ಮೊಹಮ್ಮದ್ ಶಮಿ ಪತ್ನಿ ಹಸೀನ್ ಜಹಾನ್ ಬಂಧನ, ಬಿಡುಗಡೆ

ಹೊಸದಿಲ್ಲಿ, ಏಪ್ರಿಲ್ 29: ಭಾರತ ಕ್ರಿಕೆಟ್ ತಂಡದ ವೇಗದ ಬೌಲರ್ ಮೊಹಮ್ಮದ್ ಶಮಿ ಅವರ ವಿರಕ್ತ ಪತ್ನಿ ಹಸೀನ್ ಜಹಾನ್ ಅವರನ್ನು ಉತ್ತರ ಪ್ರದೇಶದ ಅಮ್ರೊಹಾ ಪೊಲೀಸರು ಸೋಮವಾರ ಬಂಧಿಸಿದ್ದಾರೆ. ಬಳಿಕ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ.
ಕೌಟುಂಬಿಕ ಕಲಹ ಹಿನ್ನೆಲಯಲ್ಲಿ ಈಗಾಗಲೇ ಮೊಹಮ್ಮದ್ ಶಮಿ ವಿರುದ್ಧ ಕಿರಿಕುಳದ ದೂರು ದಾಖಲಿಸಿರುವ ಹಸೀನ್ ಜಹಾನ್, ಭಾನುವಾರ ಅಮ್ರೊಹಾದ ಶಾಸ್ಪುರ್ ಅಲಿ ಗ್ರಾಮದಲ್ಲಿರುವ ಶಮಿ ಅವರ ನಿವಾಸಕ್ಕೆ ತೆರಳಿ ರಾದ್ದಾಂತ ಮಾಡಿದ್ದಾರೆ. ಈ ವಿಚಾರವಾಗಿ ಅವರನ್ನು ಬಂಧಿಸಲಾಗಿತ್ತು.
ಈ ಸಂದರ್ಭದಲ್ಲಿ ಪತ್ರಕರ್ತರೊಡನೆ ಮಾತನಾಡಿರುವ ಹಸೀನ್ ಜಹಾನ್, "ನನ್ನ ಪತಿಯ ಮನೆಗೆ ಬಂದಿದ್ದೇನೆ. ಇಲ್ಲಿ ಇರಲು ಎಲ್ಲ ರೀತಿಯ ಹಕ್ಕು ನನಗಿದೆ. ಆದರೆ, ನನ್ನ ಪತಿಯ ಸೋದರರು ನನ್ನೊಂದಿಗೆ ಅನುಚಿತವಾಗಿ ವರ್ತಿಸುತ್ತಿದ್ದಾರೆ. ಪೊಲೀಸರು ಅವರನ್ನು ಬಂಧಿಸಿ ಠಾಣೆಗೆ ಕರೆದೊಯ್ಯುವ ಬದಲು ಅವರಿಗೇ ಬೆಂಬಲ ನೀಡುತ್ತಿದ್ದಾರೆ,'' ಎಂದು ಆರೋಪಿಸಿದ್ದಾರೆ.
ತಮ್ಮ ಪತಿಗೆ ಅನೈತಿಕ ಸಂಬಂಧಗಳಿದ್ದು ತಮಗೆ ಮೋಸ ಮಾಡಿದ್ದಾರೆ ಮತ್ತು ಕಿರುಕುಳ ನೀಡುತ್ತಿದ್ದಾರೆ ಎಂದು ಕೆಲ ತಿಂಗಳುಗಳ ಹಿಂದೆ ಹಸೀನ್ ಜಹಾನ್ ದೂರು ದಾಖಲಿಸಿದ್ದರು. ಆದರೆ, ಈ ಎಲ್ಲಾ ಆರೋಪಗಳನ್ನು ತಳ್ಳಿ ಹಾಕಿದ ಬಲಗೈ ವೇಗಿ ಶಮಿ, ತಮ್ಮ ವೃತ್ತಿಬದುಕಿಗೆ ತೊಡಕುಂಟುಮಾಡುವ ದುರುದ್ದೇಶದಿಂದ ಈ ಪಿತೂರಿ ಮಾಡಲಾಗಿದೆ ಎಂದು ಹೇಳಿದ್ದರು.
29 ವರ್ಷದ ವೇಗದ ಬೌಲರ್ ಸದ್ಯ ಇಂಡಿಯನ್ ಪ್ರೀಮಿಯರ್ ಲೀಗ್ ಟಿ20 ಟೂರ್ನಿಯಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಪರ ಆಡುತ್ತಿದ್ದು, 11 ಪಂದ್ಯಗಳಲ್ಲಿ 14 ವಿಕೆಟ್‌ಗಳನ್ನು ಪಡೆದಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications