For Quick Alerts
ALLOW NOTIFICATIONS  
For Daily Alerts
 

ಶಮಿ ಕ್ರಿಕೆಟ್‌ ವೃತ್ತಿ ಬದುಕು ಅಂತ್ಯ? ರಣಜಿಯಲ್ಲಿ ಅಬ್ಬರಿಸಿದರೂ ನೋ ಚಾನ್ಸ್

ಟೀಮ್ ಇಂಡಿಯಾದ ಸ್ಪಿಂಗ್ ಬೌಲರ್‌ ಟೆಸ್ಟ್‌ ಸರಣಿಗೆ ಕಂ ಬ್ಯಾಕ್‌ ಮಾಡುವ ಕನಸು ದೂರ ದೂರ ಸರಿಯುತ್ತಿದೆ. ಕಳೆದ ಕೆಲವು ದಿನಗಳಿಂದ ಭಾರತದಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿಯಲ್ಲಿ ಸ್ಥಿರ ಪ್ರದರ್ಶನ ನೀಡುತ್ತಿರುವ ವೇಗಿ, ದಕ್ಷಿಣ ಆಫ್ರಿಕಾ ವಿರುದ್ಧ ತವರಿನಲ್ಲಿ ನಡೆಯಲಿರುವ ಟೆಸ್ಟ್‌ ಸರಣಿಗೆ ತಂಡದಲ್ಲಿ ಸ್ಥಾನ ಪಡೆಯುವ ಕನಸು ಕಂಡಿದ್ದರು. ಆದರೆ ಈ ಕನಸು ಈಗ ಕಮರಿದೆ. ಇದನ್ನು ನೋಡಿದರೆ ವೇಗಿ ಮೊಹಮ್ಮದ್‌ ಶಮಿ ಅವರ ಕ್ರಿಕೆಟ್‌ ಬದುಕು ಅಂತ್ಯವಾಯ್ತಾ ಎಂಬ ಭಯ ಸಹ ಅಭಿಮಾನಿಗಳಿಗೆ ಕಾಡುತ್ತಿದೆ.

ಟೀಮ್ ಇಂಡಿಯಾದ ಸ್ಟಾರ್ ಆಟಗಾರ ಮೊಹಮ್ಮದ್ ಶಮಿ ಈ ವರ್ಷದ ಆರಂಭದಲ್ಲಿ ದುಬೈನಲ್ಲಿ ನಡೆದ ಚಾಂಪಿಯನ್ಸ್‌ ಟ್ರೋಫಿ ಕ್ರಿಕೆಟ್‌ ಟೂರ್ನಿಯಲ್ಲಿ ಆಡಿದ್ದರು. ಅಲ್ಲಿಂದ ಭಾರತ ಜೆರ್ಸಿ ತೊಡುವ ಕನಸು ದೂರ ಸರಿಯುತ್ತಲೇ ಸಾಗುತ್ತದೆ. ಆರಂಭದಲ್ಲಿ ಗಾಯದ ನೆಪ ಬಿಸಿಸಿಐ ಆಯ್ಕೆ ಸಮಿತಿಯ ಕಣ್ಣಿಗೆ ಕಂಡಿತು. ಆದರೆ ಅಲ್ಲಿಂದ ಈ ವರೆಗೆ ಟೀಮ್ ಇಂಡಿಯಾವನ್ನು ಆಯ್ಕೆ ಮಾಡುವಾಗ ಶಮಿ ಅವರನ್ನು ಕಡೆಗಣಿಸಲಾಗಿತ್ತು.

Mohammed Shami s career ends Consistent Ranji performance fails to secure India Test spot

ಬಿಸಿಸಿಐ ಆಯ್ಕೆ ಸಮಿತಿ ತಮ್ನನ್ನು ಕಡೆಗಣಿಸುತ್ತಿರುವಾಗ ಶಮಿ ಗರಂ ಸಹ ಆಗಿದ್ದರು. ತಾವು ಫಿಟ್ ಆಗದೇ ಇದ್ದಲ್ಲಿ ರಣಜಿ ಟೂರ್ನಿಯಲ್ಲಿ ಹೇಗೆ ಆಡುತ್ತಿದ್ದೇನೆ ಎಂದು ಸಹ ಆಗ ಪ್ರಶ್ನಿಸಿದ್ದರು. ಆದರೆ ಈಗ ತವರಿನಲ್ಲಿ ನಡೆಯುತ್ತಿರುವ ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್ ಸರಣಿಗೆ ಇವರನ್ನು ತಂಡದಲ್ಲಿ ಆಯ್ಕೆ ಮಾಡಲಾಗಿಲ್ಲ. ಇವರನ್ನು ಇಂಗ್ಲೆಂಡ್‌ ಪ್ರವಾಸ, ಭಾರತದಲ್ಲಿ ನಡೆದ ವೆಸ್ಟ್‌ ಇಂಡೀಸ್ ವಿರುದ್ಧದ ಸರಣಿ ಹಾಗೂ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಿಂದ ಕೈ ಬಿಡಲಾಗಿದೆ. ಈಗ ಶಮಿ ಅಭಿಮಾನಿಗಳಿಗೆ ಇವರು ವೃತ್ತಿ ಬದುಕಿನ ಬಗ್ಗೆ ಚಿಂತೆ ಆಗುತ್ತಿದೆ.

ಶಮಿ ಅವರು ದೇಶೀಯ ಟೂರ್ನಿಯಲ್ಲಿ ಬಂಗಾಳ ತಂಡದ ಪರ ಆಡುತ್ತಾರೆ. ಇವರು ರಣಜಿ ಟೂರ್ನಿಯಲ್ಲಿ ಅಮೋಘ ಪ್ರದರ್ಶನ ನೀಡಿದ್ದಾರೆ. ಆಡಿದ ಮೂರು ಪಂದ್ಯಗಳಲ್ಲಿ 15 ವಿಕೆಟ್‌ ಕಬಳಿಸಿ ಆಯ್ಕೆ ಸಮಿತಿಯ ಕದ ತಟ್ಟುತ್ತಲೇ ಇದ್ದಾರೆ. ಆದರೆ ಇವರಿಗೆ ಇನ್ನು ಅವಕಾಶ ಸಿಕ್ಕಿಲ್ಲ. ಇವರಿಗೆ ಅವಕಾಶ ಸಿಗದ ಬಗ್ಗೆ ಮೊಹಮ್ಮದ್ ಶಮಿ ಅವರ ಕೋಚ್‌ ಈಗ ಕೆಂಡ ಕಾರಿದ್ದಾರೆ.

Mohammed Shami s career ends Consistent Ranji performance fails to secure India Test spot

ಕೋಚ್‌ ಗರಂ

35 ವರ್ಷದ ಅನುಭವಿ ವೇಗದ ಬೌಲರ್‌ ಮೊಹಮ್ಮದ್‌ ಶಮಿ ಅವರ ಕೋಚ್‌ ಬದ್ರುದ್ದೀನ್ ಇಂಡಿಯಾ ಟುಡೇಗೆ ಸಂದರ್ಶನವನ್ನು ನೀಡಿದ್ದಾರೆ. ಈ ವೇಳೆ ಅವರು ಆಯ್ಕೆದಾರರ ವಿರುದ್ಧ ತಮ್ಮ ಕೋಪವನ್ನು ಹೊರಹಾಕಿದ್ದಾರೆ. ಶಮಿ ಫಿಟ್ ಆಗಿದ್ದರೂ ಆಯ್ಕೆ ಮಾಡದಿರಲು ಕುಂಟು ನೆಪವನ್ನು ಆಯ್ಕೆ ಸಮಿತಿ ಹುಡುಕುತ್ತಿದೆ. ಆಯ್ಕೆ ಸಮಿತಿ ಶಮಿ ಕಡಿಗಣಿಸುತ್ತಿದೆ ಎಂಬುದು ಸ್ಪಷ್ಟವಾಗಿದೆ. ಶಮಿ ಆಯ್ಕೆ ಆಗದೇ ಇರುವುದಕ್ಕೆ ಯಾವುದೇ ಕಾರಣವಿಲ್ಲ. ಅವರು ತಂಡ ಸೇರದಷ್ಟ ಅನರ್ಹರಲ್ಲ. ಆಯ್ಕೆದಾರರು ಅವರನ್ನು ಉದ್ದೇಶಪೂರ್ವಕವಾಗಿ ನಿರ್ಲಕ್ಷಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.

Story first published: Friday, November 7, 2025, 14:00 [IST]
Other articles published on Nov 7, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+