For Quick Alerts
ALLOW NOTIFICATIONS  
For Daily Alerts
 

ಸಿರಾಜ್‌ ಬೌಲಿಂಗ್‌ ಸುಧಾರಿಸಲು ಬುಮ್ರಾ ಕೊಟ್ಟ ಆ ಒಂದು ಸಲಹೆ ಏನು?

ಟೀಮ್ ಇಂಡಿಯಾದ ಸ್ಟಾರ್ ಬೌಲರ್ ಮೊಹಮ್ಮದ್‌ ಸಿರಾಜ್‌ ಅವರು ನ್ಯೂಜಿಲೆಂಡ್‌ ವಿರುದ್ಧದ ಸರಣಿಯಲ್ಲಿ ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದರು. ಹೀಗಾಗಿ ಆಸ್ಟ್ರೇಲಿಯಾ ವಿರುದ್ಧ ಇವರು ಹೇಗೆ ಪ್ರದರ್ಶನ ನೀಡುತ್ತಾರೆ ಎಂಬ ಪ್ರಶ್ನೆ ಉದ್ಭವಿಸಿದ್ದವು. ಇದಕ್ಕೆ ಉತ್ತರವಾಗಿ ಬಾರ್ಡರ್‌ ಗವಾಸ್ಕರ್‌ ಟ್ರೋಫಿಯಲ್ಲಿ ಪ್ರದರ್ಶನ ನೀಡಿದ್ದಾರೆ. ಮೊದಲ ಪಂದ್ಯದಲ್ಲಿ ಇವರು ಎರಡೂ ಇನಿಂಗ್ಸ್‌ಗಳಲ್ಲಿ ಸ್ಥಿರ ಪ್ರದರ್ಶನ ನೀಡಿ ಐದು ವಿಕೆಟ್‌ ಪಡೆದಿದ್ದಾರೆ. ಈ ಸಾಧನೆಯ ಹಿಂದಿನ ಗುಟ್ಟನ್ನು ಸಿರಾಜ್‌ ಬಿಚ್ಚಿಟ್ಟಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಟೆಸ್ಟ್ ಸರಣಿಯಲ್ಲಿ ಮೊಹಮ್ಮದ್ ಸಿರಾಜ್ ನಿಧಾನವಾಗಿ ಹಳೆಯ ಫಾರ್ಮ್‌ಗೆ ಮರಳುತ್ತಿದ್ದಾರೆ. ಇದರ ಹಿಂದಿನ ಗುಟ್ಟನ್ನು ಸಿರಾಜ್‌ ಬಹಿರಂಗ ಪಡಿಸಿದ್ದಾರೆ. ಈ ಸರಣಿಯಲ್ಲಿ ಹಲವು ವಿಷಯಗಳ ಮೇಲೆ ವರ್ಕ್‌ ಮಾಡಿದ್ದು ಫಲ ನೀಡಿದೆ ಎಂದು ತಿಳಿಸಿದ್ದಾರೆ.

mohammed Siraj Reveals Key to Success and Jasprit Bumrah s Advice Ahead of Adelaide Test

ಬುಮ್ರಾ ಗರಡಿಯಲ್ಲಿ ಸಿರಾಜ್ ಕಲಿಯುತ್ತಿದ್ದಾರೆ. ಟೀಂ ಇಂಡಿಯಾ ತನ್ನ ಮುಂದಿನ ಪಂದ್ಯವನ್ನು ಆಸ್ಟ್ರೇಲಿಯಾ ವಿರುದ್ಧ ಅಡಿಲೇಡ್‌ನಲ್ಲಿ ಡಿಸೆಂಬರ್ 06 ರಂದು ಆಡಲಿದೆ.

ಸಿರಾಜ್‌ಗೆ ಬುಮ್ರಾ ಹೇಳಿದ್ದೇನು?

ಆಸ್ಟ್ರೇಲಿಯಾ ಪ್ರವಾಸ ಬೆಳೆಸಿದಾಗ ಹಂಗಾಮಿ ನಾಯಕ ಜಸ್ಪ್ರಿತ್ ಬುಮ್ರಾ ಅವರೊಂದಿಗೆ ಕಾಲಾವಕಾಶ ಸಿಕ್ಕಿತ ಎಂದು ಮೊಹಮ್ಮದ್ ಸಿರಾಜ್ತಿಳಿಸಿದ್ದಾರೆ. ಈ ವೇಳೆ ಒಂದು ವರ್ಷದಿಂದ ಸಿರಾಜ್‌ ಲಯಕ್ಕೆ ಮರಳಲು ಪರದಾಟುತ್ತಿದ್ದರು. ವಿಶ್ವದ ನಂಬರ್ ಒನ್ ಬೌಲರ್ ಬುಮ್ರಾ ಅವರೊಂದಿಗೆ ಮಾತನಾಡಿದ್ದು ನನಗೆ ಲಾಭವಾಗಿದೆ ಎಂದು ಸಿರಾಜ್ ಹೇಳಿದ್ದಾರೆ. ಅವರು ಹೊಸ ಬೌಲಿಂಗ್ ಕೋಚ್ ಮೊರ್ನೆ ಮೊರ್ಕೆಲ್ ಅವರಿಗೆ ಕ್ರೆಡಿಟ್ ನೀಡಿದರು.

