ಸದ್ಯ ಟೀಮ್ ಇಂಡಿಯಾ ಚಾಂಪಿಯನ್ಸ್ ಟ್ರೋಫಿಯಲ್ಲಿ ಸ್ಥಿರ ಪ್ರದರ್ಶನ ನೀಡುತ್ತಿದೆ. ಈ ಟೂರ್ನಿಯಲ್ಲಿ ಟೀಮ್ ಇಂಡಿಯಾ ಸೆಮಿಫೈನಲ್ ಹಂತವನ್ನು ಪ್ರವೇಶಿಸಿದೆ. ಸ್ಟಾರ್ ಆಟಗಾರರು ಭರ್ಜರಿ ಫಾರ್ಮ್‌ನಲ್ಲಿದ್ದಾರೆ. ಟೀಮ್ ಇಂಡಿಯಾದ ಸೂಪರ್ ಸ್ಟಾರ್ ಆಟಗಾರ ಮೊಹಮ್ಮದ್ ಶಮಿ ಅವರ ಮೇಲೆ ಎಲ್ಲರ ಕಣ್ಣುಗಳು ನೆಟ್ಟಿರಲಿವೆ. ಹಲವು ಕಾರಣಗಳಿಂದ ಶಮಿ ಎಲ್ಲರ ಚಿತ್ತ ನೆಟ್ಟಿದ್ದಾರೆ. ಆದರೆ ಈಗ ಈ ಒಂದು ಕಾರಣದಿಂದಲೂ ಎಲ್ಲರ ಗಮನ ಸೆಳೆದಿದ್ದಾರೆ.
ಟೀಮ್ ಇಂಡಿಯಾ ಹಾಗೂ ನ್ಯೂಜಿಲೆಂಡ್ ನಡುವಣ ಪಂದ್ಯ ಭಾನುವಾರ ನಡೆಯಲಿದೆ. ಈ ಪಂಧ್ಯ ಉಭಯ ತಂಡಗಳಿಗೂ ಮಹತ್ವದಾಗಿದ್ದು, ಟಾಪ್ ಸ್ಥಾನದೊಂದಿಗೆ ಸೆಮಿಫೈನಲ್ ಪ್ರವೇಶಿಸುವ ಕನಸನ್ನು ಎರಡೂ ತಂಡಗಳು ಮಾಡಿಕೊಂಡಿವೆ. ಇನ್ನು ಟೀಮ್ ಇಂಡಿಯಾ ಈ ಪಂದ್ಯದಲ್ಲಿ ಗೆಲುವಿನ ಟ್ರ್ಯಾಕ್ ಮುಂದುವರೆಸಲು ಪ್ಲ್ಯಾನ್ ಮಾಡಿಕೊಂಡಿದೆ. ಇನ್ನು ಭಾನುವಾರದಿಂದಲೇ ರಮಜಾನ್ ಉಪವಾಸಗಳು ಆರಂಭವಾಗುತ್ತವೆ. ಈ ಹಿನ್ನೆಲೆಯಲ್ಲಿ ಶಮಿ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆಯುವುದು ಫಿಕ್ಸ್. ಹೀಗಾಗಿ ಅಭಿಮಾನಿಗಳ ಮನದಲ್ಲಿ ಇರುವ ಪ್ರಶ್ನೆ ಶಮಿ ರಮಜಾನ್ ಉಪವಾಸ ಮಾಡುತ್ತಾರಾ ಎನ್ನುವುದಾಗಿದೆ.

ಮೊಹಮ್ಮದ್ ಶಮಿ ತಮ್ಮ ಸಂಪ್ರದಾಯಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಆಟಗಾರ. ಹೀಗಾಗಿಯೇ ಇವರು ಉಪವಾಸ ಮಾಡುತ್ತಾರೋ ಇಲ್ಲವೋ ಎಂಬ ಪ್ರಶ್ನೆಗಳು ಅಭಿಮಾನಿಗಳ ಮನದಲ್ಲಿ ಮೂಡಿವೆ. ಮಾಧ್ಯಮ ವರದಿಗಳ ಪ್ರಕಾರ ಶಮಿ ಪಂದ್ಯಗಳು ನಡೆಯುವ ದಿನದಂದು ರಮಜಾನ್ ಉಪವಾಸವನ್ನು ಮಾಡುವುದಿಲ್ಲ. ಆ ದಿನ ಒಂದನ್ನು ಬಿಟ್ಟು ಉಳಿದ ದಿನಗಳಲ್ಲಿ ಶಮಿ ತಮ್ಮ ಸಂಪ್ರದಾಯವನ್ನು ಪಾಲಿಸುತ್ತಾರೇ ಎಂದು ಟೀಮ್ ಮ್ಯಾನೇಜ್ಮೆಂಟ್ ಮೂಲಗಳಿಂದ ತಿಳಿದು ಬಂದಿದೆ.
ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಟೀಮ್ ಇಂಡಿಯಾದ ಸೂಪರ್ ಸ್ಟಾರ್ ಆಟಗಾರ ಮೊಹಮ್ಮದ್ ಶಮಿ ಮೈದಾನಕ್ಕೆ ಇಳಿಯಲಿದ್ದಾರೆ. ಈ ವೇಳೆ ಉಪವಾಸ ಮಾಡುವುದು ಕಷ್ಟ. ಕಾರಣ ಇವರು ಒಬ್ಬ ವೇಗದ ಬೌಲರ್ ಆಗಿದ್ದರಿಂದ ಪಂದ್ಯದ ವೇಳೆ ಆಯಾಸವಾಗುತ್ತದೆ. ಪದೆ ಪದೆ ನೀರು ಕುಡಿಯಬೇಕಾಗುತ್ತದೆ. ಹೀಗಾಗಿ ಶಮಿ ಪಂದ್ಯದ ದಿನದಂದು ಉಪವಾವನ್ನು ಮಾಡುವುದಿಲ್ಲ. ಆದರೆ ಅದನ್ನು ಬಿಟ್ಟು ಉಳಿದ ದಿನಗಳಲ್ಲಿ ಶಮಿ ಉಪವಾಸ ಮಾಡುತ್ತಾರೆ ಎಂದು ತಿಳಿದು ಬಂದಿವೆ.

ಬರೀ ಮೊಹಮ್ಮದ್ ಶಮಿ ಅಷ್ಟೇ ಅಲ್ಲ ಟೀಮ್ ಇಂಡಿಯಾದಲ್ಲಿರುವ ಹಲವು ಆಟಗಾರರು ತಮ್ಮ ಸಂಪ್ರದಾಯವನ್ನು ಕಟ್ಟು ನಿಟ್ಟಾಗಿ ಪಾಲಿಸುತ್ತಾರೆ. ಪ್ರ್ಯಾಕ್ಟಿಸ್ ಮಾಡುವಾಗಲು ಉಪವಾಸವನ್ನು ಗಮನದಲ್ಲಿಟ್ಟುಕೊಂಡೆ ಅಭ್ಯಾಸ ನಡೆಸುತ್ತಾರೆ. ಮಧ್ಯಾಹ್ನದ ವೇಳೆ ಹೆಚ್ಚಿನ ಕೆಲಸಗಳನ್ನು ಮಾಡುವುದಿಲ್ಲ. ಸಂಜೆ ಒಂದೊಮ್ಮೆ ಉಪವಾಸ ಕೊನೆಗೊಂಡ ಬಳಿಕ ಯಾಥಾವತ್ ಆಗಿ ಆಟಗಾರರು ತಮ್ಮ ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸುತ್ತಾರೆ.
ಭಾರತಕ್ಕೆ ಪಂದ್ಯವನ್ನು ಆಡುವಾಗ ಆಟಗಾರರು ರಮಜಾನ್ ಉಪವಾಸವನ್ನು ಮಾಡುವುದಿಲ್ಲ. ಈ ವೇಳೆ ಎದುರಾಳಿಗೆ ಈ ಆಟಗಾರರು ಕಾಟ ನೀಡಲು ಪ್ಲ್ಯಾನ್ ರೂಪಿಸಿಕೊಂಡಿರುತ್ತಾರೆ. ಬರೀ ಶಮಿ ಅಷ್ಟೇ ಅಲ್ಲ ಟೀಮ್ ಇಂಡಿಯಾದಲ್ಲಿರುವ ಎಲ್ಲ ಆಟಗಾರರು ಸಹ ತಮ್ಮ ಸಂಪ್ರದಾಯಗಳನ್ಜು ಅಚ್ಚುಕಟ್ಟಾಗಿ ನಿಭಾಯಿಸುತ್ತಾರೆ. ಆದರೆ ದೇಶ ಎಂದು ಬಂದಾಗ ಗೆಲುವಿಗಾಗಿ ಶ್ರಮಿಸುತ್ತಾರೆ.