Mohammed Shami: ಟೀಮ್ ಇಂಡಿಯಾಕ್ಕೆ ಶಮಿ ಸೇರುವುದು ಯಾವಾಗ? ಇಲ್ಲಿದೆ ಅಪ್‌ಡೇಟ್
ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಬಾರ್ಡರ್ ಗವಾಸ್ಕರ್ ಸರಣಿ ಆರಂಭವಾಗಿದೆ. ಈ ಸರಣಿಯಲ್ಲಿ ಐದು ಪಂದ್ಯಗಳನ್ನು ಆಡಲಾಗುತ್ತದೆ. ಆಸ್ಟ್ರೇಲಿಯಾ ಪ್ರವಾಸದಲ್ಲಿ ಟೀಮ್ ಇಂಡಿಯಾ ಮುನ್ನಡೆ ಸಾಧಿಸಿದೆ. ಪರ್ತ್‌ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಅಮೋಘ ಬ್ಯಾಟಿಂಗ್ ಹಾಗೂ ಬೌಲಿಂಗ್ ಪ್ರದರ್ಶನ ನೀಡಿದ ಟೀಮ್ ಇಂಡಿಯಾ ಅರ್ಹ ಗೆಲುವು ದಾಖಲಿಸಿದೆ. ಈಗ ಅಭಿಮಾನಿಗಳಲ್ಲಿ ಇರುವು ಪ್ರಶ್ನೆ ಒಂದೆ. ಮೊಹಮ್ಮದ್ ಶಮಿ ಯಾವಾಗ ಆಸ್ಟ್ರೇಲಿಯಾ ಫ್ಲೈಟ್ ಹತ್ತುತ್ತಾರೆ ಎಂದು. ಈ ಪ್ರಶ್ನೆಗೆ ಈಗ ದೊಡ್ಡ ಅಪ್‌ಡೇಟ್ ಸಿಕ್ಕಿದೆ.
ಮೊಹಮ್ಮದ್ ಶಮಿ ಅವರ ಆಸ್ಟ್ರೇಲಿಯಾ ಪ್ರವಾಸ ಸದ್ಯ ದೂರ ಸರಿದಂತೆ ಕಾಣುತ್ತಿದೆ. ಬಿಸಿಸಿಐ, ವೈದ್ಯರು ಇವರ ಮೇಲ್ವಿಚಾರಣೆ ನಡೆಸುತ್ತಿದ್ದಾರೆ. ಈಗಾಗಲೇ ಶಮಿ ಕ್ರಿಕೆಟ್ ಮೈದಾನದಲ್ಲಿ ಸದ್ದು ಮಾಡುತ್ತಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‌ಗೂ ಮುನ್ನ ತಾವು ದೇಶೀಯ ಟೂರ್ನಿಯಲ್ಲಿ ಆಡುವುದಾಗಿ ಶಮಿ ತಿಳಿಸಿದ್ದರು. ಅದರಂತೆ ಬಂಗಳ ಪರ ರಣಜಿ ಟ್ರೋಫಿ ಹಾಗೂ ಸೈಯದ್ ಮುಷ್ತಾಕ್ ಅಲಿ ಕ್ರಿಕೆಟ್ ಟೂರ್ನಿ ಆಡುತ್ತಿದ್ದಾರೆ. ಶಮಿ ಸಂಪೂರ್ಣ ಫಿಟ್ ಆಗುವವರೆಗೆ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಸಿಗುವುದು ಡೌಟ್ ಎಂಬ ಮಾತು ಕೇಳಿ ಬರುತ್ತಿದೆ.

ದೇಶೀಯ ಕ್ರಿಕೆಟ್‌ನಲ್ಲಿ ಶಮಿ ಸಾಧನೆ
ಶಮಿ ತಾವು ಚೇತರಿಸಿಕೊಂಡು ಅಂಗಳಕ್ಕೆ ಬಂದ ಮೊದಲ ರಣಜಿ ಪಂದ್ಯದಲ್ಲಿ ಮಧ್ಯ ಪ್ರದೇಶ ವಿರುದ್ಧ 7 ವಿಕೆಟ್‌ಗಳನ್ನು ಪಡೆದಿದ್ದರು. ಇನ್ನು ಸೈಯದ್ ಮುಷ್ತಾಕ್ ಅಲಿ ಕ್ರಿಕೆಟ್ ಟೂರ್ನಿಯಲ್ಲಿ ಹೈದರಾಬಾದ್ ವಿರುದ್ಧದ 3 ವಿಕೆಟ್ ಕಬಳಿಸಿದ್ದರು.
