Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಕೆಕೆಆರ್‌ ಅರ್ಧ ತಂಡವನ್ನು ಔಟ್ ಮಾಡಿದ ಮೊಹ್ಸಿನ್ ಖಾನ್‌

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನ 19 ನೇ ಋತುವಿನ 38 ನೇ ಪಂದ್ಯಕ್ಕೆ ಲಕ್ನೋದ ಏಕಾನಾ ಕ್ರಿಕೆಟ್ ಕ್ರೀಡಾಂಗಣ ಸಾಕ್ಷಿಯಾಯಿತು. ಈ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ (ಎಲ್‌ಎಸ್‌ಜಿ) ಹಾಗೂ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್‌) ತಂಡಗಳ ನಡುವೆ ನಡೆಯಿತು. ಈ ಪಂದ್ಯದಲ್ಲಿ ಟಾಸ್‌ ಗೆದ್ದ ಎಲ್‌ಎಸ್‌ಜಿ ನಾಯಕ ರಿಷಭ್ ಪಂತ್‌ ಮೊದಲು ಬೌಲಿಂಗ್ ಮಾಡುವ ನಿರ್ಧಾರವನ್ನು ಮಾಡಿದರು. ಇವರ ಈ ನಿರ್ಧಾರವನ್ನು ವೇಗದ ಬೌಲರ್‌ಗಳು ಸಮರ್ಥಿಸಿಕೊಂಡರು.

ಎಲ್‌ಎಸ್‌ಜಿ ತಂಡದ ಎಡಗೈ ವೇಗಿ ಮೊಹ್ಸಿನ್ ಖಾನ್ ಬಿಗುವಿನ ದಾಳಿ ನಡೆಸಿ ಗಮನ ಸೆಳೆದರು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕೆಕೆಆರ್‌ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 155 ರನ್‌ ಸೇರಿಸಿತು. ಫಿನಿಷರ್ ರೂಪದಲ್ಲಿ ಕಾಣಿಸಿಕೊಳ್ಳುವ ರಿಂಕು ಸಿಂಗ್ ಅಮೋಘ ಬ್ಯಾಟಿಂಗ್ ನಡೆಸಿದರು. ಇವರು 7 ಬೌಂಡರಿ, 5 ಸಿಕ್ಸರ್ ಸಹಾಯದಿಂದ ಅಜೇಯ 83 ರನ್‌ ಸಿಡಿಸಿದರು. ಈ ವೇಳೆ ಎಲ್‌ಎಸ್‌ಜಿ ತಂಡದ ಭರವಸೆಯ ವೇಗದ ಬೌಲರ್‌ ಮೊಹ್ಸಿನ್ ಆರ್ಭಟಿಸಿದರು.

Mohsin Khan

27 ವರ್ಷದ ಎಡಗೈ ವೇಗಿ ಮೊಹ್ಸಿನ್ ಖಾನ್‌ ಬಿಗುವಿನ ದಾಳಿ ನಡೆಸಿ ಮಿಂಚಿದರು. ಇವರು ನಾಲ್ಕು ಓವರ್‌ಗಳಲ್ಲಿ 1 ಮೇಡನ್ ಮಾಡಿ 23 ರನ್‌ ನೀಡಿ 5 ವಿಕೆಟ್‌ ಕಬಳಿಸಿದರು. ಇವರು ಟಿಮ್ ಸಿಫರ್ಟ್‌, ಕೆಕೆಆರ್ ನಾಯಕ ಅಜಿಂಕ್ಯ ರಹಾನೆ, ರೋವ್‌ಮನ್‌ ಪೊವೆಲ್‌, ಕ್ಯಾಮರೂನ್ ಗ್ರೀನ್, ಅನುಕೂಲ್ ರಾಯ್‌ ಅವರಿಗೆ ಪೆವಿಲಿಯನ್‌ ಹಾದಿ ತೋರಿಸಿದರು.

ಮೊಹ್ಸಿನ್ ಖಾನ್‌ ಐಪಿಎಲ್‌ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಪರ ಆಡುವಾಗ ಐದು ವಿಕೆಟ್‌ಗಳನ್ನು ಪಡೆದ ಮೂರನೇ ಬೌಲರ್ ಮೊಹ್ಸಿನ್ ಖಾನ್ ಆಗಿದ್ದಾರೆ. ಇವರಿಗಿಂತ ಮೊದಲು ಮಾರ್ಕ್‌ ವುಡ್, ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ಈ ಸಾಧನೆ ಮಾಡಿದ್ದರು. ಇನ್ನು 2024ರಲ್ಲಿ ಯಶ್ ಠಾಕೂರ್ ಗುಜರಾತ್ ಟೈಟಾನ್ಸ್ ವಿರುದ್ಧ 30 ರನ್‌ ನೀಡಿ 5 ವಿಕೆಟ್‌ ಪಡೆದಿದ್ದರು. ಈಗ ಈ ಲೀಸ್ಟ್‌ಗೆ ಮೊಹ್ಸಿನ್ ಖಾನ್ ಎಂಟ್ರಿ ಪಡೆದರು. ಇವರು ಇನಿಂಗ್ಸ್‌ನ 11ನೇ ಓವರ್‌ ಒಳಗೆ ತಮ್ಮ ಕೋಟಾದ 4 ಓವರ್‌ಗಳನ್ನು ಪೂರ್ಣಗೊಳಿಸಿದರು. ಈ ಹಂತದಲ್ಲಿ ಕೆಕೆಆರ್‌ 6 ವಿಕೆಟ್‌ಗೆ 73 ರನ್‌ ಸೇರಿಸಿತ್ತು.

ಮೊಹ್ಸಿನ್ ಖಾನ್ ಸಾಧನೆ

ಐಪಿಎಲ್‌ನಲ್ಲಿ ಈ ವರೆಗೆ ಮೊಹ್ಸಿನ್ ಖಾನ್ ಒಟ್ಟು 28 ಪಂದ್ಯಗಳನ್ನು ಆಡಿದ್ದು 36 ವಿಕೆಟ್‌ ಪಡೆದಿದ್ದಾರೆ. ಇವರು ಈಗಾಗಲೇ ಐಪಿಎಲ್‌ ಒಂದು ಬಾರಿ 4 ವಿಕೆಟ್‌ ಪಡೆದಿದ್ದರು. ಭಾನುವಾರ ಐದು ವಿಕೆಟ್‌ ಸಾಧನೆ ಮಾಡಿದರು.

Story first published: Sunday, April 26, 2026, 23:10 [IST]
Other articles published on Apr 26, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+