For Quick Alerts
ALLOW NOTIFICATIONS  
For Daily Alerts
 

ಆ ಒಬ್ಬ ಆಟಗಾರನ ಉಪಸ್ಥಿತಿ ಟೀಮ್ ಇಂಡಿಯಾಗೆ ಈ ವಿಶ್ವಕಪ್‌ನಲ್ಲಿ ಅತಿ ದೊಡ್ಡ ಬಲ: ಮಾಂಟಿ ಪನೆಸರ್

ವಿಶ್ವಕಪ್ ಟೂರ್ನಿ ಆರಂಭವಾಗಿದ್ದು ಎಲ್ಲಾ ತಂಡಗಳು ತಮ್ಮ ಮೊದಲ ಪಂದ್ಯಗಳನ್ನು ಪ್ರಸ್ತುತ ಆಡುತ್ತಿವೆ. ಟೀಮ್ ಇಂಡಿಯಾ ಭಾನುವಾರ ತಮ್ಮ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವನ್ನು ಎದುರಿಸಲಿದ್ದು ಚೆನ್ನೈನ ಚೆಪಾಕ್ ಕ್ರೀಡಾಂಗಣ ಈ ಮುಖಾಮುಖಿಗೆ ಆತಿಥ್ಯ ವಹಿಸಲಿದೆ. ಈ ಸಂದರ್ಭದಲ್ಲಿ ಟೀಮ್ ಇಂಡಿಯಾ ವಿಚಾರವಾಗಿ ಇಂಗ್ಲೆಂಡ್ ತಂಡದ ಮಾಜಿ ಆಟಗಾರ ಮ,ಆಂಟಿ ಪನೆಸರ್ ಕುತೂಹಲಕಾರಿ ಅಭಿಪ್ರಾಯವೊಂದನ್ನು ವ್ಯಕ್ತಪಡಿಸಿದ್ದಾರೆ.

ಈ ಬಾರಿಯ ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾ ಬಳಗಕ್ಕೆ ಅನುಭವಿ ಆಟಗಾರ ವಿರಾಟ್ ಕೊಹ್ಲಿ ಅವರ ಉಪಸ್ಥಿತಿ ಬಹಳ ದೊಡ್ಡ ಬಲ ನೀಡಲಿದೆ ಎಂದಿದ್ದಾರೆ ಮಾಂಟಿ ಪನೆಸರ್. ವಿರಾಟ್ ಕೊಹ್ಲಿ ಅವರ ವಿಶ್ವಕಪ್ ಪ್ರಯಾಣ 2011ರಲ್ಲಿ ಆರಂಭ ಗೊಂಡಿದ್ದು ಭಾರತ ವಿಶ್ವಕಪ್ ಗೆದ್ದ ಆ ತಂಡದ ಎರಡನೇ ಅತಿ ಕಿರಿಯ ಆಟಗಾರ ಎನಿಸಿಕೊಂಡಿದ್ದರು ಕೊಹ್ಲಿ.

Monty Panesar praises Indian legend said his presence going to be huge for India in World cup

ಈವರೆಗೆ ವಿರಾಟ್ ಕೊಹ್ಲಿ 26 ವಿಶ್ವಕಪ್ ಪಂದ್ಯಗಳನ್ನು ಆಡಿದ್ದು ಒಟ್ಟು 1030 ರನ್‌ಗಳನ್ನು ಗಳಿಸಿದ್ದಾರೆ. ಏಕದಿನ ವಿಶ್ವಕಪ್‌ನಲ್ಲಿ ಅವರ ಅತಿ ಹೆಚ್ಚಿ ಸ್ಕೋರ್ 107 ರನ್ ಆಗಿದೆ. ಇನ್ನು 2019ರ ವಿಶ್ವಕಪ್‌ನಲ್ಲಿ ವಿರಾಟ್ ಕೊಹ್ಲಿ ಸತತ ಐದು ಅರ್ಧ ಶತಕ ಸಿಡಿಸಿದ ಸಾಧನೆ ಕೂಡ ಮಾಡಿದ್ದರು ಎನ್ನುವುದು ಗಮನಾರ್ಹ. ಇನ್ನು ಈ ವರ್ಷ ವಿರಾಟ್ ಕೊಹ್ಲಿ ಅದ್ಭುತವಾದ ಲಯದಲ್ಲಿರುವುದು ಸ್ಪಷ್ಟವಾಗಿದೆ. ಈ ಕ್ಯಾಲೆಂಡರ್ ವರ್ಷದಲ್ಲಿ ವಿರಾಟ್ ಕೊಹ್ಲಿ 16 ಏಕದಿನ ಪಂದ್ಯಗಳನ್ನು ಆಡಿದ್ದು 55.63ರ ಸರಾಸರಿಯಲ್ಲಿ 612 ರನ್ ಗಳಿಸಿದ್ದಾರೆ.

