ಬಾಂಗ್ಲಾ ವಿರುದ್ಧದ ಸರಣಿಯ ಮೇಲೆ ಸ್ಟಾರ್ ಬೌಲರ್ ಕಣ್ಣು: ನೆಟ್ಸ್‌ನಲ್ಲಿ ಬೆವರು ಹರಿಸಿದ ವೇಗಿ
ಟೀಮ್ ಇಂಡಿಯಾ ಸದ್ಯ ಶ್ರೀಲಂಕಾ ಪ್ರವಾಸವನ್ನು ಮುಗಿಸಿದೆ. ಈ ಪ್ರವಾಸದಲ್ಲಿ ಭಾರತ ತಂಡ ಟಿ20 ಸರಣಿಯನ್ನು ಗೆದ್ದು ಕೊಂಡಿದ್ದು, ಏಕದಿನ ಸರಣಿಯನ್ನು ಕೈ ಚೆಲ್ಲಿದೆ. ಕೇವಲ ಒಂದೇ ಪ್ರಶಸ್ತಿಯನ್ನು ಹೊತ್ತ ಟೀಮ್ ಇಂಡಿಯಾ ತವರಿಗೆ ಮರಳಲಿದೆ. ಈ ಪ್ರವಾಸದ ಬಳಿಕ ಟೀಮ್ ಇಂಡಿಯಾ ಆಟಗಾರರಿಗೆ ಐದು ವಾರಗಳ ಕಾಲ ರೆಸ್ಟ್ ಇರಲಿದೆ.
ಟೀಮ್ ಇಂಡಿಯಾ ಇನ್ನು ತನ್ನ ಮುಂದಿನ ಸರಣಿಯನ್ನು ಸೆಪ್ಟಂಬರ್‌ನಲ್ಲಿ ಆಡಲಿದೆ. ಅದು ಬಾಂಗ್ಲಾದೇಶದ ವಿರುದ್ಧ ತವರಿನಲ್ಲಿ ಟೆಸ್ಟ್ ಹಾಗೂ ಸೀಮತ ಓವರ್‌ಗಳ ಪಂದ್ಯವನ್ನು ಆಡಲಿದೆ. ಈ ಟೂರ್ನಿಯಲ್ಲಿ ಸ್ಥಾನ ಪಡೆಯಲು ಭಾರತದ ಸ್ಟಾರ್ ಆಟಗಾರರು ಬೆವರು ಹರಿಸುತ್ತಿದ್ದಾರೆ. ವಿಶ್ವಕಪ್ ಬಳಿಕ ಗಾಯಕ್ಕೆ ತುತ್ತಾಗಿದ್ದ ಸ್ಟಾರ್ ವೇಗದ ಬೌಲರ್ ಈ ಸರಣಿಯಲ್ಲಿ ತಂಡವನ್ನು ಸೇರಿಕೊಳ್ಳಬಹುದು.

ವಿಶ್ವಕಪ್ ವೇಳೆ ಗಾಯ
ಭಾರತದಲ್ಲಿ ನಡೆದಿದ್ದ ಏಕದಿನ ವಿಶ್ವಕಪ್‌ನಲ್ಲಿ ತಮ್ಮ ವೇಗದ ಬೌಲಿಂಗ್ ಮೂಲಕ ಎದುರಾಳಿ ಬ್ಯಾಟರ್‌ಗಳನ್ನು ಕಾಡಿದ್ದ ಟೀಮ್ ಇಂಡಿಯಾದ ಮೊಹಮ್ಮದ್ ಶಮಿ, ಈಗ ಅಂಗಳ ಪ್ರವೇಶಿಸಲು ಸಿದ್ಧತೆ ನಡೆಸಿದ್ದಾರೆ. ಗಾಯದಿಂದ ಚೇತರಿಸಿಕೊಂಡ ಬಳಿಕ ಶಮಿ ಸದ್ಯ ನೆಟ್ಸ್‌ನಲ್ಲಿ ಬೆವರು ಹರಿಸುತ್ತಿದ್ದಾರೆ. ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದ ಶಮಿ ಈಗ ಚೇತರಿಸಿಕೊಳ್ಳುತ್ತಿದ್ದಾರೆ.
ಟಿ20 ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯುತ್ತಾರೆ ಎಂಬ ಅಚಲ ನಂಬಿಕೆಯನ್ನು ಹೊಂದಿದ್ದ ಫ್ಯಾನ್ಸ್‌ಗೆ ನಿರಾಸೆ ಕಾದಿತ್ತು. ಈಗ ಶಮಿ ರೆಡ್ ಬೌಲ್ ಕ್ರಿಕೆಟ್‌ನಲ್ಲಿ ತಮ್ಮ ಜಲ್ವಾ ತೋರಿಸಲು ತಯಾರಿ ನಡೆಸಿದ್ದಾರೆ. ಸದ್ಯ ಅವರು ನೆಟ್ಸ್‌ನಲ್ಲಿ ಬೆವರು ಹರಿಸುತ್ತಿದ್ದಾರೆ.
ಕಮ್‌ಬ್ಯಾಕ್ ಕನಸು
ಇಎಸ್‌ಪಿಎನ್ ಕ್ರಿಕ್‌ಇನ್ಫೋ ವರದಿಯ ಪ್ರಕಾರ ಶಮಿ ಸೆಪ್ಟೆಂಬರ್‌ನಲ್ಲಿ ಅಂಗಳ ಪ್ರವೇಶಿಸಬಹುದಾಗಿದೆ. ಅಂದಹಾಗೆ ಇವರು ಬಾಂಗ್ಲಾದೇಶದ ವಿರುದ್ಧ ಸರಣಿಗೆ ಟೀಮ್ ಇಂಡಿಯಾ ಸೇರುವ ಕನಸು ಕಾಣುತ್ತಿದ್ದಾರೆ. ಶಮಿ ಅಂತಾರಾಷ್ಟ್ರೀಯ ಟೂರ್ನಿಯಲ್ಲಿ ಕಮ್‌ಬ್ಯಾಕ್ ಮಾಡುವ ಮೊದಲು ತಮ್ಮ ಫಿಟ್ನೆಸ್ ಸಾಬೀತು ಪಡಿಸುವುದು ಅವಶ್ಯ. ಹೀಗಾಗಿ ಇವರು ದುಲೀಪ್ ಟ್ರೋಫಿಯಲ್ಲಿ ಕಾಣಿಸಿಕೊಂಡರು ಅಚ್ಚರಿಯಿಲ್ಲ. ದುಲೀಪ್ ಟ್ರೋಫಿ ಸೆಪ್ಟಂಬರ್ 5ರಿಂದ ಪ್ರಾರಂಭವಾಗಲಿದೆ.

ಶಮಿ ಸದ್ಯ ಬೆಂಗಳೂರಿನ ಎನ್‌ಸಿಎನಲ್ಲಿ ಅಭ್ಯಾಸ ನಡೆಸುತ್ತಿದ್ದಾರೆ. 33 ವರ್ಷದ ವೇಗದ ಬೌಲರ್ ಶೀಘ್ರ ಚೇತರಿಸಿಕೊಳ್ಳಬಹುದು ಎಂದು ಆಯ್ಕೆ ಸಮಿತಿ ಅಧ್ಯಕ್ಷ ಅಜಿತ್ ಅರ್ಗರಕ್ ಸಹ ಹೇಳಿದ್ದರು.
ಟೆಸ್ಟ್ ತಂಡಕ್ಕೆ ಅವಶ್ಯಕ
ಉತ್ತರ ಪ್ರದೇಶದಲ್ಲಿ ಜನಿಸಿರುವ ಶಮಿ, ಬಂಗಾಳ ಪರ ರಣಜಿ ಟೂರ್ನಿಯನ್ನು ಆಡುತ್ತಾರೆ. ಒಂದು ವೇಳೆ ಇವರು ಬಾಂಗ್ಲಾ ವಿರುದ್ಧದ ಟೆಸ್ಟ್ ಸರಣಿಗೆ ತಂಡದಲ್ಲಿ ಸ್ಥಾನವನ್ನು ಪಡೆದಿದ್ದೇ ಆದಲ್ಲಿ, ಫುಲ್ ಬ್ಯೂಸಿ ಶೆಡ್ಯೂಲ್‌ನಲ್ಲಿ ಪಂದ್ಯಗಳನ್ನು ಆಡಲಿದ್ದಾರೆ. ಬಾಂಗ್ಲಾ ಸರಣಿಯ ಬಳಿಕ, ತವರಿನಲ್ಲಿ ನ್ಯೂಜಿಲೆಂಡ್ ವಿರುದ್ಧ ಟೆಸ್ಟ್ ಸರಣಿ ಹಾಗೂ ವರ್ಷಾಂತ್ಯದಲ್ಲಿ ಆಸ್ಟ್ರೇಲಿಯಾದಲ್ಲಿ ಬಾರ್ಡರ್ ಗವಾಸ್ಕರ್ ಟ್ರೋಫಿಯನ್ನು ಟೀಮ್ ಇಂಡಿಯಾ ಆಡಲಿದೆ. ಈ ಎರಡೂ ಸರಣಿಗೆ ಮೊಹಮ್ಮದ್ ಶಮಿ ತಂಡದಲ್ಲಿ ಇರುವುದು ಅವಶ್ಯಕ.
ಏಕದಿನ ವಿಶ್ವಕಪ್‌ನಲ್ಲಿ ಹಾರ್ದಿಕ್ ಪಾಂಡ್ಯ ಗಾಯಕ್ಕೆ ತುತ್ತಾಗುತ್ತಿದ್ದಂತೆ ತಂಡದಲ್ಲಿ ಸ್ಥಾನ ಪಡೆದ ಮೊಹಮ್ಮದ್ ಶಮಿ, ತಮ್ಮ ಧಾಮಕೆದಾರ್ ಬೌಲಿಂಗ್ ಮೂಲಕ ಎಲ್ಲರ ಗಮನ ಸೆಳೆದಿದ್ದರು. ಅಲ್ಲದೆ ಟೂರ್ನಿಯಲ್ಲಿ ಗರಿಷ್ಠ ವಿಕೆಟ್ ಪಡೆದ ಸಾಧನೆಯನ್ನು ಮಾಡಿದ್ದರು. ನ್ಯೂಜಿಲೆಂಡ್ ವಿರುದ್ಧ ಸೆಮಿಫೈನಲ್ ಪಂದ್ಯದಲ್ಲಿ ಬಿಗುವಿನ ದಾಳಿ ನಡೆಸಿದ್ದ ಶಮಿ ಅಬ್ಬರಿಸಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications