For Quick Alerts
ALLOW NOTIFICATIONS  
For Daily Alerts
 

ISL Final 2025: ಫೈನಲ್‌ನಲ್ಲಿ ಸೋಲು ಕಂಡ ಬೆಂಗಳೂರು ಎಫ್‌ಸಿ: ಮೋಹನ್ ಬಗಾನ್ ಚಾಂಪಿಯನ್

ಇಂಡೀಯನ್ ಸೂಪರ್ ಲೀಗ್‌ನ ಫೈನಲ್‌ ಪಂದ್ಯ ಮೋಹನ್ ಬಗಾನ್‌ ಹಾಗೂ ಬೆಂಗಳೂರು ಫುಟ್ಬಾಲ್‌ ತಂಡಗಳ ನಡುವೆ ನಡೆಯಿತು. ಸಾಲ್ಟ್‌ ಲೇಕ್‌ ಸ್ಟೇಡಿಯಂನಲ್ಲಿ ಅಭಿಮಾನಿಗಳ ಸಮ್ಮುಖದಲ್ಲಿ ಭರ್ಜರಿ ಪ್ರದರ್ಶನ ನೀಡಿದ ಮೋಹನ್ ಬಗಾನ್‌ ತಂಡ ಗೆಲುವು ದಾಖಲಿಸಿತು. ಪ್ರಶಸ್ತಿ ಸುತ್ತಿನ ಕಾದಾಟದಲ್ಲಿ ಬೆಂಗಳೂರು ತಂಡ 1-2 ಗೋಲುಗಳಿಂದ ಮೋಹನ್ ಬಗಾನ್‌ ತಂಡದ ವಿರುದ್ಧ ಸೋಲು ಕಂಡಿತು. ಕೊನೆಯ ಕ್ಷಣದಲ್ಲಿ ರಕ್ಷಣಾ ವಿಭಾಗದಲ್ಲಿ ಮಾಡಿದ ತಪ್ಪು ಬೆಂಗಳೂರು ತಂಡಕ್ಕೆ ಪೆಟ್ಟು ನೀಡಿತು.

ಐಎಸ್‌ಎಲ್‌ ಫುಟ್ಬಾಲ್‌ ಲೀಗ್‌ ಚಾಂಪಿಯನ್ ಪಟ್ಟಕ್ಕೆ ನಡೆದ ಪಂದ್ಯದಲ್ಲಿ ಉಭಯ ತಂಡಗಳು ಆರಂಭದಲ್ಲಿ ಭರ್ಜರಿ ಪ್ರದರ್ಶನ ನೀಡಿದವು. ಈ ವೇಳೆ ಬೆಂಗಳೂರು ತಂಡ ಸಿಕ್ಕ ಅವಕಾಶವನ್ನು ಬಳಸಿಕೊಳ್ಳುವಲ್ಲಿ ವಿಫಲವಾದವು. ಈ ಹಂತದಲ್ಲಿ ಎರಡೂ ತಂಡಗಳ ರಕ್ಷಣಾತ್ಮಕ ಆಟದ ಪ್ರದರ್ಶನ ನೀಡಿದವು. ಈ ವೇಳೆ ಬೆಂಗಳೂರು ತಂಡ ಯಾವುದೇ ಗೋಲನ್ನು ದಾಖಲಿಸಲಿಲ್ಲ. ಅಲ್ಲದೆ ಯಾವುದೇ ಗೋಲನ್ನು ಮೋಹನ್ ಬಗಾನ್‌ ತಂಡಕ್ಕೆ ನೀಡಲಿಲ್ಲ.

Mohun Bagan Clinches ISL Title with 2-1 Win Over Bengaluru FC in Thrilling Final

ಆದರೆ ಎರಡನೇ ಹಂತದಲ್ಲಿ ಉಭಯ ತಂಡಗಳು ಆಕ್ರಮಣಕಾರಿ ಆಟದ ಪ್ರದರ್ಶನ ನೀಡಿ ಗೋಲನ್ನು ಬಾರಿಸುವ ಕನಸು ಕಂಡಿದ್ದ ಎರಡೂ ತಂಡಗಳು ಅಬ್ಬರಿಸಿದವು. ಈ ಅವಧಿಯ ಆರಂಭದಲ್ಲಿ ಬೆಂಗಳೂರು ಗೋಲು ಪೆಟ್ಟಿಗೆಯಲ್ಲಿ ಮೊದಲ ಅಂಕ ದಾಖಲಿಸಿತು. ಆದರೆ ಈ ಗೋಲು ಬೆಂಗಳೂರು ತಂಡದ ಆಟಗಾರರಿಂದ ಬರಲಿಲ್ಲ. ಆದರೆ ಎದುರಾಳಿ ತಂಡದ ಮಾಡಿದ ತಪ್ಪಿನಿಂದ ಬಂದಿತು. ಈ ವೇಳೆ ಮೋಹನ್ ಬಗಾನ್‌ ಬೆಂಗಳೂರು ತಂಡಕ್ಕೆ ಉಡುಗೊರೆ ಗೋಲು ನೀಡಿತು.

ಸಮಬಲದ ಹೋರಾಟ

ಎರಡನೇ ಅವಧಿಯಲ್ಲಿ ಮೋಹನ್‌ ಬಗನ್‌ ಅಮೋಘ ಆಟದ ಪ್ರದರ್ಶನ ನೀಡಿ ಅಬ್ಬರಿಸಿತು. ಈ ಅವಧಿಯಲ್ಲಿ ಬೆಂಗಳೂರು ತಂಡದ ಮಾಡಿದ ತಪ್ಪಿನಿಂದ, ಮೋಹನ್ ತಂಡಕ್ಕೆ ಪೆನಾಲ್ಟಿ ಅವಕಾಶ ಸಿಕ್ಕಿತು. ಪರಿಣಾಮ ಜೇಸನ್ ಕಮ್ಮಿಂಗ್ಸ್ ಈ ಅವಕಾಶ ಬಳಸಿಕೊಂಡು ಅಬ್ಬರಿಸಿತು. ಈ ಮೂಲಕ ಉಭಯ ತಂಡಗಳು ಸಮಬಲದ ಸಾಧನೆ ಮಾಡಿತು.

Mohun Bagan Clinches ISL Title with 2-1 Win Over Bengaluru FC in Thrilling Final

ಈ ಅವಧಿಯ ಕೊನೆಯ ಕ್ಷಣದ ವರೆಗೂ ಬೆಂಗಳೂರು ತಂಡ ಗೋಲು ಬಾರಿಸುವ ಯೋಜನೆ ಫಲಿಸಲಿಲ್ಲ. ಈ ಅವಧಿಯಲ್ಲಿ ಉಭಯ ತಂಡಗಳು ಸಮಬಲದ ಹೋರಾಟ ನೀಡಿದವು. ಇನ್ನು ಪಂದ್ಯ ಹೆಚ್ಚುವರಿ ಸಮಯದತ್ತ ಮುಖ ಮಾಡಿತು. ಈ ವೇಳೆ ಮೋಹನ್‌ ಬಗಾನ್ ಪರ ಜೇಮೀ ಮ್ಯಾಕ್ಲಾರೆನ್ ಉತ್ತಮ ಆಟದ ಪ್ರದರ್ಶನ ನೀಡಿ ಗೋಲು ಸಾಧಿಸಿದರು. ಇದು ತಂಡದ ಮುನ್ನಡೆಗೆ ಸಾಕಾಯಿತು.

ಪಂದ್ಯದ ಕೊನೆಯ ಕ್ಷಣದವರೆಗೂ ಅಮೋಘ ರಕ್ಷಣಾ ಆಟದ ಪ್ರದರ್ಶನ ನೀಡಿದ ಮೋಹನ್ ಬಗಾನ್‌ ಬೆಂಗಳೂರು ತಂಡಕ್ಕೆ ಚೆಂಡಿನ ಮೇಲೆ ನಿಯಂತ್ರಣ ಸಾಧಿಸಲು ಬಿಡಲೇ ಇಲ್ಲ. ಪರಿಣಾಮ ಫೈನಲ್‌ನಲ್ಲಿ ಸೋಲು ಕಂಡಿತು. ತವರಿನ ಅಭಿಮಾನಿಗಳ ಸಮ್ಮುಖದಲ್ಲಿ ಅಮೋಘ ಪ್ರದರ್ಶನ ನೀಡಿದ ಮೋಹನ್ ಬಗಾನ್‌ ತಂಡ, ಗೆಲ್ಲುತ್ತಿದ್ದಂತೆ ಮೈದಾನದಲ್ಲಿ ಸಂಚಲನ ಮೂಡಿತು.

Story first published: Saturday, April 12, 2025, 22:16 [IST]
Other articles published on Apr 12, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+