Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Mohsin Naqvi: ಜಯ್ ಶಾ ಸ್ಥಾನದ ಮೇಲೆ ಪಿಸಿಬಿ ಮುಖ್ಯಸ್ಥನ ಕಣ್ಣು

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಕಾರ್ಯದರ್ಶಿ ಜಯ್ ಶಾ ಅವಿರೋಧವಾಗಿ ಐಸಿಸಿ ಅಧ್ಯಕ್ಷರಾಗುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ. ಅವರು ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿಯ (ಐಸಿಸಿ) ಕಿರಿಯ ಅಧ್ಯಕ್ಷರಾಗಿದ್ದಾರೆ.

ಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಜಯ್ ಶಾ ಆಯ್ಕೆಯಾಗುತ್ತಿದ್ದಂತೆ ಇವರ ಉತ್ತರಾಧಿಕಾರಿ ಯಾರೆಂಬ ಚರ್ಚೆ ಬಿಸಿಸಿಐನಲ್ಲಿ ಜೋರಾಗಿದೆ. ಇನ್ನೊಂದೆಡೆ ಜಯ್ ಶಾ ಅವರಿಂದ ತೆರವಾದ ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಅಧ್ಯಕ್ಷ ಯಾರು? ಎಂಬುದು ಕೂಡ ಕುತೂಹಲ ಮೂಡಿಸಿದೆ.

Mohsin Naqvi in race to become Asian Cricket Council president

ಎಸಿಸಿ ಅಧ್ಯಕ್ಷ ಯಾರು?

ಜಯ್ ಶಾ ಐಸಿಸಿ ಅಧ್ಯಕ್ಷರಾದ ನಂತರ ಬಿಸಿಸಿಐ ಕಾರ್ಯದರ್ಶಿ ಹುದ್ದೆ ಮಾತ್ರವಲ್ಲದೆ ಎಸಿಸಿ ಅಧ್ಯಕ್ಷ ಸ್ಥಾನವನ್ನೂ ತೊರೆಯಬೇಕಾಗುತ್ತದೆ. ಪಿಟಿಐ ವರದಿಯ ಪ್ರಕಾರ, "ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಮುಖ್ಯಸ್ಥ ಮೊಹ್ಸಿನ್ ನಖ್ವಿ ಅವರು ಎಸಿಸಿ ಅಧ್ಯಕ್ಷರಾಗುವ ರೇಸ್‌ನಲ್ಲಿ ಮುಂದಿದ್ದಾರೆ. ಈ ವರ್ಷದ ಕೊನೆಯಲ್ಲಿ ಎಸಿಸಿ ಸಭೆ ಸೇರಿದಾಗ, ನಖ್ವಿ ಅವರು ಎರಡು ವರ್ಷಗಳ ಅವಧಿಗೆ ಮುಂದಿನ ಅಧ್ಯಕ್ಷರಾಗಲಿದ್ದಾರೆ.

ಬಿಸಿಸಿಐ ಕಾರ್ಯದರ್ಶಿ ಯಾರು?

ಜಯ್ ಶಾ ಅವರಿಗೆ ಬಿಸಿಸಿಐ ಕಾರ್ಯದರ್ಶಿಯಾಗಿ ಇನ್ನೂ ಒಂದು ವರ್ಷ ಅಧಿಕಾರವಧಿ ಬಾಕಿ ಉಳಿದಿದೆ. ಹೀಗಾಗಿ ಈ ಸ್ಥಾನಕ್ಕೆ ಭಾರತೀಯ ಜನತಾ ಪಕ್ಷದ (ಬಿಜೆಪಿ) ಹಿರಿಯ ನಾಯಕರಾದ ದಿವಂಗತ ಅರುಣ್ ಜೇಟ್ಲಿ ಅವರ ಪುತ್ರ ರೋಹನ್ ಜೇಟ್ಲಿ ಅವರ ಹೆಸರು ಕೇಳಿ ಬಂದಿದೆ. ಇದರೊಂದಿಗೆ ಅವರು ಬಿಸಿಸಿಐನ ಮುಂದಿನ ಕಾರ್ಯದರ್ಶಿಯಾಗುವ ಎಲ್ಲಾ ಸಾಧ್ಯತೆಗಳಿವೆ.

ರೋಹನ್ ಪ್ರಸ್ತುತ ದೆಹಲಿ ಮತ್ತು ಜಿಲ್ಲಾ ಕ್ರಿಕೆಟ್ ಸಂಸ್ಥೆಯ (ಡಿಡಿಸಿಎ) ಅಧ್ಯಕ್ಷರಾಗಿದ್ದಾರೆ. ಜಯ್ ಶಾ ಐಸಿಸಿ ಅಧ್ಯಕ್ಷರಾದ ನಂತರವೂ, ಹಾಲಿ ಅಧ್ಯಕ್ಷ ರೋಜರ್ ಬಿನ್ನಿ ಸೇರಿದಂತೆ ಇತರ ಉನ್ನತ ಬಿಸಿಸಿಐ ಅಧಿಕಾರಿಗಳು ತಮ್ಮ ಪಾತ್ರಗಳಲ್ಲಿ ಮುಂದುವರಿಯಲಿದ್ದಾರೆ. ಏಕೆಂದರೆ ಅವರು ಅಧಿಕಾರವಧಿ ಇನ್ನೂ ಒಂದು ವರ್ಷ ಉಳಿದಿದೆ.

ಭಾರತದ ಐದನೇ ಕ್ರಿಕೆಟ್ ಬಾಸ್

ಇದುವರೆಗೆ ನಾಲ್ವರು ಭಾರತೀಯರು ಐಸಿಸಿ ಮುಖ್ಯಸ್ಥರ ಹುದ್ದೆ ಅಲಂಕರಿಸಿದ್ದಾರೆ. ಜಗಮೋಹನ್ ದಾಲ್ಮಿಯಾ (1997-2000), ಶರದ್ ಪವಾರ್ (2010-2012), ಎನ್ ಶ್ರೀನಿವಾಸನ್ (2014-15) ಮತ್ತು ಶಶಾಂಕ್ ಮನೋಹರ್ (2015-2020) ಐಸಿಸಿ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದಾರೆ. ಇದೀಗ ಭಾರತದ ಐದನೇ ಐಸಿಸಿ ಅಧ್ಯಕ್ಷರಾಗಿ ಜಯ್ ಶಾ ಅಧಿಕಾರ ಚುಕ್ಕಾಣಿ ಹಿಡಿಯಲಿದ್ದಾರೆ.

Story first published: Monday, September 2, 2024, 18:25 [IST]
Other articles published on Sep 2, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+