಗಿದ್ದಾರೆ. ಈ ಮೂಲಕ ತಾನು ಫಿಟ್ ಆಗಿದ್ದೇನೆ ಎಂದು ಸಾಬೀತು ಪಡಿಸಿಕೊಳ್ಳಲು ಮಾಸ್ಟರ್ ಪ್ಲ್ಯಾನ್ ಮಾಡಿದ್ದಾರೆ.
ಟೀಮ್ ಇಂಡಿಯಾದಿಂದ ಸುಮಾರು 430 ದಿನ ದೂರ ಉಳಿದ ಬಳಿಕ ಮತ್ತೆ ಸ್ವಿಂಗ್ ಬೌಲರ್ ಬ್ಲ್ಯೂ ಜೆರ್ಸಿ ತೊಡಲು ರೆಡಿ ಆಗಿದ್ದಾರೆ. ಭಾರತದಲ್ಲಿ ನಡೆದಿದ್ದ ಏಕದಿನ ವಿಶ್ವಕಪ್‌ನ ಫೈನಲ್ ಪಂದ್ಯದಲ್ಲಿ ಇವರು ತಂಡದ ಪರ ಕೊನೆಯ ಬಾರಿಗೆ ಕಣಕ್ಕೆ ಇಳಿದಿದ್ದರು. ಈಗ ಮತ್ತೆ ಗ್ರ್ಯಾಂಡ್ ಕಂ ಬ್ಯಾಕ್ ಮಾಡಲು ಸ್ಟೇಜ್ ಸೆಟ್ ಮಾಡಿಕೊಂಡಿದ್ದಾರೆ. ಆ ಸ್ವಿಂಗ್ ಕಿಂಗ್ ಮೊಹಮ್ಮದ್ ಶಮಿ.

ಏಕದಿನ ವಿಶ್ವಕಪ್ ನವೆಂಬರ್ 19, 2023 ರಂದು ನಡೆದಿತ್ತು. ಆ ಬಳಿಕ ಅವರು ಪಾದದ ಗಾಯಕ್ಕೆ ತುತ್ತಾದರು. ತದನಂತರ ಅವರು ಶಸ್ತ್ರ ಚಿಕತ್ಸೆಗೆ ಒಳಗಾದರು. ಅಲ್ಲದೆ ಬಹು ದಿನಗಳು ಚೇತರಿಸಿಕೊಂಡ ಬಳಿಕ ಮತ್ತೆ ತಂಡದ ಪರ ಅಬ್ಬರಿಸಲು ರೆಡಿ ಆಗಿದ್ದಾರೆ. ಇವರು ಇದಕ್ಕೂ ಮೊದಲೇ ತಂಡವನ್ನು ಸೇರಿಕೊಳ್ಳಬೇಕಿತ್ತು. ಆದರೆ ಫಿಟ್ನೆಸ್ ಸಮಸ್ಯೆಯಿಂದ ಹೋರಾಡಿದರು. ಕೊನೆಗೆ ಬಿಸಿಸಿಐ ನೀಡಿದ್ದ ಟಾಸ್ಕ್ ಕಂಪ್ಲೀಟ್ ಮಾಡಿ ಟಿ20 ತಂಡ ಸೇರಿಕೊಂಡಿದ್ದಾರೆ. ಇವರು ಮೈದಾನಕ್ಕೆ ಇಳಿಯುವ ಮುನ್ನವೇ ಎದುರಾಳಿಗೆ ಈಗಲೇ ನಡುಕ ಶುರುವಾಗಿದೆ.
ಶಮಿ ಒಬ್ಬ ಶಿಸ್ತು ಬದ್ಧ ವೇಗದ ಬೌಲರ್. ಅಷ್ಟೇ ಅಲ್ಲ ಹಲವು ವೇರಿಯೇಷನ್ ಗಳನ್ನು ಹೊಂದಿದ್ದಾರೆ. ಸ್ವಿಂಗ್ ಬೌಲಿಂಗ್ ಮಾಡುವುದರಲ್ಲಿ ಇವರು ನಿಸ್ಸಿಮರು. ಸಿಕ್ಕ ಅವಕಾಶವನ್ನು ಹೇಗೆ ಬಳಸಿಕೊಳ್ಳಬೇಕು ಎಂಬುದನ್ನು ಇವರು ಯುವ ಆಟಗಾರರಿಗೆ ತೋರಿಸಿಕೊಟ್ಟಿದ್ದಾರೆ. ಬಾರ್ಡರ್ ಗವಾಸ್ಕರ್ ಸರಣಿಗೆ ಇವರನ್ನು ತಂಡದಲ್ಲಿ ಆಯ್ಕೆ ಮಾಡಲಾಗುತ್ತದೆ ಎಂಬ ಮಾತುಗಳು ಕೇಳಿ ಬಂದಿದ್ದವು. ಆದರೆ ಫಿಟ್ನೆಸ್ ಇವರು ಆಸ್ಟ್ರೇಲಿಯಾ ಫ್ಲೈಟ್ ಹತ್ತಲು ಅಡ್ಡಿ ಮಾಡಿತು.
ಆದರೆ ಈಗ ತವರಿನಲ್ಲಿ ಪಂದ್ಯಗಳು ನಡೆಯುತ್ತಿದ್ದು ಸಂಪೂರ್ಣ ಫಿಟ್ ಆಗಿದ್ದಾರೆ. ಅಲ್ಲದೆ ಮುಂಬರು ಐಸಿಸಿ ಮೆಗಾ ಟೂರ್ನಿಗೂ ಸಿದ್ಧರಾಗುವುದಾಗಿ ಸಾರಿ ಹೇಳಲಿದ್ದಾರೆ. ಇವರು ಗಾಯದಿಂದ ಚೇತರಿಸಿಕೊಂಡ ಬಳಿಕ ದೇಶೀಯ ಟೂರ್ನಿಗಳಲ್ಲಿ ಅಮೋಘ ಪ್ರದರ್ಶನ ನೀಡಿ ಎಲ್ಲರ ಗಮನ ಸೆಳೆದಿದ್ದಾರೆ.

ರಣಜಿ ಟ್ರೋಫಿ, 1 ಪಂದ್ಯ, 7 ವಿಕೆಟ್
ಸೈಯದ್ ಮುಷ್ತಾಕ್ ಅಲಿ ಟಿ20, 9 ಪಂದ್ಯ, 13 ವಿಕೆಟ್,
ವಿಜಯ್ ಹಜಾರೆ, 3 ಪಂದ್ಯ, 5 ವಿಕೆಟ್,