Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Mohammed Siraj: ಐಸಿಸಿ ಪ್ರಶಸ್ತಿಯ ಹತ್ತಿರದಲ್ಲಿ ಟೀಮ್ ಇಂಡಿಯಾ ವೇಗಿ ಮೊಹಮ್ಮದ್ ಸಿರಾಜ್

ಟೀಮ್ ಇಂಡಿಯಾ ಸದ್ಯ ಏಷ್ಯಾ ಕಪ್ ಟಿ20 ಟೂರ್ನಿಯತ್ತ ಚಿತ್ತ ನೆಟ್ಟಿದೆ. ಈ ವೇಳೆ ಐಸಿಸಿಯಿಂದ ಒಂದು ದೊಡ್ಡ ಸುದ್ದಿ ಬಂದಿದ್ದು, ವೇಗಿ ಮೊಹಮ್ಮದ್‌ ಸಿರಾಜ್‌ ಅವರ ಮುಖದಲ್ಲಿ ಮಂದಹಾಸ ಮೂಡಿಸಿದೆ. ಇಂಗ್ಲೆಂಡ್‌ನಲ್ಲಿ ಮೊಹಮ್ಮದ್‌ ಸಿರಾಜ್‌ ನೀಡಿದ ಅಮೋಘ ಪ್ರದರ್ಶನಕ್ಕೆ ಅವರ ಪ್ರತಿಫಲ ಸಿಗುವ ಸಾಧ್ಯತೆ ದಟ್ಟವಾಗಿ ಕಾಣುತ್ತಿದೆ. ಐಸಿಸಿ ಆಗಸ್ಟ್‌ ತಿಂಗಳ ಆಟಗಾರ ಪ್ರಶಸ್ತಿಗೆ ಸಿರಾಜ್‌ ಅವರನ್ನು ನಾಮ ನಿರ್ದೇಶನ ಮಾಡಿದೆ. ಈ ರೇಸ್‌ನಲ್ಲಿ ಇನ್ನು ಇಬ್ಬರು ಆಟಗಾರರು ಇದ್ದಾರೆ. ವಿಜೇತರ ಹೆಸರನ್ನು ಐಸಿಸಿ ಶೀಘ್ರದಲ್ಲಿ ಘೋಷಿಸುವ ಸಾಧ್ಯತೆ ಇದೆ.

ಮೊಹಮ್ಮದ್ ಸಿರಾಜ್‌ ಸದ್ಯ ಟೀಮ್ ಇಂಡಿಯಾದಿಂದ ವಿಶ್ರಾಂತಿ ಪಡೆಯುತ್ತಿದ್ದಾರೆ. ಇವರಿಗೆ ಏಷ್ಯಾ ಕಪ್‌ ಟಿ20 ಸರಣಿಯಲ್ಲಿ ಅವಕಾಶ ಲಭಿಸಿಲ್ಲ. ಆಗಸ್ಟ್‌ನಲ್ಲಿ ಭಾರತ ಒಂದೇ ಒಂದು ಟೆಸ್ಟ್‌ ಪಂದ್ಯವನ್ನು ಆಡಿತ್ತು. ಅದು ದಿ ಓವಲ್‌ನಲ್ಲಿ ಆಂಡರ್ಸನ್‌, ತೆಂಡೂಲ್ಕರ್ ಸರಣಿಯ ಕೊನೆಯ ಟೆಸ್ಟ್‌. ಇದಾದ ಬಳಿಕ ಟೀಮ್ ಇಂಡಿಯಾ ಯಾವುದೇ ಮಾದರಿಯ ಕ್ರಿಕೆಟ್‌ ಆಡಿಲ್ಲ. ಹೀಗಾಗಿ ಈಗ ಮತ್ತೆ ಮೈದಾನದಲ್ಲಿ ಕ್ರಿಕೆಟ್‌ ಕಲರವ ಆರಂಭವಾಗಲಿದೆ.

Mohammed Siraj nominated for ICC Player of the Month award after England heroics

ಕೊನೆಯ ಹಾಗೂ ನಿರ್ಣಾಯಕ ಟೆಸ್ಟ್‌ ಪಂದ್ಯದಲ್ಲಿ ಮೊಹಮ್ಮದ್‌ ಸಿರಾಜ್‌ ಅಮೋಘ ದಾಳಿಯನ್ನು ಸಂಘಟಿಸಿದರು. ಈ ಮೂಲಕ ಟೀಮ್ ಇಂಡಿಯಾ ಗೆಲುವಿನಲ್ಲಿ ಮಹತ್ವದ ಪಾತ್ರವನ್ನು ವಹಿಸಿದರು. ಅವರು ಐದನೇ ಟೆಸ್ಟ್‌ ಪಂದ್ಯದಲ್ಲಿ 21.11ರ ಸರಾಸರಿಯಲ್ಲಿ 9 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಜಸ್ಪ್ರೀತ್‌ ಬುಮ್ರಾ ಕೊನೆಯ ಟೆಸ್ಟ್‌ ಪಂದ್ಯದಲ್ಲಿ ವಿಶ್ರಾಂತಿ ಪಡೆದಾಗ ಸಿರಾಜ್‌ ಪ್ರಮುಖ ಬೌಲರ್ ಆಗಿ ಕಾಣಿಸಿಕೊಂಡರು. ಅಲ್ಲದೆ ತಂಡದ ವೇಗದ ಬೌಲಿಂಗ್ ನೊಗವನ್ನು ಹೊತ್ತು ಸಮರ್ಥವಾಗಿ ತಂಡವನ್ನು ಗೆಲುವಿನ ದಡ ದಾಟಿಸಿದ್ದಾರೆ. ಇವರು ಐದನೇ ಪಂದ್ಯದಲ್ಲಿ 9 ವಿಕೆಟ್‌ ಪಡೆದು ಬೀಗಿದ್ದಾರೆ. ಇವರಿಗೆ ಐದನೇ ಟೆಸ್ಟ್‌ ಪಂದ್ಯದಲ್ಲಿ ಕನ್ನಡಿಗ ಪ್ರಸಿದ್ಧ್ ಕೃಷ್ಣಾ ಉತ್ತಮ ಸಾಥ್ ನೀಡಿದ್ದರು.

ಇಂಗ್ಲೆಂಡ್‌ನಲ್ಲಿ ಸಿರಾಜ್‌ ಕಮಾಲ್‌

ಸಿರಾಜ್‌ ಇಂಗ್ಲೆಂಡ್‌ ಸರಣಿಯಲ್ಲಿ ಐದೂ ಟೆಸ್ಟ್‌ ಪಂದ್ಯಗಳನ್ನು ಆಡಿದ್ರೂ ಸಹ ಸುಸ್ತಾದಂತೆ ಕಂಡು ಬಾರಲಿಲ್ಲ. ಕೊನೆಯ ದಿನದಂದು, ಸಿರಾಜ್ ಅದ್ಭುತ ಸ್ಪೆಲ್ ಎಸೆಯುವ ಮೂಲಕ ತಂಡವನ್ನು ಗೆಲುವಿನತ್ತ ಕೊಂಡೊಯ್ಯುವಲ್ಲಿ ಯಶಸ್ವಿಯಾದರು. ಪರಿಣಾಮ ಟೀಮ್ ಇಂಡಿಯಾ ಆಂಡರ್ಸನ್‌, ತೆಂಡೂಲ್ಕರ್ ಸರಣಿಯಲ್ಲಿ 2-2 ಸಮಬಲ ಸಾಧಿಸುವಲ್ಲಿ ಸಫಲವಾಗಿದೆ. ಇವರ ಅಮೋಘ ದಾಳಿಯ ಪರಿಣಾಮ ಇವರಿಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ಸಹ ಒಲಿದು ಬಂದಿತು.

Mohammed Siraj nominated for ICC Player of the Month award after England heroics

ಐಸಿಸಿ ಆಗಸ್ಟ್‌ ತಿಂಗಳ ಆಟಗಾರರ ರೇಸ್‌ನಲ್ಲಿ ಇನ್ನು ಇಬ್ಬರು ಆಟಗಾರರು ಇದ್ದಾರೆ. ಇದರಲ್ಲಿ ನ್ಯೂಜಿಲೆಂಡ್‌ನ ಮ್ಯಾಟ್‌ ಹೆನ್ರಿ ಹಾಗೂ ವೆಸ್ಟ್ ಇಂಡೀಸ್‌ನ ಜೇಡನ್ ಸೀಲ್ಸ್ ಸೇರಿದ್ದಾರೆ. ಜಿಂಬಾಬ್ವೆ ವಿರುದ್ಧದ ಸರಣಿಯಲ್ಲಿ ಮ್ಯಾಟ್ ಹ್ಯಾನ್ರಿ ಅಮೋಘ ಬೌಲಿಂಗ್ ಪ್ರದರ್ಶನ ನೀಡಿ ಅಬ್ಬರಿಸಿದ್ದರು. ಇವರು ಸರಣಿಯ 2 ಪಂದ್ಯಗಳಲ್ಲಿ 16 ವಿಕೆಟ್‌ ಕಬಳಿಸಿದ್ದರು. ಇನ್ನು ಪಾಕ್‌ ವಿರುದ್ಧ ವಿಂಡೀಸ್‌ ಬೌಲರ್‌ ಸೀಲ್ಸ್ 10 ವಿಕೆಟ್‌ ಪಡೆದಿದ್ದರು. ಹೀಗಾಗಿ ಈ ಇಬ್ಬರೂ ಸಹ ಈ ರೇಸ್‌ನಲ್ಲಿದ್ದಾರೆ.

Story first published: Monday, September 8, 2025, 18:50 [IST]
Other articles published on Sep 8, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+