Mohammed Siraj: ಅಬ್ಬಾ 181.6 ಕಿ.ಮೀ. ವೇಗದಲ್ಲಿ ಸಿರಾಜ್ ಬೌಲಿಂಗ್!
ಬಾರ್ಡರ್ ಗವಾಸ್ಕರ್ ಸರಣಿಯ ಎರಡನೇ ಟೆಸ್ಟ್ ಪಂದ್ಯ ಆಡಿಲೇಡ್‌ನಲ್ಲಿ ನಡೆಯುತ್ತಿದೆ. ಈ ಟೆಸ್ಟ್‌ನಲ್ಲಿ ಟೀಮ್ ಇಂಡಿಯಾ ಮೊದಲು ಬ್ಯಾಟ್ ಮಾಡಿ 180 ರನ್‌ಗಳಿಗೆ ಆಲೌಟ್ ಆಗಿದೆ. ಮೊದಲ ಇನಿಂಗ್ಸ್ ಆರಂಭಿಸಿರುವ ಆಸೀಸ್ ಉತ್ತಮ ಆರಂಭವನ್ನು ಕಂಡಿದ್ದು, ಒಂದು ವಿಕೆಟ್ ನಷ್ಟಕ್ಕೆ 86 ರನ್ ಗಳಿಸಿದೆ. ಇನ್ನು ಆತಿಥೇಯ ತಂಡ 94 ರನ್‌ಗಳ ಹಿನ್ನಡೆಯನ್ನು ಅನುಭವಿಸುತ್ತಿದೆ. ಟೀಮ್ ಇಂಡಿಯಾದ ಸ್ಟಾರ್ ವೇಗದ ಬೌಲರ್ ಮೊಹಮ್ಮದ್ ಸಿರಾಜ್ ಈ ವೇಳೆ ಭಾರೀ ಚರ್ಚೆ ಆಗುತ್ತಿದ್ದಾರೆ.
ಸೀಮಿತ ಓವರ್‌ಗಳೇ ಇರಲಿ ಅಥವಾ ಟೆಸ್ಟ್ ಫಾರ್ಮೆಟ್ ಇರಲಿ ಸಿರಾಜ್ ಟೀಮ್ ಇಂಡಿಯಾದ ಸ್ಟಾರ್ ಬೌಲರ್. ಎದುರಾಳಿಗಳಿಗೆ ತಮ್ಮ ಪರ್ಫೆಕ್ಟ್ ಲೈನ್ ಹಾಗೂ ಲೆಂಥ್ ಮೂಲಕ ಕಾಟ ನೀಡುವ ಆಟಗಾರ. ಆಸ್ಟ್ರೇಲಿಯಾ ವಿರುದ್ಧ ಮೊದಲ ಟೆಸ್ಟ್‌ನಲ್ಲೂ ಸಿರಾಜ್ ಇದೇ ಕೆಲಸವನ್ನು ಮಾಡಿ ಸೈ ಎನಿಸಿಕೊಂಡಿದ್ದಾರೆ. ಈಗ ಎರಡನೇ ಟೆಸ್ಟ್‌ನಲ್ಲೂ ವಿಕೆಟ್ ಪಡೆಯಲು ಬೆವರು ಹರಿಸುತ್ತಿದ್ದಾರೆ. ಏನಪ್ಪಾ ಸಿರಾಜ್ ವಿಕೆಟ್ ಪಡೆಯದೇ ಇದ್ದರೂ ಹೇಗೆ ಸುದ್ದಿಯಲ್ಲಿದ್ದಾರೆ ಎಂಬ ಪ್ರಶ್ನೆ ಮೂಡುವುದು ಸಹಜ.

