Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Mohammed Shami: ಶಮಿ ಆಸ್ಟ್ರೇಲಿಯಾ ಫ್ಲೈಟ್ ಹತ್ತುವುದು ಯಾವಾಗ?

ಟೀಮ್ ಇಂಡಿಯಾ ಈಗ ಆಸ್ಟ್ರೇಲಿಯಾ ಪ್ರವಾಸದಲ್ಲಿದೆ. ಈ ವೇಳೆ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವೆ ಐದು ಪಂದ್ಯಗಳ ಟೆಸ್ಟ್‌ ಸರಣಿ ನಡೆಯಲಿದೆ. ಈ ಸರಣಿ ಉಭಯ ತಂಡಗಳಿಗೂ ಮಹತ್ವದಾಗಿದೆ. ಬಾರ್ಡರ್‌ ಗವಾಸ್ಕರ್‌ ಟ್ರೋಫಿಯನ್ನು ಟೀಮ್ ಇಂಡಿಯಾ ಮೂರನೇ ಬಾರಿ ಎತ್ತುವ ಕನಸು ಕಾಣುತ್ತಿದೆ. ಈ ಹಿಂದಿನ ಆಸೀಸ್ ಪ್ರವಾಸದಲ್ಲಿ ಕಾಂಗರೂ ಪಡೆಯ ಬ್ಯಾಟರ್‌ಗಳಿಗೆ ಕಾಡಿದ್ದ ಮೊಹಮ್ಮದ್‌ ಶಮಿ, ಈ ಬಾರಿ ತಂಡದಲ್ಲಿ ಸ್ಥಾನ ಪಡೆದಿಲ್ಲ.

ಭಾರತದಲ್ಲಿ ನಡೆದ ಏಕದಿನ ವಿಶ್ವಕಪ್‌ ಬಳಿಕ ಮೊಹಮ್ಮದ್ ಶಮಿ ಮೈದಾನಕ್ಕೆ ಇಳಿದಿರಲಿಲ್ಲ. ಅಂತಾರಾಷ್ಟ್ರೀಯ ಪಂದ್ಯಗಳಿಂದ ಸಹ ಅವರು ದೂರ ಉಳಿದಿದ್ದರು. ಇವರಿಗೆ ಗಾಯ ಬಹುವಾಗಿ ಕಾಡಿತ್ತು. ಹೀಗಾಗಿ ಅವರು ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರು. ಇದರಿಂದಾಗಿ ಅವರು ಬಹುದಿನಗಳ ಕಾಲ ಕ್ರಿಕೆಟ್‌ ಮೈದಾನದಿಂದ ದೂರ ಉಳದಿದ್ದರು. ಈಗ ಅವರು ಸುಮಾರು 360 ದಿನಗಳ ಬಳಿಕ ಚೆಂಡು ಹಿಡಿದು ಅಂಗಳ ಪ್ರವೇಶಿಸಿದ್ದರು. ರಣಜಿ ಟ್ರೋಪಿ ಸಿ ಗುಂಪಿನ ಪಂದ್ಯದಲ್ಲಿ ಇವರು ಬಂಗಾಳ ಪರ ಅಮೋಘ ಪ್ರದರ್ಶನ ನೀಡಿದ್ದಯ ಅಭಿಮಾನಿಗಳಲ್ಲಿ ನವ ಉತ್ಸಾಹ ತುಂಬಿದ್ದರು.

Mohammed Shami s Possible Return to Border-Gavaskar Trophy BCCI to Decide After Syed Mushtaq Ali

ಬಂಗಾಳ ಪರ ಅಬ್ಬರ

ಮೊಹಮ್ಮದ್‌ ಶಮಿ ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಮರಳುವ ಮೊದಲ ರಣಜಿ ಟ್ರೋಫಿ ಆಡುವುದಾಗಿ ಬಯಕೆ ವ್ಯಕ್ತ ಪಡಿಸಿದ್ದರು. ಅದರಂತೆ ಅವರು ಬಂಗಾಳ ಪರ ರಣಜಿ ಟೂರ್ನಿಯನ್ನು ಆಡಿದರು. ಮಧ್ಯಪ್ರದೇಶದ ವಿರುದ್ಧ ಬಂಗಾಳದ ಪರವಾಗಿ ಅಬ್ಬರದ ಪ್ರದರ್ಶನ ನೀಡಿದರು. ಬೌಲಿಂಗ್‌ನಲ್ಲಿ ಏಳು ವಿಕೆಟ್‌ಗಳನ್ನು ಕಬಳಿಸುವ ಮೂಲಕ ತಮ್ಮ ತಂಡಕ್ಕೆ ಋತುವಿನ ಮೊದಲ ಜಯದ ಮಾಲೆಯನ್ನು ತೊಡಿಸಿದರು.

