ಟೀಮ್ ಇಂಡಿಯಾದ ವೇಗದ ಬೌಲರ್ ಜಸ್ಪ್ರೀತ್ ಬೂಮ್ರಾ ಐಸಿಸಿ ಏಕದಿನ ಬೌಲರ್ ಶ್ರೇಯಾಂಕ ಪಟ್ಟಿಯಲ್ಲಿ ನಂ.1 ಸ್ಥಾನಕ್ಕೇರಿದ್ದಾರೆ. ಈ ಮೂಲಕ ವಿಶ್ವಕಪ್ ಟೂರ್ನಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡುತ್ತಿರುವ ಸಂದರ್ಭದಲ್ಲಿ ಭಾರತಕ್ಕೆ ಮತ್ತೊಂದು ಗರಿ ಮೂಡಿದಂತಾಗಿದೆ. ಆದರೆ ಶ್ರೇಯಾಂಕ ಪಟ್ಟಿಯಲ್ಲಿ ನಂಬರ್ 1 ಸ್ಥಾನಕ್ಕೇರಿರುವುದು ಏನೂ ಬದಲಾವಣೆ ಮಾಡುವುದಿಲ್ಲ ಎಂದು ಸಿರಾಜ್ ಹೇಳಿಕ ನೀಡಿದ್ದು ವಿಶ್ವಕಪ್‌ನಲ್ಲಿ ಗೆಲುವು ಸಾಧಿಸುವುದೇ ತಮ್ಮ ಗುರಿಯಾಗಿದೆ ಎಂದಿದ್ದಾರೆ.
ಈ ಬಾರಿಯ ವಿಶ್ವಕಪ್ ಟೂರ್ನಿಯಲ್ಲಿ ಮೊಹಮ್ಮದ್ ಸಿರಾಜ್ ಉತ್ತಮ ಪ್ರದರ್ಶನ ನೀಡಿದ್ದಾರೆ. ಆಡಿರುವ 8 ಪಂದ್ಯಗಳಲ್ಲಿ 5.23ರಷ್ಟು ಅದ್ಭುತ ಎಕಾನಮಿಯೊಂದಿಗೆ ಟೀಮ್ ಇಂಡಿಯಾದ ವೇಗಿ 10 ವಿಕೆಟ್‌ಗಳನ್ನು ಪಡೆದುಕೊಂಡಿದ್ದಾರೆ. ಈ ಮೂಲಕ ಮತ್ತೆ ಅಗ್ರಸ್ಥಾನವನ್ನು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ ಟೀಮ್ ಇಂಡಿಯಾದ ವೇಗಿ.

"ಪ್ರಾಮಾಣಿಕವಾಗಿ ಹೇಳಬೇಕೆಂದರೆ ನಾನು ಇದಕ್ಕೂ ಮುನ್ನ ಕೆಲ ಸಮಯಗಳ ವರೆಗೆ ನಂಬರ್ 1 ಸ್ಥಾನದಲ್ಲಿದ್ದೆ ಬಳಿಕ ಕೆಳಗಿಳಿದಿದೆ. ನಂಬರ್ 1 ಸ್ಥಾನ ನನಲ್ಲಿ ಯಾವುದೇ ಬದಲಾವಣೆ ಮಾಡುವುದಿಲ್ಲ. ಗುರಿ ಟೀಮ್ ಇಂಡಿಯಾ ವಿಶ್ವಕಪ್ ಗೆಲ್ಲುವುದು ಮಾತ್ರವೇ ಆಗಿದೆ. ಅದು ನನ್ನ ಮತ್ತು ಇಡೀ ತಂಡದ ಗುರಿಯೂ ಹೌದು" ಎಂದಿದ್ದಾರೆ ಟೀಮ್ ಇಂಡಿಯಾದ ವೇಋಗದ ಬೌಲರ್ ಮೊಹಮ್ಮದ್ ಸಿರಾಜ್.
"ನಾನು ಈ ತಂಡದ ಭಾಗವಾಗಿರುವುದಕ್ಕೆ ಬಹಳ ಹೆಮ್ಮೆ ಪಡುತ್ತೇನೆ. ಇದರಲ್ಲಿ ಭಾಗಿಯಾಗಿ ಇಂಥಾ ಪ್ರದರ್ಶನ ನೀಡಲು ಅವಕಾಶ ದೊರೆತಿದೆ. ಈ ತಂಡದಲ್ಲಿ ಇರುವುದಕ್ಕೆ ನಾನು ಬಹಳ ಸಂತಸಪಡುತ್ತೇನೆ. ಪ್ರತಿ ಪಂದ್ಯದಲ್ಲಿಯೂ ಈ ತಂಡ ಅತ್ಯುತ್ತಮ ಪ್ರದರ್ಶನ ನೀಡಬೇಕು ಎಂದು ಹೃದಯದಿಂದ ಬಯಸುತ್ತಿದ್ದೇನೆ. ಈ ತಂಡದಲ್ಲಿರುವುದಕ್ಕೆ ಬಹಳ ಖುಷಿಯಿದೆ" ಎಂದಿದ್ದಾರೆ ಮೊಹಮ್ಮದ್ ಸಿರಾಜ್.
ಟೀಮ್ ಇಂಡಿಯಾ ಪ್ರಸ್ತುತ ಬೆಂಗಳೂರಿಗೆ ಆಗಮಿಸಿದ್ದು ಕೊನೆಯ ಲೀಗ್ ಪಂದ್ಯಕ್ಕಾಗಿ ಅಭ್ಯಾಸ ಪಡೆಸುತ್ತಿದೆ. ಬೆಂಗಳೂರಿನಲ್ಲಿ ಭಾನುವಾರ ಮುಂದಿನ ಭಾನುವಾರ ನೆದರ್ಲೆಂಡ್ಸ್ ವಿರುದ್ಧ ಕೊನೆಯ ಲೀಗ್ ಪಂದ್ಯವನ್ನು ಭಾರತ ಆಡಲಿದೆ. ಇನ್ನು ಟೀಮ್ ಇಂಡಿಯಾ ಈಗಾಗಲೇ ಮೊದಲ ಸ್ಥಾನಿಯಾಗಿ ಸೆಮಿಫೈನಲ್‌ಗೆ ಪ್ರವೇಶ ಪಡೆದುಕೊಂಡಿದ್ದು ಭಾರತಕ್ಕೆ ಯಾರು ಎದುರಾಳಿಯಾಗಿ ಕಣಕ್ಕಿಳಿಯಲಿದೆ ಎನ್ನುವುದು ಕುತೂಹಕ ಮೂಡಿಸಿದೆ.