ಇಂಗ್ಲೆಂಡ್ ಮಾಜಿ ಸ್ಪಿನ್ನರ್ ಮಾಂಟಿ ಪನೇಸರ್ ಟೀಮ್ ಇಂಡಿಯಾದ ಅನುಭವಿ ಆಟಗಾರನ ಮೇಲೆ ದೊಡ್ಡ ನಿರೀಕ್ಷೆ ವ್ಯಕ್ತಪಡಿಸಿದ್ದಾರೆ. ಸ್ಟಾರ್ ಆಟಗಾರನ ಉಪಸ್ಥಿತಿ ತಂಡಕ್ಕೆ ದೊಡ್ಡ ಶಕ್ತಿ ತುಂಬಲಿದೆ ಎಂದಿದ್ದಾರೆ ಪನೆಸರ್. "ಭಾರತ ತಂಡಕ್ಕೆ ವಿರಾಟ್ ಕೊಹ್ಲಿ ಅವರ ಉಪಸ್ಥಿತಿಯೇ ದೊಡ್ಡ ಬಲ ನೀಡಲಿದೆ. ಬ್ಯಾಟಿಂಗ್, ಇಂಟೆನ್ಸಿಟಿ ಹಾಗೂ ಓಟದ ವಿಚಾರಕ್ಕೆ ಬಂದರೆ ಅವರು ಟ್ರೆಂಡನ್ನೇ ಸೃಷ್ಟಿಸಿದ್ದಾರೆ. ಅವರು ಮೈದಾನದ ಆಗುಹೋಗುಗಳನ್ನು ಅದ್ಭುತವಾಗಿ ಅರ್ಥ ಮಾಡಿಕೊಳ್ಳುತ್ತಾರೆ. ಅಂಥಾ ಸಂದರ್ಭದಲ್ಲಿ ಇಡೀ ತಂಡವನ್ನು ಒಗ್ಗೂಡಿಸಿ ಅವರು "ಇದು ಗೆಲುವಿನ ಕ್ಷಣ, ಇದನ್ನು ಬಳಸಿಕೊಳ್ಳಿ" ಎಂದು ಸೂಚನೆ ನೀಡುತ್ತಾರೆ' ಎಂದು ಮಾಂಟಿ ಪನೆಸರ್ ಹೇಳಿಕೆ ನೀಡಿದ್ದಾರೆ.

"ಸರಿಯಾದ ಸಮಯದಲ್ಲಿ ಕೊಹ್ಲಿ ತಮ್ಮ ಅತ್ಯುತ್ತಮ ಫಾರ್ಮ್‌ನಲ್ಲಿದ್ದಾರೆ. ಕಳೆದ ವರ್ಷದ ಟಿ20 ವಿಶ್ವಕಪ್‌ನಲ್ಲಿ ಗ್ರೂಪ್ ಹಂತದ ಆರಂಭದಲ್ಲಿಯೇ ಅವರು ಅತ್ಯುತ್ತಮ ಫಾರ್ಮ್‌ನಲ್ಲಿದ್ದರು. ಗ್ರೂಪ್ ಹಂತದ ಅಂತಿಮ ಪಂದ್ಯದಲ್ಲಿ ಅವರು ಪಾಕಿಸ್ತಾನದ ವಿರುದ್ಧ ಅದ್ಭುತವಾದ ಇನ್ನಿಂಗ್ಸ್ ಆಡಿದ್ದರು. ಈ ಬಾರಿ ಅವರು ಅಂಥಾ ಪ್ರದರ್ಶನವನ್ನು ಫೈನಲ್‌ಗೆ ಅಥವಾ ಸೆಮಿಫೈನಲ್‌ಗೆ ಉಳಿಸಿಕೊಳ್ಳುತ್ತಾರೆ ಎಂದು ನಾನು ಭಾವಿಸುತ್ತೇನೆ" ಎಂದು ಪನೇಸರ್ ಹೇಳಿದ್ದಾರೆ.

ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ವಿಕೆಟ್ ಕೀಪರ್), ಇಶಾನ್ ಕಿಶನ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಕುಲದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಮೊಹಮ್ಮದ್ ಶಮಿ, ಸೂರ್ಯಕುಮಾರ್ ಯಾದವ್, ಶಾರ್ದೂಲ್ ಠಾಕೂರ್, ಶುಭಮನ್ ಗಿಲ್

ಆಸ್ಟ್ರೇಲಿಯಾ ತಂಡ: ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್), ಪ್ಯಾಟ್ ಕಮ್ಮಿನ್ಸ್ (ನಾಯಕ), ಡೇವಿಡ್ ವಾರ್ನರ್, ಮಿಚೆಲ್ ಮಾರ್ಷ್, ಸ್ಟೀವನ್ ಸ್ಮಿತ್, ಮಾರ್ನಸ್ ಲ್ಯಾಬುಶೇನ್, ಗ್ಲೆನ್ ಮ್ಯಾಕ್ಸ್‌ವೆಲ್, ಕ್ಯಾಮರೂನ್ ಗ್ರೀನ್, ಮಿಚೆಲ್ ಸ್ಟಾರ್ಕ್, ಆಡಮ್ ಝಂಪಾ, ಜೋಶ್ ಹ್ಯಾಜಲ್‌ವುಡ್, ಸೀನ್ ಅಬಾಟ್, ಟ್ರಾವಿಸ್ ಹೆಡ್, ಮಾರ್ಕಸ್ ಸ್ಟೊಯಿನಿಸ್, ಜೋಶ್ ಇಂಗ್ಲಿಸ್

Story first published: Sunday, October 8, 2023, 10:20 [IST]
Other articles published on Oct 8, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+