Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Mohammed Shami ಜಾದೂ: ಅಭಿಷೇಕ್ ಶರ್ಮಾ ವಿಕೆಟ್‌ ಪಡೆದ ಮ್ಯಾಜಿಕ್‌ ಎಸೆತದ ರಹಸ್ಯ ಇಲ್ಲಿದೆ

ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್‌) ರೋಚಕತೆ ಹೆಚ್ಚಿಸಿದೆ. ಈ ಲೀಗ್‌ನಲ್ಲಿ ಅನುಭವಿ ಹಾಗೂ ಯುವ ಆಟಗಾರರು ಭರ್ಜರಿ ಪ್ರದರ್ಶನ ನೀಡುತ್ತಿದ್ದಾರೆ. ಈ ಲೀಗ್‌ನಲ್ಲಿ ಅನುಭವಿ ಬೌಲರ್‌ ಮೊಹಮ್ಮದ್ ಶಮಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ಪರ ಕಣಕ್ಕೆ ಇಳಿದಿದ್ದು ಸ್ಥಿರ ಪ್ರದರ್ಶನ ನೀಡುತ್ತಿದ್ದಾರೆ. ಅಲ್ಲದೆ ಇವರ ಬೌಲಿಂಗ್ ಎದುರಿಸಲು ಸ್ಟಾರ್ ಬ್ಯಾಟರ್‌ಗಳು ಕಂಗಾಲಾಗಿದ್ದಾರೆ. ಇತ್ತೀಚಿಗೆ ಶಮಿ, ಹೈದರಾಬಾದ್ ವಿರುದ್ಧ ಅಮೋಘ ಪ್ರದರ್ಶನ ನೀಡಿ ಜಯದಲ್ಲಿ ಮಿಂಚಿದ್ದಾರೆ. ಇವರರ ಸನ್‌ ವಿರುದ್ಧ ಪವರ್ ಫುಲ್ ಬೌಲಿಂಗ್ ಪ್ರದರ್ಶನ ನೀಡಿ ಗಮನ ಸೆಳೆದರು. ಇವರ ಅಮೋಘ ಬೌಲಿಂಗ್ ಪ್ರದರ್ಶನಕ್ಕೆ ಇವರಿಗೆ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಸಹ ನೀಡಲಾಯಿತು. ಇವರ ಈ ಬೌಲಿಂಗ್‌ ಬಗ್ಗೆ ಎಲ್ಎಸ್‌ಜಿ ತಂಡದ ಕೋಚ್ ಮಾತನಾಡಿದ್ದಾರೆ.

ಲಕ್ನೋ ಸೂಪರ್ ಜೈಂಟ್ಸ್‌ನ ಸ್ಪಿನ್ ಕೋಚ್ ಕಾರ್ಲ್ ಕ್ರೋವ್ ಅವರು ಅಭಿಷೇಕ್ ಶರ್ಮಾ ಅವರನ್ನು ಔಟ್ ಮಾಡಲು ಮೊಹಮ್ಮದ್ ಶಮಿ ಬಳಸಿದ ಎಸೆತವು ನಾಲ್ಕು ದಿನಗಳಿಂದ ಅವರು ಕೆಲಸ ಮಾಡುತ್ತಿದ್ದ ಹೊಸ ಎಸೆತ ಎಂದು ಬಹಿರಂಗಪಡಿಸಿದ್ದಾರೆ.

Mohammed Shami

ಈ ಎಸೆತವನ್ನು ತಮ್ಮ ಬತ್ತಳಿಕೆಗೆ ಸೇರಿಸಿಕೊಳ್ಳಲು ಮೊಹಮ್ಮದ್‌ ಶಮಿ ಬೌಲಿಂಗ್ ಕೋಚ್‌ ಭರತ್ ಅರುಣ್ ಅವರೊಂದಿಗೆ ಕೆಲಸ ಮಾಡಿದ್ದಾರೆ. ಹೊಸ ಎಸೆತದ ಸಹಾಯದಿಂದಲೇ ಶಮಿ, ಸ್ಫೋಟಕ ಬ್ಯಾಟರ್‌ ಅಭಿಷೇಕ್ ಶರ್ಮಾ ಅವರನ್ನು ಔಟ್ ಮಾಡಿದರು. ಅಭಿಷೇಕ್‌ ಶರ್ಮಾ ಅವರನ್ನು ಔಟ್ ಮಾಡಲು ಸ್ಲೋ ವೈಡ್‌ ಎಸೆತವನ್ನು ಪ್ರಯೋಗಿಸಿದರು. ಈ ಎಸೆತದಲ್ಲಿ ಬಿಗ್ ಹಿಟ್ ಬಾರಿಸಲು ಹೋಗಿ ಥರ್ಡ್‌ ಮ್ಯಾನ್‌ನಲ್ಲಿ ಕ್ಯಾಚ್ ನೀಡಿದರು.

ಶಮಿ ಮಾಡಿದ ಬದಲಾವಣೆ ಏನು?

ಅಭಿಷೇಕ್ ಅವರನ್ನು ಔಟ್ ಮಾಡುವ ಮುನ್ನ ಶಮಿ ಫಿಲ್ಡೀಂಗ್‌ನಲ್ಲಿ ಬದಲಾವಣೆ ಮಾಡಿದರು. ಶಮಿ ಡೀಪ್‌ ಪಾಯಿಂಟ್‌ ತೆಗೆದು ಡೀಪ್‌ ಥರ್ಡ್‌ ಮ್ಯಾನ್‌ಗೆ ಕಳುಹಿಸಿದರು. ಬಳಿಕ ಲೆಗ್‌ಸ್ಟಂಪ್‌ ಮೇಲೆ ಯಾರ್ಕರ್‌ ಎಸೆದು ಬ್ಯಾಟರ್‌ ಅನ್ನು ಕಟ್ಟಿ ಹಾಕಿದರು. ಬಳಿಕ ಇವರು ತಮ್ಮ ಓವರ್‌ ಕೊನೆಯ ಎಸೆತದಲ್ಲಿ ಆಫ್‌ ಸೈಡ್‌ನಲ್ಲಿ ಒಬ್ಬ ಫೀಲ್ಡರ್‌ ನಿಲ್ಲಿಸಿ, ಸ್ಲಿಪ್‌ನಲ್ಲಿದ್ದ ಫೀಲ್ಡರ್‌ ತೆಗೆದರು. ಕೊನೆಯಲ್ಲಿ ಸ್ಲೋ ವೈಡ್‌ ಎಸೆತವನ್ನು ಎಸೆದು ಅಭಿಷೇಕ್ ಶರ್ಮಾ ಅವರಿಗೆ ಖೆಡ್ಡಾ ತೋಡಿದರು ಎಂದು ಕೋಚ್‌ ತಿಳಿಸಿದ್ದಾರೆ.

ಅಭಿಷೇಕ್‌ ಈ ಚೆಂಡನ್ನು ಡ್ರೈವ್ ಮಾಡಲು ಹೋದರು. ಚೆಂಡು ಇವರ ಬ್ಯಾಟ್‌ಗೆ ತಗುಲಿ ಶಾರ್ಟ್ ಥರ್ಡ್ ಮ್ಯಾನ್ ಕಡೆಗೆ ಹೋಯಿತು. ಎಂ. ಸಿದ್ಧಾರ್ಥ್ ಉತ್ತಮ ಡೈವಿಂಗ್ ಕ್ಯಾಚ್ ಪಡೆದರು. ಮುಂದಿನ ಓವರ್‌ನಲ್ಲಿಯೇ ಇದೇ ರೀತಿಯ ನಿಧಾನಗತಿಯ ಎಸೆತದಿಂದ ಶಮಿ ಟ್ರಾವಿಸ್ ಹೆಡ್ ಅವರನ್ನು ವಂಚಿಸಿದರು, ಅವರನ್ನು ಔಟ್ ಮಾಡಿದರು ಎಂದು ಕಾರ್ಲ್ ಕ್ರೋವ್ ಹೇಳಿದ್ದಾರೆ.

ಮೊಹಮ್ಮದ್ ಶಮಿ ಕಲಿಯಲು ಸದಾ ಉತ್ಸುಕರಾಗಿರುತ್ತಾರೆ. ಅವರು ತಮ್ಮ ಸ್ವಿಂಗ್ ಜೊತೆಗೆ ಮತ್ತಷ್ಟು ವಿಭಿನ್ನತೆಯನ್ನು ತಮ್ಮ ಬೌಲಿಂಗ್‌ನಲ್ಲಿ ಅಳವಡಿಸಿಕೊಂಡರು. ಅವರು ಹಿರಿಯ ಆಟಗಾರ, ಆದರೂ ಅವರು ಯಾವಾಗಲೂ ಕಲಿಯಲು ಉತ್ಸುಕರಾಗಿದ್ದಾರೆ ಎಂದು ಸ್ಪಿನ್ ಕೋಚ್‌ ಕಾರ್ಲ್ ಕ್ರೋವ್ ತಿಳಿಸಿದ್ದಾರೆ.

Story first published: Thursday, April 9, 2026, 12:21 [IST]
Other articles published on Apr 9, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+