ಸಿರಾಜ್ ಪವರ್ ಫುಲ್ ಬೌಲಿಂಗ್
ಸಿರಾಜ್ ಅವರು ಬೌಲಿಂಗ್ ಮೂಲಕವೇ ಸುದ್ದಿಯಲ್ಲಿದ್ದಾರೆ. ಅದು ಸಹ ಗಂಟೆಗೆ 181.6 ಕಿಮೀ ವೇಗದ ಬೌಲಿಂಗ್ ನಡೆಸಿ ಚರ್ಚೆಯ ವಸ್ತುವಾಗಿದ್ದಾರೆ. ಏನಪ್ಪಾ ಸಿರಾಜ್ ಪಾಕಿಸ್ತಾನ ಸ್ಟಾರ್ ವೇಗಿ ಶೋಯೆಬ್ ಅಖ್ತರ್ ಅವರ 161.3 ಕಿಲೋ ಮೀಟರ್ ವೇಗದ ಎಸೆತದ ದಾಖಲೆಯನ್ನು ಅಳಿಸಿರಿರಾ ಎಂಬ ಭಾವನೆ ಎಲ್ಲರೂ ಮೂಡದೇ ಇರದು. ಈ ಅಂಕಿ ಅಂಶಗಳನ್ನು ನೋಡಿದಾಗ ಹೌದು ಎಂಬ ಉತ್ತರವೇ ಬರುತ್ತದೆ. ಆದರೆ ಆಗಿದ್ದೇ ಬೇರೆ.
ಆಗಿದ್ದೇನು?
ಆಸ್ಟ್ರೇಲಿಯಾ ಬ್ಯಾಟಿಂಗ್ ಮಾಡುವ ಇನಿಂಗ್ಸ್‌ನ 25ನೇ ಓವರ್‌ನ ಕೊನೆಯ ಎಸೆತದಲ್ಲಿ ದೃಶ್ಯ ಎಲ್ಲರ ಗಮನ ಸೆಳೆದಿದೆ. ಇದೇ ಓವರ್‌ನಲ್ಲಿ ಸಿರಾಜ್ ಎಸೆದ ಒಂದು ಎಸೆತ ಗಂಟೆಗೆ 181.6 ಕಿ ಮೀ ವೇಗದಿಂದ ಕೂಡಿದೆ ಎಂದು ಸ್ಪೀಡೋಮೀಟರ್ ತೋರಿಸಿದೆ. ಅಲ್ಲಿಂದಲೇ ಎಲ್ಲರ ಗಮನ ಇದರ ಮೇಲೆ ಬೀಳುವಂತೆ ಆಗಿದೆ. ಆದರೆ ಸ್ಪೀಡೋಮೀಟರ್‌ನಲ್ಲಿನ ದೋಷದಿಂದಾಗಿ ಈ ಅಚಾತುರ್ಯ ನಡೆದಿದೆ. ಆದರೆ ಈ ದೃಶ್ಯಗಳು ಹಾಗೂ ಪೋಟೋಗಳು ಸಾಮಾಜಿಕ ತಾಣದಲ್ಲಿ ಸಖತ್ ವೈರಲ್ ಆಗುತ್ತಿವೆ.

ಇದೇ ಓವರ್‌ನಲ್ಲಿ ಸಿರಾಜ್ ಬೌಲ್ ಮಾಡಲು ಮುಂದಾದಾಗಿ, ಅಂಪೈರ್ ದಾಟಿ ಕ್ರೀಸ್ ಹತ್ತಿರ ನೆಗೆಯುತ್ತಿದ್ದಾಗ ಮಾರ್ನಸ್ ಲಂಬುಶೇನ್ ಅವರನ್ನು ತಡೆದರು. ಈ ವೇಳೆ ಸಿರಾಜ್ ಕೋಪ ಮಾಡಿಕೊಂಡು ಚೆಂಡನ್ನು ಅವರತ್ತ ಎಸೆದರು. ಆದರೆ ಸೈಡ್ ಸ್ಕ್ರೀನ್ ಹಿಂಬಾಗದಲ್ಲಿ ಒಬ್ಬ ವ್ಯಕ್ತಿ ಏನೋ ವಸ್ತುವನ್ನು ತೆಗೆದುಕೊಂಡು ಹೊರಟಿದ್ದನು ಇದರಿಂದ ಮಾರ್ನಸ್‌ಗೆ ಬ್ಯಾಟಿಂಗ್ ಮಾಡಲು ತೊಂದರೆ ಆಯಿತು, ಹೀಗಾಗಿ ಅವರು ಬೌಲ್ ಎಸೆಯದಂತೆ ತಡೆಯಲು ಸೂಚನೆ ನೀಡಿದರು. ಈ ವೇಳೆ ಮೈದಾನದಲ್ಲಿ ವಾತಾವರಣವು ಬಿಸಿಯಾಯಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications