For Quick Alerts
ALLOW NOTIFICATIONS  
For Daily Alerts
 

2023ರ ವಿಶ್ವಕಪ್‌ನಲ್ಲಿ ಈತನೇ ಭಾರತದ 'ಬ್ರಹ್ಮಾಸ್ತ್ರ'; ಮೊಹಮ್ಮದ್ ಕೈಫ್

2023ರ ಏಷ್ಯಾ ಕಪ್ ಗೆಲುವು ತವರಿನಲ್ಲೇ ನಡೆಯುವ 2023ರ ಏಕದಿನ ವಿಶ್ವಕಪ್‌ಗೆ ಮುಂಚಿತವಾಗಿ ಭಾರತ ಕ್ರಿಕೆಟ್ ತಂಡಕ್ಕೆ ದೊಡ್ಡ ಆತ್ಮವಿಶ್ವಾಸ ತಂದುಕೊಟ್ಟಿದೆ.

ರೋಹಿತ್ ಶರ್ಮಾ ನಾಯಕತ್ವದ ಟೀಮ್ ಇಂಡಿಯಾ ಸೆಪ್ಟೆಂಬರ್ 17ರ ಭಾನುವಾರದಂದು ನಡೆದ 2023ರ ಏಷ್ಯಾ ಕಪ್ ಫೈನಲ್‌ನಲ್ಲಿ ಶ್ರೀಲಂಕಾ ತಂಡವನ್ನು ಸೋಲಿಸಿ 8ನೇ ಬಾರಿಗೆ ಟ್ರೋಫಿ ಎತ್ತಿ ಹಿಡಿಯಿತು.

ಇದೇ ವೇಳೆ ಭಾರತದ ಮಾಜಿ ಕ್ರಿಕೆಟಿಗ ಮೊಹಮ್ಮದ್ ಕೈಫ್ ಅವರು ವೇಗಿ ಮೊಹಮ್ಮದ್ ಸಿರಾಜ್ ಅವರನ್ನು ಹಾಡಿಹೊಗಳಿದ್ದಾರೆ. ಮುಂಬರುವ 2023ರ ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್‌ನಲ್ಲಿ ಭಾರತದ 'ಬ್ರಹ್ಮಾಸ್ತ್ರ' ಆಗಲಿದ್ದಾರೆ ಎಂದು ಭವಿಷ್ಯ ನುಡಿದಿದ್ದಾರೆ.

mohammed-siraj-will-be-indias-brahmastra

ಕೊಲಂಬೊದ ಆರ್. ಪ್ರೇಮದಾಸ ಸ್ಟೇಡಿಯಂನಲ್ಲಿ ಶ್ರೀಲಂಕಾ ತಂಡವನ್ನು ಕೇವಲ 50 ರನ್‌ಗಳಿಗೆ ಭಾರತದ ಬೌಲಿಂಗ್ ವಿಭಾಗ ಕಟ್ಟಿಹಾಕಿತು. ಈ ಮೂಲಕ ಮೊಹಮ್ಮದ್ ಸಿರಾಜ್ ಏಷ್ಯಾ ಕಪ್‌ನಲ್ಲಿ ಭಾರತದ ಪರ ಅತ್ಯುತ್ತಮ ಅಂಕಿಅಂಶಗಳನ್ನು ದಾಖಲಿಸಿದರು.

ಮೊಹಮ್ಮದ್ ಕೈಫ್ ಅವರು ಸಾಮಾಜಿಕ ಮಾಧ್ಯಮ ಎಕ್ಸ್ (ಟ್ವಿಟ್ಟರ್‌)ನಲ್ಲಿ, ಮೊಹಮ್ಮದ್ ಸಿರಾಜ್ ಅವರು ಉತ್ತಮ ಕೌಶಲ್ಯ ಮತ್ತು ದೊಡ್ಡ ಧೈರ್ಯವನ್ನು ಹೊಂದಿದ್ದಾರೆ. ಆತ ವಿಶ್ವಕಪ್‌ನಲ್ಲಿ ಭಾರತದ ಬ್ರಹ್ಮಾಸ್ತ್ರ ಎಂದು ಕರೆದಿದ್ದಾರೆ. ಶ್ರೀಲಂಕಾ ವಿರುದ್ಧ ಸಿರಾಜ್ ಏಳು ಓವರ್‌ಗಳಲ್ಲಿ ಕೇವಲ 21 ರನ್ ನೀಡಿ 6 ವಿಕೆಟ್ ಕಬಳಿಸಿದರು.

"ಮೊಹಮ್ಮದ್ ಸಿರಾಜ್ ಉತ್ತಮ ಕೌಶಲ್ಯ ಮತ್ತು ಬ್ಯಾಟರ್‌ನನ್ನು ಎಡ್ಜ್ ಮಾಡಲು ಪ್ರೇರೇಪಿಸುತ್ತಾರೆ. ಫ್ಲಾಟ್ ಪಿಚ್‌ನಲ್ಲಿ ಸ್ಟಂಪ್ ಹೊಡೆಯಲು ದೊಡ್ಡ ಧೈರ್ಯ ಹೊಂದಿದ್ದಾರೆ. ತವರಿನಲ್ಲಿ ನಡೆಯಲಿರುವ ವಿಶ್ವಕಪ್‌ ಪಂದ್ಯಾವಳಿಯಲ್ಲಿ ಮೊಹಮ್ಮದ್ ಸಿರಾಜ್ ಭಾರತದ ಬ್ರಹ್ಮಾಸ್ತ್ರವಾಗಲಿದ್ದಾರೆ," ಎಂದು ಮಾಜಿ ಕ್ರಿಕೆಟಿಗ ಮೊಹಮ್ಮದ್ ಕೈಫ್ ಪೋಸ್ಟ್ ಮಾಡಿದ್ದಾರೆ.

ಮೊದಲ ಓವರ್‌ನಲ್ಲಿಯೇ ಶ್ರೀಲಂಕಾದ ಆರಂಭಿಕ ಆಟಗಾರ ಕುಸಾಲ್ ಪೆರೆರಾ ಅವರನ್ನು ಜಸ್ಪ್ರೀತ್ ಬುಮ್ರಾ ಪೆವಿಲಿಯನ್‌ಗೆ ಕಳುಹಿಸಿದ ನಂತರ, ಮೊಹಮ್ಮದ್ ಸಿರಾಜ್ ಅದ್ಭುತ ಮೇಡನ್ ಓವರ್‌ನೊಂದಿಗೆ ಪ್ರಾರಂಭಿಸಿದರು.

ಆ ಬಳಿಕ, ಪಂದ್ಯಾವಳಿಯ ಇತಿಹಾಸದಲ್ಲಿ ಅತ್ಯುತ್ತಮ ಓವರ್‌ಗಳಲ್ಲಿ ಒಂದನ್ನು ನಿರ್ಮಿಸಿದರು. ಶ್ರೀಲಂಕಾದ ಬ್ಯಾಟಿಂಗ್ ಕ್ರಮಾಂಕವನ್ನು ನಾಶಮಾಡಲು ಒಂದೇ ಓವರ್‌ನಲ್ಲಿ ನಾಲ್ಕು ವಿಕೆಟ್‌ ಕಿತ್ತರು.

ಬ್ಯಾಕ್‌ವರ್ಡ್ ಪಾಯಿಂಟ್‌ನಲ್ಲಿ ರವೀಂದ್ರ ಜಡೇಜಾ ಅದ್ಭುತ ಕ್ಯಾಚ್ ಪಡೆಯುವ ಮೂಲಕ ಮೊಹಮ್ಮದ್ ಸಿರಾಜ್ ಮೊದಲು ಆರಂಭಿಕ ಆಟಗಾರ ಪಾಥುಮ್ ನಿಸ್ಸಾಂಕಾ ಅವರನ್ನು ಹೊರಗಟ್ಟಿದರು. ನಂತರ ಅವರು ತಮ್ಮ ಓವರ್‌ನ ಮೂರನೇ ಎಸೆತದಲ್ಲಿ ಫಾರ್ಮ್‌ನಲ್ಲಿರುವ ಸದೀರ ಸಮರವಿಕ್ರಮ ಎಲ್‌ಬಿಡಬ್ಲ್ಯೂ ಬಲೆಗೆ ಬೀಳಿಸಿದರು.

mohammed-siraj-will-be-indias-brahmastra

ಮೊಹಮ್ಮದ್ ಸಿರಾಜ್ ಅವರ ಮುಂದಿನ ಎಸೆತದಲ್ಲಿ ಚರಿತ್ ಅಸಲಂಕಾ ಅವರು ನೀಡಿದ ಕ್ಯಾಚ್ ಅನ್ನು ಪಡೆಯುವಲ್ಲಿ ಇಶಾನ್ ಕಿಶನ್ ಯಾವುದೇ ತಪ್ಪು ಮಾಡಲಿಲ್ಲ.

ಓವರ್‌ನ ಐದನೇ ಎಸೆತದಲ್ಲಿ ಬೌಂಡರಿಗೆ ಹೊಡೆದ ನಂತರ, ಕೊನೆಯ ಎಸೆತದಲ್ಲಿ ಧನಂಜಯ ಡಿ ಸಿಲ್ವಾ ಅವರ ವಿಕೆಟ್ ಪಡೆಯುವ ಮೂಲಕ ಶ್ರೀಲಂಕಾವನ್ನು 12 ರನ್‌ಗೆ 5 ವಿಕೆಟ್‌ ಕಳೆದುಕೊಳ್ಳುವಂತೆ ಮಾಡಿದರು.

ಇನ್ನು ಇನ್ನಿಂಗ್ಸ್‌ನ ಐದನೇ ಓವರ್‌ನಲ್ಲಿ ಶ್ರೀಲಂಕಾ ನಾಯಕ ದಸುನ್ ಶನಕ ಅವರಿಗೆ ಪೆವಿಲಿಯನ್ ದಾರಿ ತೋರಿಸಿದರು. ಏಕದಿನ ಪಂದ್ಯಗಳಲ್ಲಿ ತಮ್ಮ ಚೊಚ್ಚಲ ಐದು ವಿಕೆಟ್ ಸಾಧನೆಯನ್ನು ಪೂರೈಸಿದರು.

ಮೊಹಮ್ಮದ್ ಸಿರಾಜ್ ನಂತರ ಕುಸಾಲ್ ಮೆಂಡಿಸ್ ಅವರನ್ನು ದಿನದ ಆರನೇ ವಿಕೆಟ್ ತೆಗೆದುಕೊಂಡರು. ನಂತರ ಹಾರ್ದಿಕ್ ಪಾಂಡ್ಯ ದಾಳಿಗಿಳಿದ ನಂತರ ಶ್ರೀಲಂಕಾ ಕೇವಲ 50 ರನ್‌ಗಳಿಗೆ ಆಲೌಟ್ ಆಯಿತು.

Story first published: Monday, September 18, 2023, 17:47 [IST]
Other articles published on Sep 18, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+