ಭಾರತದಲ್ಲಿ 2023ರಲ್ಲಿ ನಡೆದ ಏಕದಿನ ವಿಶ್ವಕಪ್‌ನಲ್ಲಿ ಮೊಹಮ್ಮದ್ ಶಮಿ ಅಮೋಘ ಬೌಲಿಂಗ್ ಪ್ರದರ್ಶನ ನೀಡಿದ್ದರು. ಈ ಸರಣಿಯಲ್ಲಿ ಶಮಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎಂಬ ಹೆಗ್ಗಳಿಕೆ ತಮ್ಮದಾಗಿಸಿಕೊಂಡಿದ್ದರು. ಅಲ್ಲದೆ ಗಾಯದ ನೋವಿನ ನಡುವೆಯೂ ಅವರು ಬೌಲಿಂಗ್ ನಡೆಸಿದ್ದು, ಅಭಿಮಾನಿಗಳ ಮನ ಗೆದ್ದಿದೆ.

ಆಸ್ಟ್ರೇಲಿಯಾಕ್ಕೆ ಹೋಗುವುದು ಯಾವಾಗ?
ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಆಡಿದ ಬಳಿಕ ಶಮಿ ಶಸ್ತ್ರ ಚಿಕಿತ್ಸೆಗೆ ಒಳಗಾಗಿ, ಗುಣಮುಖರಾಗಿದ್ದಾರೆ. ಈಗ ಮೈದಾನಕ್ಕೆ ಮರಳಲು ಪ್ಲ್ಯಾನ್ ಮಾಡಿಕೊಳ್ಳುತ್ತಿದ್ದಾರೆ. ಅವರು ಈಗ ತಮ್ಮ ಫಿಟ್ನೆಸ್ ಅನ್ನು ಮರಳಿ ಪಡೆಯಲು ಶ್ರಮಿಸುತ್ತಿದ್ದಾರೆ. ಬಿಸಿಸಿಐ ಸಹ ಅವರ ಮೇಲೆ ಹದ್ದಿನ ಕಣ್ಣು ನೆಟ್ಟಿದೆ. ಅವರಿಗೆ ಬಿಸಿಸಿಐ ಟಾಸ್ಕ್ ಒಂದನ್ನು ಸಹ ನೀಡಿತ್ತು. ತಮ್ಮ ತೂಕವನ್ನು ಕಡಿಮೆ ಮಾಡಿಕೊಳ್ಳುವಂತೆ ಸೂಚಿಸಲಾಗಿದೆ.
ಮೊಹಮ್ಮದ್ ಶಮಿ ಅವರ ತಲೆಯಲ್ಲಿ ತೂಕು ಇಳಿಸಿಕೊಳ್ಳುವ ಅಂಶವಿದೆ. ಒಂದು ವೇಳೆ ಇದು ಸಕ್ಸಸ್ ಆದಲ್ಲಿ ಆಸ್ಟ್ರೇಲಿಯಾ ವಿರುದ್ಧ ಮುಂದಿನ ಟೆಸ್ಟ್‌ಗಳಲ್ಲಿ ಅವರು ಕಾಣಿಸಿಕೊಳ್ಳಬಹುದು. ಬಾರ್ಡರ್ ಗವಾಸ್ಕರ್ ಸರಣಿಯ ಎರಡನೇ ಪಂದ್ಯ ಆಡಿಲೇಡ್‌ನಲ್ಲಿ ನಡೆಯಲಿದೆ. ಈ ಪಂದ್ಯದಲ್ಲಿ ಜಯ ಸಾಧಿಸಿ ಸರಣಿಯಲ್ಲಿ ಮುನ್ನಡೆ ಸಾಧಿಸುವ ಕನಸು ಟೀಮ್ ಇಂಡಿಯಾದ್ದಾಗಿದೆ. ಶಮಿ ಪೂರ್ತಿ ಫಿಟ್ನೆಸ್ ಹೊಂದಿದ್ದೇ ಆದಲ್ಲಿ, ಅವರು ಆಸ್ಟ್ರೇಲಿಯಾ ವಿರುದ್ಧ ಕಾಣಿಸಿಕೊಳ್ಳಲಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications