Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Mohammed Siraj: ಸಿರಾಜ್‌ ಮುಕುಟಕ್ಕೆ ಐಸಿಸಿ ಗರಿ

ದುಬೈನಲ್ಲಿ ಸದ್ಯ ಏಷ್ಯಾ ಕಪ್‌ ಟಿ20 ನಡೆಯುತ್ತಿದೆ. ಈ ಟೂರ್ನಿಯಲ್ಲಿ ಟೀಮ್ ಇಂಡಿಯಾ ಸ್ಥಿರ ಬ್ಯಾಟಿಂಗ್ ಪ್ರದರ್ಶನ ನೀಡಿ ಎಲ್ಲರ ಗಮನ ಸೆಳೆಯುತ್ತಿದೆ. ಏಷ್ಯಾ ಕಪ್‌ ಟಿ20 ಟೂರ್ನಿಯಲ್ಲಿ ಆಡುವ ಬಳಗದಲ್ಲಿ ಸ್ಥಾನ ಪಡೆಯದೇ ಇದ್ದರೂ ಸಹ ಸ್ಟಾರ್ ಬೌಲರ್‌ ಮೊಹಮ್ಮದ್‌ ಸಿರಾಜ್‌ ಸದ್ಯ ಸದ್ದು ಮಾಡುತ್ತಿದ್ದಾರೆ. ಇಂಗ್ಲೆಂಡ್‌ನಲ್ಲಿ ಇವರು ನೀಡಿದ ಅಮೋಘ ಪ್ರದರ್ಶನಕ್ಕೆ ಅವರಿಗೆ ಐಸಿಸಿ ತಿಂಗಳ ಆಟಗಾರ ಪ್ರಶಸ್ತಿ ಲಭಿಸಿದೆ.

ಇಂಗ್ಲೆಂಡ್‌ ವಿರುದ್ಧದ ಆಂಡರ್ಸನ್‌, ತೆಂಡೂಲ್ಕರ್ ಸರಣಿಯಲ್ಲಿ ಎಲ್ಲ ಐದು ಪಂದ್ಯಗಳನ್ನು ಆಡಿದ ಸಿರಾಜ್‌ ಎಲ್ಲರ ಗಮನ ಸೆಳೆದಿದ್ದರು. ಇವರು ಓವಲ್‌ನಲ್ಲಿ ನಡೆದ ಕೊನೆಯ ಪಂದ್ಯದಲ್ಲಿ ಬಿಗುವಿನ ದಾಳಿ ನಡೆಸಿ ಎಲ್ಲರ ಚಿತ್ತ ಕದ್ದಿದ್ದರು. ಅಲ್ಲದೆ ಐದನೇ ಟೆಸ್ಟ್‌ನಲ್ಲಿ 9 ವಿಕೆಟ್‌ ಪಡೆದು ಅಬ್ಬರಿಸಿದ್ದರು. ಇವರ ಅಮೋಘ ದಾಳಿಗೆ ಐಸಿಸಿ ಗೌರವ ನೀಡಿದೆ. ಇವರು ನ್ಯೂಜಿಲೆಂಡ್‌ನ ಮ್ಯಾಟ್ ಹೆನ್ರಿ ಮತ್ತು ವೆಸ್ಟ್ ಇಂಡೀಸ್‌ನ ಜೇಡನ್ ಸೀಲ್ಸ್ ಅವರನ್ನು ಹಿಂದಿಕ್ಕಿ ಪ್ರಶಸ್ತಿ ಗೆದ್ದಿದ್ದಾರೆ. ಕೊನೆಯ ಟೆಸ್ಟ್‌ ಪಂದ್ಯವನ್ನುಗೆಲ್ಲುವ ಮೂಲಕ ಭಾರತ ಐದು ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಡ್ರಾ ಸಾಧಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿತ್ತು.

