ತವರಿನ ಅಂಗಳದಲ್ಲಿ ತಂದೆಯನ್ನು ನೆನೆದು ಭಾವುಕರಾದ ಸಿರಾಜ್
ಮೊಹಮ್ಮದ್ ಸಿರಾಜ್ ಹೈದರಾಬಾದ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಮೊದಲ ಟೆಸ್ಟ್ ಆಡುವುದು ಬಹುತೇಕ ಖಚಿತವಾಗಿದೆ. ಸಿರಾಜ್ ತಂಡದಲ್ಲಿರುವ ಪ್ರಮುಖ ವೇಗಿಗಳಲ್ಲಿ ಒಬ್ಬರು. ತವರು ನೆಲದಲ್ಲಿ ಟೆಸ್ಟ್ ಆಡುವ ಮುನ್ನ ಸಿರಾಜ್ ತಂದೆಯನ್ನು ನೆನೆದು ಭಾವುಕರಾದರು.
ಮೊಹಮ್ಮದ್ ಸಿರಾಜ್ ಅವರ ತಂದೆಗೆ ಅವರ ಮಗ ಭಾರತ ಪರ ಆಡುವುದನ್ನು ನೋಡಬೇಕೆಂಬುದು ತಂದೆಯ ಕನಸಾಗಿತ್ತು. ಜಿಯೋ ಸಿನೆಮಾದ ಜೊತೆಗೆ ಸಿರಾಜ್ ತವರಿನಲ್ಲಿ ಆಡುತ್ತಿರುವ ತಮ್ಮ ಮೊದಲ ಟೆಸ್ಟ್ ಅನುಭವದ ಬಗ್ಗೆ ಮಾತು ಹಂಚಿಕೊಂಡಿದ್ದಾರೆ.

ಆಸ್ಟ್ರೇಲಿಯಾದಲ್ಲಿ ನಾನು ಟೆಸ್ಟ್‌ಗೆ ಪದಾರ್ಪಣೆ ಮಾಡುವ ಮೊದಲು ನಾನು ನನ್ನ ತಂದೆಯನ್ನು ಕಳೆದುಕೊಂಡೆ. ಅದು ನನಗೆ ಅತ್ಯಂತ ಕಷ್ಟಕರವಾದ ಸಮಯ. ಆದರೆ ನಾನು ಭಾರತಕ್ಕಾಗಿ ಆಡಬೇಕು ಮತ್ತು ನನ್ನ ತಂದೆಯ ಕನಸನ್ನು ಪೂರೈಸಬೇಕು ಎಂಬುದು ನನ್ನ ಅವರ ಕನಸು ಎಂದು ನಾನು ಭಾವಿಸಿದ್ದರು. ಅವರ ಕನಸು ನನಸಾಗಿಸಿದ ಸಮಾಧಾನ ನನಗಿದೆ ಎಂದಿದ್ದಾರೆ.
ಸಿರಾಜ್ ತಂದೆಯ ಮರಣದ ಸಮಯದಲ್ಲಿ, ಅವರಿಗೆ ಆಸ್ಟ್ರೇಲಿಯಾದಿಂದ ಭಾರತಕ್ಕೆ ಮರಳುವ ಆಯ್ಕೆಯನ್ನು ನೀಡಲಾಯಿತು. ಆದರೆ ಅವರು ಹಿಂತಿರುಗದಿರಲು ನಿರ್ಧರಿಸಿದರು. ಡಿಸೆಂಬರ್ 26, 2020 ರಂದು ಮೆಲ್ಬೋರ್ನ್‌ನಲ್ಲಿ ಆಡಿದ ತಮ್ಮ ಚೊಚ್ಚಲ ಟೆಸ್ಟ್‌ನಲ್ಲಿ ಸಿರಾಜ್ 5 ವಿಕೆಟ್ ಪಡೆದರು. ಆ ಕಷ್ಟದ ಸಮಯದಲ್ಲಿ ಸಮಯದಲ್ಲಿ ನನಗೆ ನನ್ನ ಕುಟುಂಬ ಒಳ್ಳೆಯ ಸಲಹೆ ನೀಡಿತು. ನನ್ನ ಕುಟುಂಬವು ಮನೆಗೆ ಮರಳದಂತೆ ಮತ್ತು ನನ್ನ ತಂದೆಯ ಕನಸನ್ನು ಈಡೇರಿಸುವಂತೆ ನನ್ನನ್ನು ತಿಳಿಸಿತು ಎಂದು ಹೇಳಿದರು.

ಸಿರಾಜ್ ಇದುವರೆಗೆ 23 ಟೆಸ್ಟ್ ಆಡಿದ್ದಾರೆ. ಈ ಪಂದ್ಯಗಳ 42 ಇನ್ನಿಂಗ್ಸ್‌ಗಳಲ್ಲಿ ಬೌಲಿಂಗ್ ಮಾಡಿದ ಅವರು 28.25 ಸರಾಸರಿಯಲ್ಲಿ 68 ವಿಕೆಟ್‌ಗಳನ್ನು ಪಡೆದಿದ್ದಾರೆ. ಈ ಅವಧಿಯಲ್ಲಿ, ಭಾರತೀಯ ವೇಗಿ 3 ಬಾರಿ ಐದು ವಿಕೆಟ್ ಮತ್ತು 4 ಬಾರಿ ನಾಲ್ಕು ವಿಕೆಟ್ ಪಡೆದಿದ್ದಾರೆ. ತನ್ನ ಚೊಚ್ಚಲ ಪಂದ್ಯದಿಂದಲೂ, ಸಿರಾಜ್ ಟೆಸ್ಟ್‌ನಲ್ಲಿ ಭಾರತದ ಪ್ರಮುಖ ಬೌಲರ್‌ಗಳಲ್ಲಿ ಒಬ್ಬರಾಗಿದ್ದಾರೆ.
ಹೈದರಾಬಾದ್‌ನಲ್ಲಿ ಮೊದಲ ಟೆಸ್ಟ್
ಭಾರತ ಮತ್ತು ಇಂಗ್ಲೆಂಡ್ ನಡುವೆ ಐದು ಪಂದ್ಯಗಳ ಟೆಸ್ಟ್ ಸರಣಿಯು ಗುರುವಾರ, ಜನವರಿ 25 ರಿಂದ ಪ್ರಾರಂಭವಾಗಲಿದೆ. ಮೊದಲ ಪಂದ್ಯ ಹೈದರಾಬಾದ್‌ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿದೆ. ಜನವರಿಯಲ್ಲಿ ಆರಂಭವಾಗಲಿರುವ ಟೆಸ್ಟ್ ಸರಣಿಯ ಕೊನೆಯ ಪಂದ್ಯ ಮಾರ್ಚ್‌ನಲ್ಲಿ ನಡೆಯಲಿದೆ. ಮೊದಲ ಎರಡು ಟೆಸ್ಟ್‌ಗಳಿಗೆ ಮಾತ್ರ ಟೀಂ ಇಂಡಿಯಾವನ್ನು ಪ್ರಕಟಿಸಲಾಗಿದೆ ಎಂಬುದು ಗಮನಾರ್ಹ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications