Morne Morkel: ಪಾಕಿಸ್ತಾನ ತಂಡದಲ್ಲಿ ಟೀಮ್ ಇಂಡಿಯಾ ಬೌಲಿಂಗ್ ಕೋಚ್ ಅವಮಾನ ಎದುರಿಸಿದ್ರಾ?
ದಕ್ಷಿಣ ಆಫ್ರಿಕಾದ ಮಾಜಿ ವೇಗದ ಬೌಲರ್ ಮೊರ್ನೆ ಮೊರ್ಕೆಲ್ ಇದೀಗ ಭಾರತ ತಂಡದ ಬೌಲಿಂಗ್ ಕೋಚ್ ಆಗಿ ದೊಡ್ಡ ಜವಾಬ್ದಾರಿಯನ್ನು ಹೊತ್ತಿಕೊಂಡಿದ್ದಾರೆ . ಚೆನ್ನೈನ ಚೆಪಾಕ್ ಸ್ಟೇಡಿಯಂನಲ್ಲಿ ನಡೆದ ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಮೊರ್ನೆ ಮೊರ್ಕೆಲ್ ಅವರ ಮಾರ್ಗದರ್ಶನದಲ್ಲಿ ಟೀಮ್ ಇಂಡಿಯಾ ಬೌಲರ್‌ಗಳು ಅದ್ಭುತ ಪ್ರದರ್ಶನ ನೀಡಿದ್ದಾರೆ. ಬಾಂಗ್ಲಾದೇಶದ ಬ್ಯಾಟಿಂಗ್ ಲೈನ್ ಅಪ್ ಅನ್ನು ಟೀಮ್ ಇಂಡಿಯಾ ಬೌಲರ್‌ಗಳು ಧೂಳಿಪಟ ಮಾಡಿದರು.
ಮೊರ್ಕೆಲ್ ಅವರು ಟೀಮ್ ಇಂಡಿಯಾ ಸೇರುವ ಮೊದಲು ಪಾಕಿಸ್ತಾನ ತಂಡದ ಬೌಲಿಂಗ್ ಕೋಚ್ ಆಗಿದ್ದರು . ಅವರು ಕಳೆದ ವರ್ಷ ಜೂನ್‌ನಲ್ಲಿ ಬೌಲಿಂಗ್ ತರಬೇತುದಾರರಾಗಿ ತಂಡವನ್ನು ಸೇರಿಕೊಂಡಿದ್ದರು. ಆದರೆ 2023ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ ಕಳಪೆ ಪ್ರದರ್ಶನದಿಂದಾಗಿ ಗುಂಪು ಹಂತದಿಂದ ಹೊರಬಿದ್ದಿತ್ತು. ಇದಾದ ನಂತರ ಮೊರ್ನೆ ಮೊರ್ಕೆಲ್ ಅವರನ್ನು ಕೋಚ್ ಹುದ್ದೆಯಿಂದ ಕೆಳಗಿಳಿಸಲಾಗಿತ್ತು.

ಇದೀಗ ಪಾಕಿಸ್ತಾನ ತಂಡದ ಆಟಗಾರರು ಮೊರ್ನೆ ಮೊರ್ಕೆಲ್ ಜೊತೆಗೆ ಹೇಗೆ ನಡೆದುಕೊಂಡರು ಎಂಬುದು ಹೊರಬಿದ್ದಿದ್ದು, ಪಾಕಿಸ್ತಾನದ ಬೌಲರ್‌ಗಳು ನನ್ನನ್ನು ಬೌಲಿಂಗ್ ಕೋಚ್ ಆಗಿ ಪರಿಗಣಿಸಿರಲಿಲ್ಲ ಎಂಬ ವಿಚಾರವನ್ನು ಮಾಜಿ ಕ್ರಿಕೆಟಿಗ ಬಸಿತ್ ಅಲಿ ಬಹಿರಂಗಪಡಿಸಿದ್ದಾರೆ.
ಬಸಿತ್ ಅಲಿ ಹೇಳಿದ್ದೇನು?