ಮೊಹಮ್ಮದ್‌ ಶಮಿ ಆಸ್ಟ್ರೇಲಿಯಾ ಪ್ರವಾಸ ಬೆಳೆಸುತ್ತಾರಾ ಎಂಬ ಪ್ರಶ್ನೆಗೆ ಒಂದು ಹಂತದ ಉತ್ತರ ಸಿಕ್ಕಿದೆ. ಶಮಿ ರಣಜಿ ಟೂರ್ನಿಯಲ್ಲಿ ತಾವು ಫಿಟ್ ಆಗಿರುವುದಾಗಿ ತೋರಿಸಿದ್ದಾರೆ. ಅಲ್ಲದೆ ತಾವು ಅಬ್ಬರಿಸಲು ಮತ್ತೆ ತಯಾರಿರುವುದಾಗಿ ತಿಳಿಸಿದ್ದಾರೆ. ಪಿಟಿಐ ವರದಿಯ ಪ್ರಕಾರ ಶಮಿ, ದ್ವಿತೀಯಾರ್ಧದಲ್ಲಿ ಬಾರ್ಡರ್-ಗವಾಸ್ಕರ್ ಟ್ರೋಫಿಯ ವೇಳೆ ಭಾರತ ತಂಡವನ್ನು ಸೇರಬಹುದು ಎಂದು ತಿಳಿದು ಬಂದಿದೆ.

ಆಸ್ಟ್ರೇಲಿಯಾ ವಿರುದ್ಧ ಹೇಗಿದೆ ಶಮಿ ಸಾಧನೆ?

ಟೀಮ್ ಇಂಡಿಯಾದ ಸ್ಟಾರ್ ಪೇಸ್ ಬೌಲರ್‌ ಮೊಹಮ್ಮದ್ ಶಮಿ ಎದುರಾಳಿ ಬ್ಯಾಟರ್‌ಗಳನ್ನು ಕಾಡಬಲ್ಲ ಪ್ಲೇಯರ್ಸ್‌. ಇವರು ವಿಶ್ವದ ಎಲ್ಲ ತಂಡಗಳಿಗೂ ಕಾಟ ನೀಡಿದ್ದಾರೆ. ಅದರಲ್ಲೂ ಇವರಿಗೆ ಆಸ್ಟ್ರೇಲಿಯಾ ಎಂದರೆ ಅಚ್ಚು ಮೆಚ್ಚು. ಆಸೀಸ್‌ ವಿರುದ್ಧ ಶಮಿ ಒಟ್ಟಾರೆ 12 ಪಂದ್ಯಗಳನ್ನು ಆಡಿದ್ದು, 44 ವಿಕೆಟ್‌ ಪಡೆದು ಬೀಗಿದ್ದಾರೆ. ಇನ್ನು ಆಸ್ಟ್ರೇಲಿಯಾದಲ್ಲಿ ಆಡಿದ 8 ಪಂದ್ಯಗಳಲ್ಲಿ ಮೊಹಮ್ಮದ್‌ ಶಮಿ 31 ವಿಕೆಟ್‌ ಉರುಳಿಸಿದ್ದಾರೆ.

ಟೀಂ ಇಂಡಿಯಾ ಪರ ಸ್ಟಾರ್‌ ವೇಗದ ಬೌಲರ್‌ 64 ಟೆಸ್ಟ್ ಪಂದ್ಯಗಳಲ್ಲಿ 229 ವಿಕೆಟ್, 101 ಏಕದಿನ ಪಂದ್ಯಗಳಲ್ಲಿ 195 ವಿಕೆಟ್ ಹಾಗೂ 23 ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 24 ವಿಕೆಟ್ ಪಡೆದಿದ್ದಾರೆ.

Story first published: Monday, November 18, 2024, 13:11 [IST]
Other articles published on Nov 18, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+