Mohammed Siraj wins ICC Player of the Month after stellar performance in England

ಐಸಿಸಿ ತಿಂಗಳ ಆಟಗಾರ ಪ್ರಶಸ್ತಿಯನ್ನು ಗೆದ್ದ ಬಳಿಕ ಮೊಹಮ್ಮದ್ ಸಿರಾಜ್ ಸಂತೋಷವನ್ನು ವ್ಯಕ್ತ ಪಡಿಸಿದ್ದಾರೆ. ಈ ಪ್ರಶಸ್ತಿ ಸಿಕ್ಕಿರುವುದು ನಿಜಕ್ಕೂ ಸಂತಸ ತಂದಿದೆ. ಈ ಬಾರಿಯ ಇಂಗ್ಲೆಂಡ್ ಪ್ರವಾಸ ಸ್ಮರಣೀಯವಾಗಿತ್ತು. ಅಲ್ಲದೆ ವೃತ್ತಿಜೀವನದ ಕಠೀಣ ಸ್ಪರ್ಧೆಯಾಗಿತ್ತು. ಅಲ್ಲದೆ ತಂಡಕ್ಕೆ ಪ್ರಮುಖ ಸಮಯದಲ್ಲಿ ಕೊಡುಗೆ ನೀಡಲು ಸಾಧ್ಯವಾಯಿತು. ಇಂಗ್ಲೆಂಡ್ ತಂಡದ ಬಲವಾದ ಬ್ಯಾಟಿಂಗ್ ಲೈನ್‌ ಅಪ್‌ಗೆ ಸವಾಲು ಎಸೆಯುವುದು ಸವಾಲಿನದ್ದಾಗಿತ್ತು ಎಂದು ಸಿರಾಜ್‌ ತಿಳಿಸಿದ್ದಾರೆ. ಈ ಪ್ರಶಸ್ತಿ ಪಡೆಯುವಲ್ಲಿ ನನ್ನ ತಂಡದ ಸಹಾಯಕ ಸಿಬ್ಬಂದಿ ಹಾಗೂ ಸದಸ್ಯರು ನನ್ನಷ್ಟೆ ಶ್ರಮವನ್ನು ಪಟ್ಟಿದ್ದಾರೆ. ಸದಸ್ಯರ ನಿರಂತರ ಪ್ರೋತ್ಸಾಹ ಹಾಗೂ ನಂಬಿಕೆ ಸ್ಫೂರ್ತಿ ನೀಡಿತು. ಅಲ್ಲದೆ ಭವಿಷ್ಯದಲ್ಲಿ ತಂಡದ ಪರ ಸ್ಥಿರ ಪ್ರದರ್ಶನ ನೀಡುವುದಾಗಿ ಸಿರಾಜ್‌ ತಿಳಿಸಿದ್ದಾರೆ.

ಓರ್ಲಾಗೆ ಗರಿ

ಮಹಿಳಾ ವಿಭಾಗದಲ್ಲಿ ಐರ್ಲೆಂಡ್ ಆಲ್‌ರೌಂಡರ್ ಓರ್ಲಾ ಪ್ರೆಂಡರ್‌ಗ್ಯಾಸ್ಟ್ ಐಸಿಸಿ ಪ್ರತಿಷ್ಠಿತ ಪ್ರಶಸ್ತಿ ಗೆದ್ದರು. ಇವರು ಪಾಕ್‌ ವಿರುದ್ಧ ತವರಿನಲ್ಲಿ ನಡೆದ ಸರಣಿಯಲ್ಲಿ 144 ರನ್‌ ಸಿಡಿಸಿ 4 ವಿಕೆಟ್‌ ಪಡೆದರು. ಇವರು ಐಸಿಸಿ ಮಹಿಳಾ ಟಿ20 ವಿಶ್ವಕಪ್ ಯುರೋಪ್ ಅರ್ಹತಾ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿದರು, ಆಗಸ್ಟ್ ತಿಂಗಳಲ್ಲಿ ಒಟ್ಟು 244 ರನ್ ಗಳಿಸಿದರು ಮತ್ತು 7 ವಿಕೆಟ್‌ಗಳನ್ನು ಪಡೆದಿದ್ದಾರೆ. ಟೀಮ್ ಇಂಡಿಯಾದ ಪರ ಮೊಹಮ್ಮದ್ ಸಿರಾಜ್‌ ಇಂಗ್ಲೆಂಡ್‌ ನಲ್ಲಿ ಆಡಿದ 5 ಟೆಸ್ಟ್ ಪಂದ್ಯಗಳಲ್ಲಿ 23 ವಿಕೆಟ್‌ ಕಬಳಿಸಿದ್ದಾರೆ. ಈ ಮೂಲಕ ಟೆಸ್ಟ್‌ ಸರಣಿಯಲ್ಲಿ ಅತಿ ಹೆಚ್ಚು ವಿಕೆಟ್‌ ಪಡೆದ ಸಾಧನೆ ಮಾಡಿದ್ದಾರೆ.

Story first published: Monday, September 15, 2025, 17:25 [IST]
Other articles published on Sep 15, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+