Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಭಾರತೀಯ ಆಟಗಾರನ ನಿಂದಿಸಿದ ಆಸ್ಟ್ರೇಲಿಯನ್ ಫ್ಯಾನ್ಸ್: ವಿಡಿಯೋ

Mohammed Siraj was labelled a “grub” by members of the Gabba crowd: Video

ಬ್ರಿಸ್ಬೇನ್: ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಟೀಮ್ ಇಂಡಿಯಾಕ್ಕೆ ಆಸ್ಟ್ರೇಲಿಯನ್ ಕ್ರಿಕೆಟ್ ಅಭಿಮಾನಿಗಳ ಉಪಟಳದಿಂದಾಗಿ ಬೇಸರವುಂಟಾಗಿದೆ. ಟೆಸ್ಟ್ ಸರಣಿ ಆಡುತ್ತಿರುವ ಭಾರತೀಯರನ್ನು ಗುರಿಯಾಗಿಸಿ ಆಸ್ಟ್ರೇಲಿಯನ್ ಅಭಿಮಾನಿಗಳು ಜನಾಂಗೀಯವಾಗಿ ನಿಂದಿಸಿದ್ದರು. ಈ ಬಗ್ಗೆ ಭಾರತದ ವೇಗಿಗಳಾದ ಜಸ್‌ಪ್ರೀತ್‌ ಬೂಮ್ರಾ ಮತ್ತು ಮೊಹಮ್ಮದ್ ಸಿರಾಜ್ ದೂರಿತ್ತಿದ್ದರು.

ಸಿಡ್ನಿ ಕ್ರಿಕೆಟ್‌ ಸ್ಟೇಡಿಯಂನಲ್ಲಿ ನಡೆದಿದ್ದ ಭಾರತ-ಆಸ್ಟ್ರೇಲಿಯಾ ಮೂರನೇ ಟೆಸ್ಟ್ ಪಂದ್ಯದ ವೇಳೆ ಭಾರತೀಯ ಆಟಗಾರರನ್ನು ಪ್ರೇಕ್ಷಕರ ಸಾಲಿನಲ್ಲಿದ್ದ ಆಸ್ಟ್ರೇಲಿಯನ್ ಅಭಿಮಾನಿಗಳು ಜನಾಂಗೀಯವಾಗಿ ನಿಂದಿಸಿದ್ದರು. ಜಸ್‌ಪ್ರೀತ್ ಬೂಮ್ರಾ ಮತ್ತು ಮೊಹಮ್ಮದ್ ಸಿರಾಜ್‌ ಅವರನ್ನು ಗ್ರಬ್ (ಗೊಬ್ಬರ ಹುಳು) ಎಂದು ಕರೆದಿದ್ದರು.

ಆಸ್ಟ್ರೇಲಿಯನ್ ಅಭಿಮಾನಿಗಳ ಕಿಡಿಗೇಡಿತನದ ಬಗ್ಗೆ ದೂರಿತ್ತಾಗ ಕೆಲವರು ಹಾಗೇನಿಲ್ಲ, ಅಭಿಮಾನಿಗಳು ನಿಂದಿಸಿದ್ದೇನೂ ನಡೆದಿಲ್ಲ ಎಂದು ಸಮರ್ಥಿಸಿಕೊಂಡಿದ್ದರು. ಆದರೂ ಒತ್ತಾಯದ ಮೇರೆ ಸಿಡ್ನಿ ಮೈದಾನದಿಂದ 6 ಮಂದಿಯನ್ನು ಹೊರಗೆ ಕಳುಹಿಸಲಾಗಿತ್ತು. ಆದರೆ ಅದಾಗಿ ಒಂದು ವಾರದ ಬಳಿಕ ಮತ್ತದೇ ಕಿಡಿಗೇಡಿತನ ಮುಂದುವರೆದಿದೆ.

4ನೇ ಟೆಸ್ಟ್‌ ಪಂದ್ಯ ನಡೆಯುತ್ತಿರುವ ಬ್ರಿಸ್ಬೇನ್ ಸ್ಟೇಡಿಯಂನಲ್ಲೂ ಮೊಹಮ್ಮದ್ ಸಿರಾಜ್‌ ಅವರನ್ನು ಗುರಿಯಾಗಿಸಿ ಆಸ್ಟ್ರೇಲಿಯನ್ ಅಭಿಮಾನಿಗಳು 'ಬ್ಲಡಿ ಗ್ರಬ್' ಎಂದು ನಿಂದಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಓಡಾಡುತ್ತಿದೆ. ಆಸ್ಟ್ರೇಲಿಯಾ ಅಭಿಮಾನಿಗಳ ದುರ್ವರ್ತನೆಗೆ ಈ ವಿಡಿಯೋ ಸಾಕ್ಷಿ ಹೇಳುತ್ತಿದೆ.

Story first published: Saturday, January 16, 2021, 20:21 [IST]
Other articles published on Jan 16, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+