Mohammed Shami: ಬ್ಯಾಟಿಂಗ್‌ನಲ್ಲೂ ತಂಡಕ್ಕೆ ನೆರವಾದ ಮೊಹಮ್ಮದ್ ಶಮಿ: ಹೇಗಿತ್ತು ಅವರ ಆಟ? ಇಲ್ಲಿದೆ ವರದಿ
ಭಾರತ ತಂಡಕ್ಕೆ ಸ್ಟಾರ್ ಆಟಗಾರ ಮೊಹಮ್ಮದ್ ಶಮಿ ಅನುಪಸ್ಥಿತಿ ಬಹುವಾಗಿ ಕಾಡುತ್ತಿದೆ. ಅವರು ಸಂಪೂರ್ಣ ಫೀಟ್ ಎಂದು ಯಾವಾಗ ವರದಿ ಬರುತ್ತದೆಯೋ ಎಂದು ಅಭಿಮಾನಿಗಳು ಸಹ ಕಾಯುತ್ತಿದ್ದಾರೆ. ಇದೇ ವೇಳೆ ತಾವು ಬರೀ ಬೌಲಿಂಗ್‌ನಲ್ಲಿ ಅಷ್ಟೇ ಅಲ್ಲ, ಬ್ಯಾಟಿಂಗ್‌ನಲ್ಲೂ ತಂಡಕ್ಕೆ ನೆರವಾಗಬಲ್ಲೆ ಎಂಬುದನ್ನು ಶಮಿ ಸಾರಿ ಹೇಳಿದ್ದಾರೆ. ಬೆಂಗಳೂರಿನಲ್ಲಿ ನಡೆದ ಸೈಯದ್ ಮುಷ್ತಾಕ್ ಅಲಿ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಶಮಿ 188ರ ಸ್ಟ್ರೈಕ್ ರೇಟ್‌ನಲ್ಲಿ ರನ್ ಕಲೆ ಹಾಕಿದ್ದಾರೆ.
ಸೋಮವಾರದಿಂದ ಆರಂಭವಾದ ಸೈಯದ್ ಮುಷ್ತಾಕ್ ಅಲಿ ಟಿ20 ಕ್ರಿಕೆಟ್ ಟೂರ್ನಿಯ ಪ್ರಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಬಂಗಾಳ ಪರ ಆಡಿರುವ ಶಮಿ ತಮ್ಮಲ್ಲಿರುವ ಆಲ್‌ರೌಂಡರ್ ಕ್ಷಮತೆಯನ್ನು ಸಾಬೀತು ಮಾಡಿದ್ದಾರೆ. ಪ್ರಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಬಂಗಾಳ ತಂಡ ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್‌ಗೆ 159 ರನ್ ಸಿಡಿಸಿತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಚಂಡೀಗಡ 20 ಓವರ್‌ಗಳಲ್ಲಿ 9 ವಿಕೆಟ್‌ಗೆ 156 ರನ್ ಸಿಡಿಸಿ ಸೋಲು ಕಂಡಿತು.

ಶಮಿ ಅಮೋಘ ಬ್ಯಾಟಿಂಗ್
ಬಂಗಾಳ ತಂಡದ ಪರ ಆರಂಭಿಕ ಕರಣ್ ಲಾಲ್ 33 ರನ್ ಬಾರಿಸಿ ಅಧಿಕ ರನ್ ಬಾರಿಸಿದ ಬ್ಯಾಟರ್ ಎಂಬ ಹೆಗ್ಗಳಿಕೆ ತಮ್ಮದಾಗಿಸಿಕೊಂಡರು. ಇನ್ನು ತಂಡದ ಪರ ಎರಡನೇ ಗರಿಷ್ಠ ರನ್ ಸ್ಕೋರ್‌ರ ಎಂಬ ಖ್ಯಾತಿ ಮೊಹಮ್ಮದ್ ಶಮಿ ಅವರಿಗೆ ಸಲ್ಲುತ್ತದೆ. ಇವರು ಕೆಳ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದ ಶಮಿ ಸ್ಫೋಟಕ ಬ್ಯಾಟಿಂಗ್ ನಡೆಸಿದರು. ಇವರು ಡೆತ್ ಓವರ್‌ನಲ್ಲಿ ಬ್ಯಾಟಿಂಗ್ ಮಾಡಲು ಬಂದರು. ಈ ವೇಳೆ ನುರಿತ ಫಿನಿಷರ್ ರೀತಿಯಲ್ಲಿ ಶಮಿ ಬ್ಯಾಟಿಂಗ್ ನಡೆಸಿದರು.
ಕೊನೆಯ ಓವರ್‌ನಲ್ಲಿ ಶಮಿ ಆರ್ಭಟ
ಮೊಹಮ್ಮದ್ ಶಮಿ 19 ಓವರ್ ಮುಕ್ತಾಯಕ್ಕೆ 11 ಎಸೆತಗಳನ್ನು ಎದುರಿಸಿ 14 ರನ್ ಬಾರಿಸಿದ್ದರು. ಆದರೆ ಕೊನೆಯ ಓವರನಲ್ಲಿ ಶಮಿ ಅಮೋಘ ಬ್ಯಾಟಿಂಗ್ ನಡೆಸಿದರು. ಟೀಮ್ ಇಂಡಿಯಾದ ಅನುಭವಿ ವೇಗದ ಬೌಲರ್ ಸಂದೀಪ್ ಶರ್ಮಾ ಅವರ ಎಸೆತದಲ್ಲಿ ಶಮಿ ಅಮೋಘ ಬ್ಯಾಟಿಂಗ್ ಪ್ರದರ್ಶಿಸಿದರು. ಈ ವೇಳೆ ಶಮಿ ಮೊದಲ ಎಸೆತದಲ್ಲಿ ರನ್ ಬಾರಿಸಲಿಲ್ಲ. ಕೊನೆಯ ಓವರ್‌ನ ಎರಡನೇ ಎಸೆತದಲ್ಲಿ ಸಿಕ್ಸರ್, ಮೂರನೇ ಎಸೆತ ಡಾಟ್, ನಾಲ್ಕನೇ ಎಸೆತದಲ್ಲಿ 2, ಕೊನೆಯ ಎರಡು ಎಸೆತಗಳಲ್ಲಿ ಸಿಕ್ಸರ್ ಹಾಗೂ ಬೌಂಡರಿ ಬಾರಿಸಿ ಅಬ್ಬರಿಸಿದರು. ಈ ವೇಳೆ ಜಸ್ಟ್ 17 ಎಸೆತಗಳಲ್ಲಿ 3 ಬೌಂಡರಿ, 2 ಸಿಕ್ಸರ್ ನೆರವಿನಿಂದ 32 ರನ್ ಸಿಡಿಸಿದರು.

ಇನ್ನು ಬೌಲಿಂಗ್‌ನಲ್ಲೂ ಮೊಹಮ್ಮದ್ ಶಮಿ ಚಂಡೀಗಡ ವಿರುದ್ಧ ಸೊಗಸಾದ ಬೌಲಿಂಗ್ ನಡೆಸಿದರು. ಈ ವೇಳೆ 4 ಓವರ್ ಬೌಲಿಂಗ್ ನಡೆಸಿ 25 ರನ್ ನೀಡಿ ಒಂದು ವಿಕೆಟ್ ಕಬಳಿಸಿದರು. ಇನ್ನು ಸಾಯನ್ ಘೋಷ್ ಭರ್ಜರಿ ದಾಳಿ ನಡೆಸಿ 30 ರನ್ ನೀಡಿ 4 ವಿಕೆಟ್ ಕಬಳಿಸಿ ಅಬ್ಬರಿಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications