ನಾಯಕನಾಗಿ ರೋಹಿತ್ ಶರ್ಮಾರಲ್ಲಿರುವ ದೊಡ್ಡ ಗುಣವನ್ನು ಹೇಳಿದ ಮೊಹಮ್ಮದ್ ಸಿರಾಜ್

ಭಾರತದ ವೇಗದ ಬೌಲರ್ ಮೊಹಮ್ಮದ್ ಸಿರಾಜ್ ಟೀಮ್ ಇಂಡಿಯಾದ ಖಾಯಂ ನಾಯಕ ರರೋಹಿತ್ ಶರ್ಮಾ ಬಗ್ಗೆ ವಿಶೇಷ ಪ್ರಶಂಸೆಯ ಮಾತುಗಳನ್ನಾಡಿದ್ದಾರೆ. ನಾಯಕನಾಗಿ ರೋಹಿತ್ ಶರ್ಮಾ ಅವರಲ್ಲಿರುವ ಆಟಗಾರರನ್ನು ಅರ್ಥೈಸಿಕೊಳ್ಳುವ ಗುಣದ ಬಗ್ಗೆ ಮೊಹಮ್ಮದ್ ಸಿರಾಜ್ ಪ್ರಶಂಸೆಯ ಮಾತುಗಳನ್ನಾಡಿದ್ದಾರೆ.
ರೋಹಿತ್ ಶರ್ಮಾ ಯಾವಾಗಲೂ ಪರ್ಯಾಯ ಯೋಜನೆಯನ್ನು ಹಾಕಿಕೊಂಡಿರುತ್ತಾರೆ. ಅದರ ಜೊತೆಗೆ ಬೌಲರ್‌ಗಳನ್ನು ಅದ್ಭುತವಾಗಿ ಪ್ರೋತ್ಸಾಹಿಸುತ್ತಾರೆ ಎಂದಿದ್ದಾರೆ ಮೊಹಮ್ಮದ್ ಸಿರಾಜ್. ಕಳೆದ ಎರಡು ವರ್ಷಗಳಿಂದ ಭಾರತ ಟೆಸ್ಟ್ ತಂಡದಲ್ಲಿ ಆಡುತ್ತಿರುವ ಸಿರಾಜ್ ತಂಡದಲ್ಲಿ ಸ್ಥಾನವನ್ನು ಪಡೆದುಕೊಳ್ಳಲು ಯಶಸ್ವಿಯಾಗಿದ್ದಾರೆ. ಅಲ್ಲದೆ ಕಳೆದ ಒಂದೂವರೆ ವರ್ಷಗಳಿಂದ ಹೈದರಾಬಾದ್‌ನ ಈ ವೇಗಿ ಸ್ಥಿರ ಪ್ರದರ್ಶನವನ್ನು ನೀಡಿಕೊಂಡು ಬಂದಿದ್ದಾರೆ.

ಭಾರತದ ನಾಯಕನಾಗಿ ಮಿಂಚಿರುವ ರೋಹಿತ್
ರೋಹಿತ್ ಶರ್ಮಾ ಕಳೆದ ವರ್ಷಾಂತ್ಯದಲ್ಲಿ ಭಾರತದ ಟೆಸ್ಟ್ ತಂಡದ ನಾಯಕತ್ವ ವಹಿಸಿಕೊಂಡರು. ಅದಾದ ಬಳಿಕ ರೋಹಿತ್ ಶರ್ಮಾ ಟೆಸ್ಟ್ ತಂಡದ ನಾಯಕತ್ವ ವಹಿಸಿಕೊಳ್ಳುವ ಮೂಲಕ ಮೂರು ಮಾದರಿಯಲ್ಲಿಯೂ ತಂಡದ ನಾಯಕತ್ವವನ್ನು ವಹಿಸಿಕೊಂಡಿದ್ದಾರೆ. ರೋಹಿತ್ ಶರ್ಮಾ ನಾಯಕತ್ವದಲ್ಲಿ ಭಾರತ ತವರಿನಲ್ಲಿ ಅಮೋಘ ಪ್ರದರ್ಶನ ನೀಡಿದೆ ಅದರಲ್ಲೂ ಟಿ20 ಮಾದರಿಯಲ್ಲಿ ಭಾರತ ತಂಡ ಸತತ ಮೂರು ಸರಣಿಗಳನ್ನು ವಶಕ್ಕೆ ಪಡೆದುಕೊಂಡಿದೆ.

ರೋಹಿತ್ ಬಗ್ಗೆ ಮೆಚ್ಚುಗೆಯ ಮಾತು
"ರೋಹಿತ್ ಶರ್ಮಾ ಆಟಗಾರನ ಮಾನಸಿಕ ಸ್ಥಿತಿಯನ್ನು ಅರ್ಥಮಾಡಿಂಡಿರುವ ನಾಯಕನಾಗಿದ್ದಾರೆ. ಮೈದಾನದಲ್ಲಿ ನಮಗೆ ಕಠಿಣ ಸಂದರ್ಭ ಎದುರಾದಾಗ ಆತ ಪರ್ಯಾಯ ಯೋಜನೆಯೊಂದಿಗೆ ಬರುತ್ತಾರೆ. ಜೊತೆಗೆ ಆಟದಲ್ಲಿ ಉತ್ತಮವಾಗಿ ಪ್ರದರ್ಶನ ನೀಡಲು ಬೌಲರ್‌ಗಳನ್ನು ಪ್ರೇರೇಪಿಸುತ್ತಾರೆ. ನಮ್ಮನ್ನು ಚೆನ್ನಾಗಿ ಅರ್ಥಮಾಡಿಕೊಳ್ಳುವ ನಾಯಕನ ಅಡಿಯಲ್ಲಿ ಕೆಲಸ ಮಾಡುವುದು ಉತ್ತಮ ಅನುಭವವಾಗಿದೆ" ಎಂದು ಭಾರತೀಯ ತಂಡದ ನಾಯಕನ ಬಗ್ಗೆ ಮೊಹಮ್ಮದ್ ಸಿರಾಜ್ ಅದ್ಭುತ ಮಾತುಗಳನ್ನಾಡಿದ್ದಾರೆ.

ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯಕ್ಕೆ ಸಜ್ಜಾಗುತ್ತಿರುವ ಸಿರಾಜ್
ಕಳೆದ ವರ್ಷ ಕೊರೊನಾವೈರಸ್ ಕಾರಣದಿಂದಾಗಿ ಇಂಗ್ಲೆಂಡ್ ಪ್ರವಾಸದ ಟೆಸ್ಟ್ ಸರಣಿಯ ಅಂತಿಮ ಪಂದ್ಯ ಜುಲೈ ತಿಂಗಳಿನಲ್ಲಿ ಆಯೋಜನೆಯಾಗಲಿದೆ. ಈ ಸರಣಿಗೆ ಸಜ್ಜಾಗುತ್ತಿವುವುದಾಗಿ ಸಿರಾಜ್ ತಿಳಿಸಿದ್ದಾರೆ. "ಇಂಗ್ಲೆಂಡ್ ವಿರುದ್ದ ಟೆಸ್ಟ್ ಪಂದ್ಯವನ್ನು ಆಡುವುದಕ್ಕೂ ಮುನ್ನ ನಮಗೆ ಕಾಲಾವಕಾಶವಿದೆ. ನನ್ನ ಮನೆಗ ಸಮೀಪದ ಕ್ರೀಡಾಂಗಣದಲ್ಲಿ ಅಭ್ಯಾಸವನ್ನು ನಡೆಸುತ್ತಿದ್ದು ಫಿಟೆಎನೆಸ್ ಮೇಲೆ ಗಮನಹರಿಸುತ್ತಿದ್ದೇನೆ. ಟಿ20 ಕ್ರಿಕೆಟ್‌ನಿಂದ ಟೆಸ್ಟ್ ಮಾದರಿಗೆ ಬದಲಾವಣೆಯಾಗುವುದು ಸುಲಭವಲ್ಲ. ಟೆಸ್ಟ್ ಕ್ರಿಕಟ್‌ನಲ್ಲಿ ಸುದೀರ್ಘ ಸ್ಪೆಲ್‌ಬಗಳ್ನನು ನಡೆಸುವುದರಿಂದಾಗಿ ನನ್ನ ಆಟದ ಸ್ಥಿರತೆಯ ಮೇಲೆ ಗಮನಹರಿಸಬೇಕಿದೆ. ಈಗ ನನ್ನ ಗುರಿ ಅದೊಂದೆ ಆಗಿದೆ" ಎಂದಿದ್ದಾರೆ ಮೊಹಮ್ಮದ್ ಸಿರಾಜ್.

ಐಪಿಎಲ್‌ನಲ್ಲಿ ವೈಫಲ್ಯ ಅನುಭವಿಸಿದ ಸಿರಾಜ್
ಇನ್ನು ಈ ಬಾರಿಯ ಐಪಿಎಲ್‌ನಲ್ಲಿ ಮೊಹಮ್ಮದ್ ಸಿರಾಜ್ ಅತ್ಯಂತ ಕಳಪೆ ಪ್‌ರದರ್ಶನ ನಿಡಿ ಟೀಕೆಗೆ ಒಳಗಾಗಿದ್ದರು. 2021ರ ಆವೃತ್ತಿಯಲ್ಲಿ ಸಿರಾಜ್ ಪ್ರದರ್ಶಿಸಿದ ಅದ್ಭುತ ಪ್ರದರ್ಶನದ ಕಾರಣದಿಂದಾಗಿ ಆರ್‌ಸಿಬಿ ಸಿರಾಜ್ ಅವರನ್ನು ರೀಟೈನ್ ಮಾಡಿಕೊಂಡಿತ್ತು. ಆದರೆ ಆ ನಿರೀಕ್ಷೆಯನ್ನು ಸಿರಾಜ್ ಹುಸಿಗೊಳಿಸಿದರು. 15 ಪಂದ್ಯಗಳನ್ನು ಆಡಿದ ಸಿರಾಜ್ ಕೇವಲ 9 ವಿಕೆಟ್ ಸಂಪಾದಿಸಲಷ್ಟೇ ಶಕ್ತವಾದರು. ಅಲ್ಲದೆ 10ಕ್ಕೂ ಅಧಿಕ ಎಕಾನಮಿಯಲ್ಲಿ ಬೌಲಿಂಗ್ ನಡೆಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications