Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IPL MVP: ತವರಿನ ತಂಡಕ್ಕೆ ಖೆಡ್ಡಾ ತೋಡಿದ ಮೊಹಮ್ಮದ್ ಸಿರಾಜ್

ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ಭಾನುವಾರ ನಡೆದ ಐಪಿಎಲ್ 2025 ರ 19ನೇ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಗುಜರಾತ್ ಟೈಟಾನ್ಸ್ ಏಳು ವಿಕೆಟ್‌ಗಳಿಂದ ಸುಲಭವಾಗಿ ಸೋಲಿಸಿತು. ಸನ್‌ರೈಸರ್ಸ್ ಹೈದರಾಬಾದ್ ನೀಡಿದ 153 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಜಿಟಿ, ಕೇವಲ 16.4 ಓವರ್‌ಗಳಲ್ಲಿ ಪಂದ್ಯವನ್ನು ಗೆದ್ದು ಬೀಗಿತು. ನಾಯಕ ಶುಭಮನ್ ಗಿಲ್ 43 ಎಸೆತಗಳಲ್ಲಿ ಅಜೇಯ 61 ರನ್ ಗಳಿಸುವ ಮೂಲಕ ತಂಡವನ್ನು ಗೆಲುವಿನ ಕಡೆ ಮುನ್ನಡೆಸಿದರು.

ಗುಜರಾತ್ ಟೈಟಾನ್ಸ್ ತಂಡವು ಕಳಪೆ ಆರಂಭವನ್ನು ಕಂಡಿತು. ಗುಜರಾತ್ ತಂಡದ ಮೂರನೇ ಓವರ್‌ನಲ್ಲಿ ಮೊಹಮ್ಮದ್ ಶಮಿ ಕೇವಲ 5 ರನ್‌ಗಳಿಸಿದ ಸಾಯಿ ಸುದರ್ಶನ್ ಅವರನ್ನು ಔಟ್ ಮಾಡಿದರು. ನಂತರ ಎಸ್‌ಆರ್‌ಹೆಚ್ ನಾಯಕ ಪ್ಯಾಟ್ ಕಮ್ಮಿನ್ಸ್ ವೇಗವಾಗಿ ಚೆಂಡನ್ನು ಎಸೆದು ಮುಂದಿನ ಓವರ್‌ನಲ್ಲಿ ಜೋಸ್ ಬಟ್ಲರ್ ಅವರನ್ನು ಶೂನ್ಯಕ್ಕೆ ಔಟ್ ಮಾಡಿದರು. ಇದು ಗುಜರಾತ್ ತಂಡವನ್ನು ಆರಂಭಿಕ ಒತ್ತಡಕ್ಕೆ ಸಿಲುಸಿತು.

Mohammed Siraj win MVP award for his superb bowling in Sunrisers Hyderabad vs Gujarat Titans the match

ಆರಂಭದಲ್ಲಿ ಎರಡು ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ ಗುಜರಾತ್ ಟೈಟಾನ್ಸ್ ತಂಡಕ್ಕೆ ಶುಭಮನ್ ಗಿಲ್ ಮತ್ತು ವಾಷಿಂಗ್ಟನ್ ಸುಂದರ್ ಉತ್ತಮ ಜೊತೆಯಾಟ ಆಡುವ ಮೂಲಕ ನೆರವಾದರು. ಸುಂದರ್ 49 ರನ್ ಗಳಿಸಿ ಬಿರುಸಿನ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಆದರೆ ಅವರಿಂದ ಅರ್ಧಶತಕ ಪೂರೈಸಲು ಸಾಧ್ಯವಾಗಲಿಲ್ಲ.

ಸುಂದರ್ ಔಟಾದ ನಂತರ, ಶೆರ್ಫೇನ್ ರುದರ್ಫೋರ್ಡ್ ಅವರನ್ನು ಇಂಪ್ಯಾಕ್ಟ್ ಪ್ಲೇಯರ್ ಆಗಿ ಕಳುಹಿಸಲಾಯಿತು. ಅವರು ಕೇವಲ 16 ಎಸೆತಗಳಲ್ಲಿ ಔಟಾಗದೆ 35 ರನ್ ಗಳಿಸಿ, ಗಿಲ್ ಅವರೊಂದಿಗೆ ಅದ್ಭುತ ಜೊತೆಯಾಟ ಆಡಿದರು. ಈ ಮೂಲಕ ಜಿಟಿ ತಂಡವನ್ನು 20 ಎಸೆತಗಳು ಬಾಕಿ ಇರುವಾಗ ಗೆಲುವಿಗೆ ದಡ ಸೇರಿಸಿದರು.

ಸನ್‌ರೈಸರ್ಸ್ ಹೈದರಾಬಾದ್ ಮತ್ತು ಗುಜರಾತ್ ಟೈಟಾನ್ಸ್ ನಡುವಿನ ಪಂದ್ಯದಲ್ಲಿ ಅತ್ಯಂತ ಮೌಲ್ಯಯುತ ಆಟಗಾರ ಎಂಬ ಹೆಗ್ಗಳಿಕೆ ವೇಗದ ಬೌಲರ್ ಮೊಹಮ್ಮದ್ ಸಿರಾಜ್ ಪಾತ್ರರಾದರು. ಅವರು ಆಟದ ಸಂಪೂರ್ಣ ಮೈಕಟ್ಟು ಬದಲಿಸಿ ತಮ್ಮ ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿದರು. ಇದಕ್ಕಾಗಿ ಅವರು ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಪಡೆದರು.

ಮೊಹಮ್ಮದ್ ಸಿರಾಜ್, ಅಭಿಷೇಕ್ ಶರ್ಮಾ ಮತ್ತು ಟ್ರಾವಿಸ್ ಹೆಡ್ ಅವರ ಪ್ರಮುಖ ವಿಕೆಟ್‌ಗಳನ್ನು ಆರಂಭದಲ್ಲಿಯೇ ಪಡೆದರು. ನಂತರ ಇನ್ನಿಂಗ್ಸ್‌ನಲ್ಲಿ ಅನಿಕೇತ್ ವರ್ಮಾ ಮತ್ತು ಸಿಮರ್‌ಜೀತ್ ಸಿಂಗ್ ಅವರನ್ನು ಔಟ್ ಮಾಡಿದರು. ಅಂತಿಮವಾಗಿ, ಅವರು 4 ಓವರ್‍‌ಗಳಲ್ಲಿ 17 ರನ್ ನೀಡಿ 4 ವಿಕೆಟ್ ಕಬಳಿಸಿದರು. ಇದು ಅವರಿಗೆ 100 ಐಪಿಎಲ್ ವಿಕೆಟ್‌ಗಳನ್ನು ಪೂರೈಸಲು ನೆರವಾಯಿತು. ಈ ಪಂದ್ಯದಲ್ಲಿ ಅವರು 14 ಡಾಟ್ ಬಾಲ್‌ಗಳನ್ನು ಸಹ ಎಸೆದು ಗಮನ ಸೆಳೆದರು.

Story first published: Monday, April 7, 2025, 0:48 [IST]
Other articles published on Apr 7, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+