Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಜಹೀರ್ ಖಾನ್‌ ದಾಖಲೆಯನ್ನು ಅಳಿಸಿದ Mohammed Shami

ಹೈದರಾಬಾದ್‌ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್‌ನ 19ನೇ ಆವೃತ್ತಿಯ 10ನೇ ಪಂದ್ಯ ನಡೆಯಿತು. ಈ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕ ರಿಷಭ್ ಪಂತ್‌ ಟಾಸ್‌ ಗೆದ್ದು ಮೊದಲು ಬೌಲಿಂಗ್ ಮಾಡುವ ಆಯ್ಕೆಯನ್ನು ಮಾಡಿದರು. ಈ ಆಯ್ಕೆಯನ್ನು ಬೌಲರ್‌ಗಳು ಸಹ ಸಮರ್ಥಿಸಿಕೊಂಡರು. ಟೀಮ್ ಇಂಡಿಯಾಕ್ಕೆ ಕಂ ಬ್ಯಾಕ್‌ ಮಾಡುವ ಕನಸು ಕಾಣುತ್ತಿರುವ ಮೊಹಮ್ಮದ್ ಶಮಿ ಬಿಗುವಿನ ದಾಳಿ ನಡೆಸಿ ಅಬ್ಬರಿಸಿದರು. ಈ ಪಂದ್ಯದಲ್ಲಿ ಬಿಗುವಿನ ದಾಳಿಯನ್ನು ನಡೆಸಿದ ಶಮಿ ಎಲ್ಲರ ಗಮನ ಸೆಳೆದರು.

ಮೊಹಮ್ಮದ್ ಶಮಿ ಇನಿಂಗ್ಸ್‌ ಮೊದಲ ಓವರ್‌ನ ಕೊನೆಯ ಎಸೆತದಲ್ಲಿ ಅಭಿಷೇಕ್‌ ಶರ್ಮಾ ಅವರಿಗೆ ಖೆಡ್ಡಾ ತೋಡಿದರು. ಈ ಮೂಲಕ ಅಭಿಷೇಕ್‌ ಶರ್ಮಾ ಸಹ ಕೆಟ್ಟ ದಾಖಲೆಯನ್ನು ಬರೆದರು. ಈ ವರ್ಷದಲ್ಲಿ ಅಭಿಷೇಕ್ ಶರ್ಮಾ ಟಿ20 ಸ್ವರೂಪದಲ್ಲಿ ಆರು ಬಾರಿ ಶೂನ್ಯಕ್ಕೆ ಔಟ್ ಆದರು. ಸಂಜು ಸ್ಯಾಮ್ಸನ್‌ (2024) ಹಾಗೂ ರೋಹಿತ್‌ ಶರ್ಮಾ (2018) ಸಹ ಒಂದೇ ವರ್ಷದಲ್ಲಿ ಆರು ಬಾರಿ ಔಟ್ ಆಗಿದ್ದರು. ಮುಂಬರುವ ಪಂದ್ಯಗಳಲ್ಲಿ ಅಭಿಷೇಕ್‌ ಇನ್ನೊಮ್ಮೆ ಸೊನ್ನೆ ಸುತ್ತಿದರೆ, ಈ ಇಬ್ಬರ ದಾಖಲೆಯನ್ನು ಮೀರಿ ನಿಲ್ಲುತ್ತಾರೆ.

Mohammed Shami

ಮೊಹಮ್ಮದ್‌ ಶಮಿ ಎಸೆದ ಔಟ್ ಸೈಡ್ ಆಫ್ ಸ್ಟಂಪ್ ಎಸೆತವನ್ನು ತಪ್ಪಾಗಿ ಗ್ರಹಿಸಿದ ಅಭಿಷೇಕ್‌ ಶರ್ಮಾ ಸಿದ್ಧಾರ್ಥ್ ಅವರು ಹಿಡಿದ ಡೈವಿಂಗ್‌ ಕ್ಯಾಚ್‌ಗೆ ಬಲಿಯಾದರು.

ಪವರ್‌ ಫುಲ್‌ ಬೌಲಿಂಗ್‌

ಮೊಹಮ್ಮದ್ ಶಮಿ ತಮ್ಮ ಎರಡನೇ ಓವರ್‌ನ ಮೊದಲ ಎಸೆತದಲ್ಲೇ ಟ್ರಾವಿಸ್ ಹೆಡ್ ಅವರನ್ನು ಔಟ್ ಮಾಡಿದರು. ಈ ಮೂಲಕ ಪವರ್‌ ಪ್ಲೇನಲ್ಲಿ ಅತಿ ಹೆಚ್ಚು ವಿಕೆಟ್‌ಗಳನ್ನು ಪಡೆದ ಜಹೀರ್ ಖಾನ್ ಅವರ ದಾಖಲೆಯನ್ನು ಮೀರಿ ನಿಂತರು. ಶಮಿ ಪವರ್‌ ಪ್ಲೇನಲ್ಲಿ 54 ವಿಕೆಟ್‌ಗಳನ್ನು ಪಡೆದಿದ್ದಾರೆ. ಈ ಪಟ್ಟಿಯಲ್ಲಿ ಭುವನೇಶ್ವರ್‌ ಕುಮಾರ್‌ 79 ವಿಕೆಟ್‌ಗಳೊಂದಿಗೆ ಅಗ್ರ ಸ್ಥಾನದಲ್ಲಿದ್ದಾರೆ.


ಐಪಿಎಲ್‌ನ ಪವರ್‌ ಪ್ಲೇನಲ್ಲಿ ಅಧಿಕ ವಿಕೆಟ್‌ ಪಡೆದ ಬೌಲರ್ಸ್‌

ಭುವನೇಶ್ವರ್ ಕುಮಾರ್ - 79 ವಿಕೆಟ್‌
ಟ್ರೆಂಟ್ ಬೌಲ್ಟ್ - 72 ವಿಕೆಟ್‌
ದೀಪಕ್ ಚಾಹರ್ - 67 ವಿಕೆಟ್‌
ಸಂದೀಪ್ ಶರ್ಮಾ - 62 ವಿಕೆಟ್‌
ಉಮೇಶ್ ಯಾದವ್ - 58 ವಿಕೆಟ್‌
ಇಶಾಂತ್ ಶರ್ಮಾ - 57 ವಿಕೆಟ್‌
ಮೊಹಮ್ಮದ್ ಶಮಿ - 54 ವಿಕೆಟ್‌
ಜಹೀರ್ ಖಾನ್ - 52 ವಿಕೆಟ್‌

ಮೊಹಮ್ಮದ್‌ ಶಮಿ 4 ಓವರ್‌ಗಳಲ್ಲಿ 9 ರನ್‌ ಸಿಡಿಸಿ 2 ವಿಕೆಟ್‌ ಪಡೆದರು. ಈ ಮೂಲಕ ತಮ್ಮಲ್ಲಿ ಇನ್ನು ಬೌಲಿಂಗ್ ಮಾಡುವ ಸಾಮರ್ಥ್ಯ ಇದೆ ಎಂದು ಸಾಬೀತು ಪಡಿಸಿದರು.

Story first published: Sunday, April 5, 2026, 20:31 [IST]
Other articles published on Apr 5, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+