Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Mohammad Siraj Victory Parade: ಹೈದರಾಬಾದ್‌ನಲ್ಲಿ ವಿಶ್ವ ಚಾಂಪಿಯನ್‌ ಮೊಹಮ್ಮದ್ ಸಿರಾಜ್ ವಿಜಯೋತ್ಸವದ ಮೆರವಣಿಗೆ

ಜುಲೈ 5 ಶುಕ್ರವಾರ, ಟಿ20 ವಿಶ್ವಕಪ್ ಚಾಂಪಿಯನ್ ಟೀಮ್‌ ಇಂಡಿಯಾ ಗುರುವಾರ ಮುಂಬೈನಲ್ಲಿ ವಿಜಯೋತ್ಸವದ ಮೆರವಣಿಗೆ ನಡೆಸಿತು. ಇದಾದ ಬಳಿಕ ಭಾರತ ತಂಡ ವಾಂಖೆಡೆ ಸ್ಟೇಡಿಯಂನಲ್ಲಿ ಆಯೋಜಿಸಿದ್ದ ಅದ್ಧೂರಿ ಸನ್ಮಾನ ಸಮಾರಂಭದಲ್ಲಿ ಪಾಲ್ಗೊಂಡಿತು.

ಇದಾದ ನಂತರ, ವಿಶ್ವ ಚಾಂಪಿಯನ್ ತಂಡದ ಭಾಗವಾಗಿದ್ದ ವೇಗದ ಬೌಲರ್ ಮೊಹಮ್ಮದ್ ಸಿರಾಜ್ ಅವರು ತಮ್ಮ ತವರು ಹೈದರಾಬಾದ್ ತಲುಪಿದ ನಂತರ ಮತ್ತೊಂದು ವಿಜಯದ ಪರೇಡ್ ನಡೆಸುವುದಾಗಿ ಘೋಷಿಸಿದ್ದರು. ಶುಕ್ರವಾರ ಸಂಜೆ ಹೈದರಾಬಾದ್ ತಲುಪಿದ ಸಿರಾಜ್ ಅವರಿಗೆ ವಿಮಾನ ನಿಲ್ದಾಣದಲ್ಲಿ ಆತ್ಮೀಯ ಸ್ವಾಗತ ಕೋರಲಾಯಿತು. ಬಳಿಕ ವಿಜಯೋತ್ಸವ ಮೆರವಣಿಗೆ ನಡೆಸಿದರು.

Mohammed Siraj Victory Parade in Hyderabad

ಸಿರಾಜ್ ವಿಜಯೋತ್ಸವ

ಹೈದರಾಬಾದ್ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಮೊಹಮ್ಮದ್ ಸಿರಾಜ್ ಅವರಿಗೆ ಸಾವಿರಾರು ಅಭಿಮಾನಿಗಳು ಅದ್ಧೂರಿ ಸ್ವಾಗತ ಕೋರಿದರು. ಸಿರಾಜ್ ಓಪನ್ ಟಾಪ್ ಕಾರು ಹತ್ತಿ ಸಾವಿರಾರು ಅಭಿಮಾನಿಗಳ ನಡುವೆ ವಿಜಯೋತ್ಸವ ಮೆರವಣಿಗೆ ಆರಂಭಿಸಿದರು.

ಸಿರಾಜ್, ಈ ಪರೇಡ್ ಗುರುವಾರ ಮುಂಬೈನಲ್ಲಿ ನಡೆದ ಟೀಮ್‌ ಇಂಡಿಯಾದ ವಿಜಯೋತ್ಸವವನ್ನು ನೆನಪಿಸಿತು. ಸಿರಾಜ್ ಅವರ ಈ ಮೆರವಣಿಗೆಯಲ್ಲಿ, ಜನರು ಬೀದಿಗಳಲ್ಲಿ ಅಪಾರ ಸಂಖ್ಯೆಯಲ್ಲಿ ಜಮಾಯಿಸಿದರು. ಸಾವಿರಾರು ಅಭಿಮಾನಿಗಳು ತಮ್ಮ ನೆಚ್ಚಿನ ಆಟಗಾರರನ್ನು ನೋಡಲು ನೂಕಾಟ ನಡೆಸಿದರು.

ತಮ್ಮ ಚಾಂಪಿಯನ್ ಆಟಗಾರನ ಗೌರವಾರ್ಥ ಅಭಿಮಾನಿಗಳು ಈ ವಿಜಯೋತ್ಸವವನ್ನು ಆಯೋಜಿಸಿದ್ದರು. ಹೈದರಾಬಾದ್‌ನಲ್ಲಿ ಸಿರಾಜ್ ಅವರ ಗೌರವಾರ್ಥ ಈ ವಿಜಯೋತ್ಸವ ಸಂಜೆ 6.30ಕ್ಕೆ ಸರೋಜಿನಿ ದೇವಿ ಕಣ್ಣಿನ ಆಸ್ಪತ್ರೆಯಿಂದ ಆರಂಭವಾಗಿ ಮೆಹದಿಪಟ್ಟಣಂ ಮೂಲಕ ಹೈದರಾಬಾದ್‌ನ ಈದ್ಗಾ ಮೈದಾನಕ್ಕೆ ತೆರಳಿತು.

ಈ ವೇಳೆ ರಸ್ತೆಯ ಇಕ್ಕೆಲಗಳಲ್ಲಿ ನೆರೆದಿದ್ದ ಅಪಾರ ಸಂಖ್ಯೆಯ ಅಭಿಮಾನಿಗಳು ವಿಶ್ವ ಚಾಂಪಿಯನ್ ಆಟಗಾರನೊಂದಿಗೆ ಸಾಗಿದರು. ಸಿರಾಜ್ ಅಭಿಮಾನಿಗಳೊಂದಿಗೆ ಲಹರಾ ದೋ ಹಾಡನ್ನು ಹಾಡಿ ಸಂಭ್ರಮಿಸಿದರು.

Story first published: Friday, July 5, 2024, 23:49 [IST]
Other articles published on Jul 5, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+