ಪಾಕಿಸ್ತಾನ ತಂಡದಲ್ಲಿ ಮೊರ್ನೆ ಮೊರ್ಕೆಲ್ ಅವರನ್ನು ಹೇಗೆ ನಡೆಸಿಕೊಳ್ಳಲಾಯಿತು ಎಂಬುದರ ಬಗ್ಗೆ ಬಸಿತ್ ಅಲಿ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ್ದಾರೆ. 'ಮೊರ್ಕೆಲ್ ಪಾಕಿಸ್ತಾನ ತಂಡದ ತರಬೇತುದಾರರಾಗಿದ್ದಾಗ ಅವರನ್ನು ಕಡಿಮೆ ಅಂದಾಜು ಮಾಡಿದ್ದರು. ಅವರನ್ನು ಪಾಕಿಸ್ತಾನ ಬೌಲರ್‌ಗಳು ಅರ್ಥಮಾಡಿಕೊಳ್ಳಲಿಲ್ಲ . ತಂಡದಲ್ಲಿದ ಬೌಲರ್‌ಗಳು ತಮ್ಮನ್ನು ಕ್ರಿಕೆಟ್‌ಗಿಂತ ದೊಡ್ಡವರು ಎಂದು ಕೊಂಡರು. ಮೊರ್ಕೆಲ್ ನಮ್ಮ ಮುಂದೆ ಏನೂ ಅಲ್ಲ ಎಂಬ ಮನಸ್ಥಿತಿಯಲ್ಲಿ ಬೌಲರ್‌ಗಳಿದ್ದರು' ಎಂದು ಹೇಳಿದ್ದಾರೆ.
ನಂಬಿಕೆ ಉಳಿಸಿಕೊಂಡ ಮೊರ್ಕೆಲ್
ಚೆನ್ನೈನಲ್ಲಿ ಭಾರತ ತಂಡವು ಬಾಂಗ್ಲಾದೇಶದ ವಿರುದ್ಧ ಆಡಿದ ಮೊದಲ ಟೆಸ್ಟ್ ಪಂದ್ಯವನ್ನು ಒಂದು ದಿನ ಬಾಕಿ ಇರುವಂತೆ ಗೆದ್ದಿತ್ತು. ಸ್ಟಾರ್ ಬೌಲರ್‌ಗಳಿಂದ ಕಂಗೊಳಿಸುತ್ತಿದ್ದ ಟೀಮ್ ಇಂಡಿಯಾದ ಅಮೋಘ ಪ್ರದರ್ಶನದ ಫಲವಾಗಿ 280 ರನ್ ಗಳ ಸುಲಭ ಜಯ ಸಾಧಿಸಿತು. ಈ ಗೆಲುವು ಟೀಮ್ ಇಂಡಿಯಾದ ಐತಿಹಾಸಿಕ ದಾಖಲೆಗೆ ಸಾಕ್ಷಿಯಾಯಿತು. ಇದರೊಂದಿಗೆ ಟೀಮ್ ಇಂಡಿಯಾದ ಬೌಲಿಂಗ್ ಕೋಚ್ ಆಗಿ ಅಧಿಕಾರ ವಹಿಸಿಕೊಂಡ ಮೊದಲ ಪಂದ್ಯದಲ್ಲೇ ಮಾರ್ಕೆಲ್ ನಂಬಿಕೆಯನ್ನು ಉಳಿಸಿಕೊಂಡಿದ್ದಾರೆ.
ಮೊದಲ ಇನ್ನಿಂಗ್ಸ್‌ನಲ್ಲಿ ಟೀಮ್ ಇಂಡಿಯಾದ ವೇಗದ ಬೌಲರ್‌ಗಳಾದ ಜಸ್ಪ್ರೀತ್ ಬುಮ್ರಾ (4/50), ಮೊಹಮ್ಮದ್ ಸಿರಾಜ್ (2/30) ಮತ್ತು ಆಕಾಶ್ ದೀಪ್ (2/19) ಅವರು ಬಾಂಗ್ಲಾದೇಶದ ಬ್ಯಾಟರ್‌ಗಳನ್ನು ಕಟ್ಟಿ ಹಾಕುವ ಮೂಲಕ 149 ರನ್‌ಗಳಿಗೆ ಆಲೌಟ್ ಮಾಡಿದರು. ನಂತರ ಎರಡನೇ ಇನ್ನಿಂಗ್ಸ್‌ನಲ್ಲಿ ಸ್ಟಾರ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ (6/88) ಮತ್ತು ರವೀಂದ್ರ ಜಡೇಜಾ (3/58) ಬಾಂಗ್ಲಾದೇಶ ತಂಡದ ಗೆಲುವಿಗೆ ತಮ್ಮ ಸ್ಪಿನ್ ಬೌಲಿಂಗ್ ಮೂಲಕ ಬ್ರೇಕ್ ಹಾಕಿ ತಂಡಕ್ಕೆ ಅದ್ಭುತ ಜಯವನ್ನು ತಂದುಕೊಟ್ಟರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications