Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Mohammed Shami: ಟೀಮ್ ಇಂಡಿಯಾ ಅಭಿಮಾನಿಗಳಿಗೆ ಗುಡ್ ನ್ಯೂಸ್: ರಣಜಿ ತಂಡ ಸೇರಿದ ಪೇಸರ್

ಟೀಮ್ ಇಂಡಿಯಾದ ಅಭಿಮಾನಿಗಳು ಖುಷಿ ಸುದ್ದಿ ಬಂದಿದೆ. ಈ ನಿಜಕ್ಕೂ ಟೀಮ್ ಇಂಡಿಯಾದ ಕ್ಯಾಂಪ್‌ನಲ್ಲಿ ಮಂದಹಾಸ ಮುಡಿಸಿದರೆ, ಆಸ್ಟ್ರೇಲಿಯಾ ತಂಡದ ಚಿಂತೆಯನ್ನು ದೂರ ಮಾಡಿದೆ. ಹಲವು ತಿಂಗಳುಗಳಿಂದ ಮೈದಾನದಿಂದ ದೂರ ಉಳಿದಿರುವ ಟೀಮ್ ಇಂಡಿಯಾದ ಸ್ಟಾರ್ ವೇಗದ ಬೌಲರ್‌ ಮೊಹಮ್ಮದ್ ಶಮಿ ಮತ್ತೆ ತಂಡ ಸೇರಲು ಭರದ ತಯಾರಿ ನಡೆಸಿದ್ದಾರೆ. ಬಹು ದಿನಗಳಲ್ಲಿ ಅಬ್ಬರ ನಡೆಸದ ಶಮಿ ಮತ್ತೆ ಬ್ಯಾಟರ್‌ಗಳನ್ನು ಕಾಡಲು ಸಿದ್ಧರಾಗಿದ್ದಾರೆ.

ಭಾರತದಲ್ಲಿ ನಡೆದ ಏಕದಿನ ವಿಶ್ವಕಪ್‌ನಲ್ಲಿ ಅಮೋಘ ಪ್ರದರ್ಶನ ನೀಡಿರುವ ಸ್ಟಾರ್ ಬೌಲರ್‌ ಶಮಿ, ಈ ಟೂರ್ನಿಯಲ್ಲಿ ಗರಿಷ್ಠ ವಿಕೆಟ್‌ ಪಡೆದ ಬೌಲರ್‌. ಇವರು ಫೈನಲ್‌ ಪಂದ್ಯದ ಬಳಿಕ ಇನ್ನು ಅಂಗಳಕ್ಕೆ ಇಳಿದಿಲ್ಲ. ಬಳಿಕ ಇವರು ಪಾದದ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದು, ಈಗ ಚೇತರಿಸಿಕೊಂಡು ಮೈದಾನಕ್ಕೆ ಇಳಿಯಲಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಮರಳುವ ಮುನ್ನ ದೇಶೀಯ ಟೂರ್ನಿಯಲ್ಲಿ ಆಡುವ ಇಂಗಿತವನ್ನು ವ್ಯಕ್ತಪಡಿಸಿದ್ದ ಶಮಿ, ಬಂಗಳಾ ಪರ ಅಖಾಡಕ್ಕೆ ಇಳಿಯಲಿದ್ದಾರೆ.

Mohammed Shami s Comeback Star Bowler to Boost Bengal in Ranji Trophy Eyes Return to Team India

ಮೈದಾನಕ್ಕೆ ಎಂಟ್ರಿ

ಭಾರತ ಆಸ್ಟ್ರೇಲಿಯಾ ಪ್ರವಾಸ ಬೆಳೆಸಲಿದೆ. ಈ ಪ್ರವಾಸಕ್ಕೆ ಭಾರತ ತಂಡವನ್ನು ಪ್ರಕಟಿಸಲಾಗಿದೆ. ಈ ತಂಡದಲ್ಲಿ ಮೊಹಮ್ಮದ್ ಶಮಿ ಅವರಿಗೆ ಸ್ಥಾನ ನೀಡಿಲ್ಲ. ಫಿಟ್‌ನೆಸ್‌ ಸಮಸ್ಯೆ ಇವರನ್ನು ಬಹುವಾಗಿ ಕಾಡಿದೆ. ಇದೀಗ ಭಾರತ ತಂಡಕ್ಕೆ ಶುಭ ಸುದ್ದಿಯೊಂದು ಬಂದಿದೆ. ಈ ಸ್ಟಾರ್ ವೇಗದ ಬೌಲರ್ ರಣಜಿ ಟ್ರೋಫಿಯಲ್ಲಿ ಕಂ ಬ್ಯಾಕ್‌ ಮಾಡಲಿದ್ದಾರೆ. ರಣಜಿ ಟ್ರೋಫಿಯಲ್ಲಿ ಸ್ಥಿರ ಪ್ರದರ್ಶನ ನೀಡಿದರೆ, ಇವರಿಗೆ ಆಸ್ಟ್ರೇಲಿಯಾ ಫ್ಲೈಟ್‌ ಟಿಕೆಟ್‌ ಸಿಗುವ ಸಾಧ್ಯತೆ ಇದೆ. ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಐದು ಟೆಸ್ಟ್‌ ಪಂದ್ಯಗಳ ಸರಣಿ ನವೆಂಬರ್‌ 22 ರಿಂದ ಆರಂಭವಾಗಲಿದೆ. ಎರಡನೇ ಟೆಸ್ಟ್‌ ಪಂದ್ಯ ಡಿಸೆಂಬರ್ 6 ರಂದು ನಡೆಯಲಿದೆ.

ಮೊಹಮ್ಮದ್ ಶಮಿ ಬಂಗಳಾ ರಣಜಿ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಬುಧವಾರದಿಂದ ಆರಂಭವಾಗಲಿರುವ ಮಧ್ಯಪ್ರದೇಶ ವಿರುದ್ಧದ ರಣಜಿ ತಂಡಕ್ಕೆ ಇವರನ್ನು ತಂಡದಲ್ಲಿ ಸೇರಿಸಿಕೊಳ್ಳಲಾಗಿದೆ. ಬಂಗಾಳ ತಂಡವನ್ನು ಶಮಿ ಸೇರಿದ್ದರಿಂದ, ಬೌಲಿಂಗ್ ವಿಭಾಗ ಬಲಾಢ್ಯವಾಗಲಿದೆ. ಇದು ಇಡೀ ತಂಡದ ಉತ್ಸಾಹವನ್ನು ಹೆಚ್ಚಿಸುವದರಲ್ಲಿ ಸಂಶಯವೇ ಇಲ್ಲ.

Mohammed Shami s Comeback Star Bowler to Boost Bengal in Ranji Trophy Eyes Return to Team India

ಶಮಿ ಸಾಧನೆ

ಟೀಮ್ ಇಂಡಿಯಾದ ಪರ ಶಮಿ ಈಗಾಗಲೇ 64 ಟೆಸ್ಟ್ ಪಂದ್ಯಗಳನ್ನು ಆಡಿದ್ದು 229 ವಿಕೆಟ್‌ಗಳನ್ನು ಪಡೆದಿದ್ದಾರೆ. ಇನ್ನು 101 ಏಕದಿನ ಕ್ರಿಕೆಟ್‌ನಲ್ಲಿ ಶಮಿ 195 ವಿಕೆಟ್‌ ಕಬಳಿಸಿ ಸೈ ಎನಿಸಿಕೊಂಡಿದ್ದಾರೆ. ಗಾಯದ ಸಮಸ್ಯೆಯಿಂದಾಗಿ ಮೊಹಮ್ಮದ್ ಶಮಿ 2023ರ ಏಕದಿನ ವಿಶ್ವಕಪ್‌ನಿಂದ ಹೊರಗುಳಿದಿದ್ದಾರೆ. ಅವರು 2023 ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಟೀಮ್ ಇಂಡಿಯಾ ಪರ ಕೊನೆಯ ಅಂತಾರಾಷ್ಟ್ರೀಯ ಪಂದ್ಯವನ್ನು ಆಡಿದ್ದರು. ಈಗ ತ್ತೆ ಅಂಗಳ ಪ್ರವೇಶಿಸಲು ತಯಾರಿ ನಡೆಸಿದ್ದಾರೆ. ಶಮಿ ಬುಧವಾರದಿಂದ ಆರಂಭವಾಗವ ರಣಜಿ ಟೂರ್ನಿಯ ಪಂದ್ಯದಲ್ಲಿ ಹೇಗೆ ಪ್ರದರ್ಶನ ನೀಡಲಿದ್ದಾರೆ ಎಂದು ಎಲ್ಲರೂ ಕಾತರುದಿಂದ ಕಾಯುತ್ತಿದ್ದಾರೆ.

Story first published: Tuesday, November 12, 2024, 15:49 [IST]
Other articles published on Nov 12, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+