mohammed Siraj Reveals Key to Success and Jasprit Bumrah s Advice Ahead of Adelaide Test

ಸಮಯ ಸಿಕ್ಕಾಗಲೆಲ್ಲಾ ನಾನು ಬುಮ್ರಾ ಅವರೊಂದಿಗೆ ಮಾತನಾಡುತ್ತೇನೆ. ಮೊದಲ ಟೆಸ್ಟ್ ಪಂದ್ಯಕ್ಕೂ ಮುನ್ನ ನನ್ನ ಬೌಲಿಂಗ್ ಬಗ್ಗೆ ಅವರೊಂದಿಗೆ ಮಾತನಾಡಿದ್ದೆ. ಒಂದು ಸ್ಥಳದಲ್ಲಿ ನಿರಂತರವಾಗಿ ಬೌಲಿಂಗ್ ಮಾಡಲು ಸೂಚಿಸಿದ್ದರು. ವಿಕೆಟ್‌ ಪಡೆಯುವ ಉತ್ಸುಕತೆ ಬದಿಗಿಡುವಂತೆ ಸಲಹೆ ನೀಡಿದ್ದರು. ನಿನ್ನ ಆಟವನ್ನು ನೀನು ಆನಂದಿಸುವಂತೆ ಸಲಹೆ ನೀಡಿದ್ದರು. ವಿಕೆಟ್‌ಗಳು ಬಿಳದೆ ಇದ್ದಲ್ಲಿ ನಿನ್ನೊಂದಿಗೆ ನಾನು ಮಾತನಾಡುವೆ ಎಂದು ತಿಳಿಸಿದ್ದರು ಎಂದು ನೆನಪಿಸಿಕೊಳ್ಳುತ್ತಾರೆ.

ಸಿರಾಜ್ ತಮ್ಮ ಬೌಲಿಂಗ್ ಸುಧಾರಣೆಯ ಬಗ್ಗೆ ಮಾಜಿ ಕೋಚ್ ಭರತ್ ಅರುಣ್ ಅವರೊಂದಿಗೆ ಸಹ ಚರ್ಚೆಯನ್ನು ನಡೆಸಿದ್ದಾಗಿ ತಿಳಿಸಿದ್ದಾರೆ. ನನ್ನ ಬೌಲಿಂಗ್‌ ಹತ್ತಿರದಿಂದ ಭರತ್ ಸರ್ ನೋಡಿದ್ದು, ಅವರೊಂದಿಗೆ ಮಾತನಾಡಿದ್ದೇನೆ. ಆಗ ಅವರು ನಿನ್ನ ನೈಜ ದಾಳಿಯನ್ನು ಸಂಘಟಿಸು, ಆತಂಕಕ್ಕೆ ಒಳಗಾಗಬೇಡ ಎಂದಿದ್ದಾರೆ.

ಬಾರ್ಡರ್‌ ಗವಾಸ್ಕರ್‌ ಟೆಸ್ಟ್‌ ಸರಣಿ ಟೀಮ್ ಇಂಡಿಯಾ ಪಾಲಿಗೆ ಮಹತ್ವದಾಗಿದೆ. ಭಾರತದಲ್ಲಿ ನಡೆದ ನ್ಯೂಜಿಲೆಂಡ್‌ ವಿರುದ್ಧ ಟೆಸ್ಟ್‌ ಸರಣಿಯಲ್ಲಿ ಹೀನಾಯ ಪ್ರದರ್ಶನ ನೀಡಿದ್ದ ಟೀಮ್ ಇಂಡಿಯಾ, ಆಸ್ಟ್ರೇಲಿಯಾದಲ್ಲಿ ಗೆಲುವು ಸಾಧಿಸುವ ಅನಿವಾರ್ಯತೆಯಲ್ಲಿ ಇತ್ತು. ಬಾರ್ಡರ್‌ ಗವಾಸ್ಕರ್‌ ಟೆಸ್ಟ್‌ ಸರಣಿಯಲ್ಲಿ 4 ಗೆಲುವು ಸಾಧಿಸಿದರೆ ಮಾತ್ರ ಟೀಮ್ ಇಂಡಿಯಾ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ಗೆ ಅರ್ಹತೆ ಪಡೆಯಲಿದ್ದು, ಈ ಸರಣಿಯ ಮೇಲೆ ಎಲ್ಲರ ಚಿತ್ತ ನೆಟ್ಟಿದೆ.

Story first published: Monday, December 2, 2024, 20:45 [IST]
Other articles published on Dec 2, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+